The Annual Mysore Association Golden Jubilee Endowment Lecture series, held on 24th, and 25th Feb, 2018 at Mumbai !

As per the program schedule, Dr. Gururaj karjagi, was supposed to talk on 24th Sat, 2018. Since he was unable to come, Dr. Jayaram rao, spoke on both the days.

151961977226390195.gif

ಎರಡನೆಯ ದಿನದ ಗಮಕದ ವೈವಿಧ್ಯತೆಗಳನ್ನು ನಿರೂಪಿಸುವಾಗ ಡಾ. ಜಯರಾಮರಾಯರು, ಕುಳಿತುಕೊಂಡೇ ತಮ್ಮ ಭಾಷಣವನ್ನು ಪ್ರಸ್ತುತಪಡಿಸಿದರು.

jairam rao

 

This slideshow requires JavaScript.

Every year, this lecture is being organised jointly with the Mumbai University Kannada Division, and The Mysore Association.

(Second day,  Sunday, Feb, 2018)

(First day, Saturday, Feb, 2018)

Link :    https://photos.google.com/search/_tv_Videos/photo/AF1QipNhOXMv-R3IefiYTZe9D6Q2MIXy3fUEBd6Fyoca

ಈ ವರ್ಷದ ಭಾಷಣಕಾರರು, ಬೆಂಗಳೂರಿನಿಂದ ಆಗಮಿಸಿದ ೮೧ ವರ್ಷ ವಯಸ್ಸಿನಡಾ. ಶ್ರೀ. ಜಯರಾಮ್ ರಾಯರು. ಇವರು, ಮೂಲತಃ ಪತ್ರಿಕಾಕಾರರು  ವಿದ್ವಾಂಸರು, ಗಮಕಿಗಳು, ಚಿಂತಕರು, ಹಾಗೂ ವ್ಯಾಖ್ಯಾನಕಾರರು. ವೃತ್ತಿಯಜೊತೆಗೇ ಹಲವಾರು ಪ್ರವೃತ್ತಿಗಳನ್ನು ಜೈರಾಮ್ ರಾಯರು ಉತ್ತಮಗೊಳಸಿಕೊಂಡರು. ಆವರು ಗಮಕ ಕಲೆಯನ್ನು ತಮ್ಮ ತಂದೆಯವರಿಂದ ಬಳುವಳಿಯಾಗಿ ಪಡೆದರು.  ಕಲೆಯಲ್ಲಿ ಪ್ರಾವೀಣ್ಯತೆಯನ್ನು ಬೆಳೆಸಿಕೊಂಡು ಎತ್ತರಕ್ಕೆ ಬೆಳೆದರು.

ಮುಂಬಯಿನಗರದಲ್ಲಿ :

60 ರ ದಶಕದಲ್ಲಿ ಮುಂಬಯಿಗೆ ಬಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸೇರಿಕೊಂಡರು. ಆಗ ಮುಂಬಯಿನಲ್ಲಿ ಹೆಸರಾಂತ ಪತ್ರಿಕಾ ಸಂಪಾದಕರಾದ ಶ್ರೀ. ಆರ್. ವೆಂಕಟೇಶಮೂರ್ತಿಗಳು, ಹಾಗೂ ಅವರ ಜೊತೆಯಲ್ಲಿದ್ದ ಇತರ ಕನ್ನಡಿಗರು,ಶ್ರೀ ನಾರಾಯಣ ಸ್ವಾಮಿ, ಮೊದಲಾದ ವ್ಯಕ್ತಿಗಳ ಪರಿಚಯವಾಯಿತು. ಮೈಸೂರ್ ಅಸೋಸಿಯೇಷನ್ ನಲ್ಲಿ ಸದಸ್ಯರಾದರು. ಸುಮಾರು ೧೧ ವರ್ಷ ಮುಂಬಯಿನಲ್ಲಿ ವಾಸವಾಗಿದ್ದರು. ನಂತರ, ನಾಗಪುರ, ಭಿಲಾಯ್, ಹಾಂಕಾಂಗ್ ನಗರಗಳಿಗೆ ಹೋಗುವ ಅವಕಾಶ ಸಿಕ್ಕಿತು.  

ಮುಂದೆ ಅವರನ್ನು ವ್ಯಾಖ್ಯಾನಕಾರ, ಚಿಂತಕ, ವಿದ್ವಾಂಸರೆಂದು ಜನಗಳು ಗುರುತಿಸಿ ಗೌರವಿಸಲಾರಂಭಿಸಿದರು. ಗಮಕ ವಿದ್ವಾನ್ ಎಂ. ಎ. ಜಯರಾಮ್ ರಾವ್ (ಮೈಸೂರು ಶೇ. ಅನಂತ ಪದ್ಮನಾಭ ರಾವ್, ರವರ ಪುತ್ರರು) ತಮ್ಮ ಪಾರಂಪರ್ಯವಾಗಿ ಬಂದಿರುವ ಪರಿವಾರದ ಗಮಕ ಕಲೆ ವಚನ/ವ್ಯಾಖ್ಯಾನವನ್ನು ಪ್ರಧಾನವಾಗಿ ತಮ್ಮಲ್ಲಿ ತೊಡಗಿಸಿಕೊಂಡರೂ, ಸಂಗೀತ ಸಾಹಿತ್ಯ ಕ್ಷೇತ್ರಗಳಲ್ಲಿಯೂ ಅಪಾರ ವಿದ್ವತ್ತನ್ನು ಹೊಂದಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯ (Sr.Grade in Karnataka Classical Music-1958)  ನಂತರ ಅವರು ಕಲಿತದ್ದು ಹಾಗೂ ಸಾಧಿಸಿದ್ದು ಅಪಾರ. (Learnt Gamaka recitation art, from father  smd C.N. Shashthry, and Y. N. Sreenivasamurthy in music. Dr. H. K. Ranganath & Gudibande B. S. Ramachar guided in light music)

This slideshow requires JavaScript.

20180224_171928

20180224_173822

ವೇದಿಕೆಯಮೇಲಿದ್ದ ಅಸೋಸಿಯೇಷನ್ ಅಧ್ಯಕ್ಷೆ, ಶ್ರೀಮತಿ. ಕಮಲಾರವರು, ಡಾ. ಜಯರಾಮರಾಯರು ವಿರಚಿತ, “ಮಹಾಭಾರತದ ಕರ್ಣ” ಕೃತಿಯನ್ನು ಬಿಡುಗಡೆ ಮಾಡಿದರು.

20180224_173822

ಜಯರಾಮ್ ರಾವ್ ಪ್ರಾರಂಭದಲ್ಲಿ ಪತ್ರಿಕಾಕರ್ತರಾಗಿ, (ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ) ಬಾಲ್ಯದಿಂದ ಬಂದ ಗಮಕ ಕಲೆಯನ್ನುತಮ್ಮದಾಗಿಸಿಕೊಂಡು ಅದರ ಪ್ರಸಾರದಲ್ಲಿ ೬೭ ವರ್ಷಗಳ ಸುದೀರ್ಘ ಅನುಭವವನ್ನು ಗಳಿಸಿದ್ದಾರೆ.
ಇದಲ್ಲದೆ, ಸುಗಮ ಸಂಗೀತ, ನಾಟಕ ಕ್ಷೇತ್ರದಲ್ಲೂ ಸಾಕಷ್ಟು ಪರಿಶ್ರಮಗಳಿಸಿದ್ದಾರೆ. ತಮ್ಮ ಪತ್ರಿಕಾ ಜೀವನದಲ್ಲಿ ಮುಂಬಯಿನಗರದ ಬಳಿಕ, ಅಹಮದಾಬಾದ್, ಭಿಲಾಯ್ ನಾಗ್ಪುರ, ಭೂಪಾಲ್ ನಗರಗಳಲ್ಲಿಹಾಗೂ ಹಾಂಕಾಂಗ್ ನಗರದಲ್ಲಿ ತೃಪ್ತಿಕರ ವಾಚನ/ವ್ಯಾಖ್ಯಾನಗಳನ್ನು ನೀಡಿದ್ದಾರೆ. ಸೊಗಸಾಗಿ ವಾಚನಮಾಡುವುದರ ಜೊತೆಗೆ ವ್ಯಾಖ್ಯಾನವನ್ನು ಮಾಡುತ್ತಿರುವುದು ಇವರ ಹೆಚ್ಚುಗಾರಿಕೆ. 

೧೯೫೦ ರಲ್ಲಿ :

ಪತ್ರಿಕಾಕಾರರಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪಾದಾರ್ಪಣೆ.
ಅನೇಕ ಸಲ ಮುಂಬಯಿಗೆ ಬಂದಾಗ ಎಚ್. ಬಿ. ಎಲ್. ರಾವ್ ಜೊತೆ ಸಂಪರ್ಕ, ‘ಮನೆಮನೆಯಲ್ಲಿ ಗಮಕ’ವೆಂಬ ಗಮಕಕಲೆಯ ಹಲವಾರು ಕಮ್ಮಟಗಳನ್ನು ಸ್ಮರಿಸಿಕೊಂಡರು. 
೧೯೬೦ ರಲ್ಲಿ ಮುಂಬಯಿನ ಕುರ್ಲಾದಿಂದ ವಿ.ಟಿ.ಸ್ಟೇಷನ್ ಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುವಾಗ, ಗಾಡಿಯಲ್ಲೇ ಹಲವಾರು ಗಮಕ ಪದ್ಯಗಳನ್ನು ಅಭ್ಯಾಸಮಾಡುತ್ತಿದ್ದ ವಿಷಯವನ್ನು ಸಭಿಕರ ಮುಂದೆ ಹಂಚಿಕೊಂಡರು. ‘ಕೊಲಂಬಿಯಾ ಧ್ವನಿ ಸುರಳಿ ಕಂಪೆನಿ’ಯವರು ರಚಿಸಿದ “ದ್ರೌಪದಿಯ ಮಾನ ಸಂರಕ್ಷಣೆ” ಎನ್ನುವ ಹಾಡನ್ನು ಹಾಡಿನ ನಾಗಮ್ಮನವರು ಹಾಡಿದ್ದರು. ಎನ್ನುವ ವಿಷಯವನ್ನು ನೆನೆಸಿಕೊಂಡರು.

ಗಮಕ ಕಲೆ ನಡೆದುಬಂದ ದಾರಿ : 

ರಾಮಾಯಣದಲ್ಲಿ ೨೪ ಸಹಸ್ರ ಶ್ಲೋಕಗಳ ರಚಿಸಿದ ಮಹರ್ಷಿ ವಾಲ್ಮೀಕಿಗಳಾದರೆ, ಲವ-ಕುಶರು ನಿಜವಾಗಿ ಆದಿಗಮಕಿಗಳ ಪಂಕ್ತಿಯಲ್ಲಿ ಅಗ್ರಸ್ಥಾನ ಗಳಿಸುತ್ತಾರೆ, ಎನ್ನುವ ಮಾತು ಎಷ್ಟು ಅರ್ಥಪೂರ್ಣ ?

ಮುಂದಿನ ದಿನಗಳಲ್ಲಿ, ಗಮಕ ಕಲೆ ಪ್ರವೃದ್ಧಮಾನಕ್ಕೆ ಬಂದದ್ದು ರಾಜಸ್ಥಾನದ ರಾಜಾಶ್ರಯದ ಕಲಾವಿದರಿಂದ. ಮೈಸೂರಿನ ಆಸ್ಥಾನ ವಿದ್ವಾನ್ ಶ್ರೀ. ಶಿವಮೂರ್ತಿಶಾಸ್ತ್ರಿಗಳ ಗಮಕ ಕಲೆಯ ಪ್ರಚಾರ ವಿಶಿಷ್ಠವಾದದ್ದು.
ಈ ಕಲೆಯ ಹಲವು ಹಿರಿಯ ಶ್ರೇಷ್ಟ ಗಮಕಿಗಳಾದ ದೇವುದು ನರಸಿಂಹ ಶಾಸ್ತ್ರಿ, ಚಿತ್ರದುರ್ಗದ, ಡಾ. ಬಿಂದೂ ರಾಯರು, ಕಳಲೆ ಸಂಪತ್ಕುಮಾರಾಚಾರ್ಯರು, ಮೊದಲಾದವರನ್ನು ‘ಗಮಕ ಕಲೆಯ ಭಗೀರಥ’ರೆಂದು ವರ್ಣಿಸುತ್ತಾರೆ.
ಅವರು ತಮ್ಮನ್ನು ತೊಡಗಿಸಿಕೊಂಡಿರುವ ಸಂಸ್ಥೆಗಳು :
೧. ಕರ್ನಾಟಕ ಸಂಗೀತ ನೃತ್ಯ ಅಕೆಡೆಮಿಯ ಸದಸ್ಯರಾಗಿ,
೨. ತಿರುಪತಿ ತಿರುಮಲ ದೇವಸ್ಥಾನಂ (T.T.D) ದಾಸ ಸಾಹಿತ್ಯ ಯೋಜನೆಯ ಸಲಹಾ ಮಂಡಳಿಯ ಸದಸ್ಯ
೩. ಆಕಾಶವಾಣಿ ಆಡಿಷನ್ ಬೋರ್ಡ್ ಮಂಡಳಿ ಸದಸ್ಯ,
೪. ಕರ್ನಾಟಕ ಗಮಕ ಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ,
೫. ಗಾನ ಕಲಾ ಸಿರಿಯ ಸಹ ಸಂಪಾದಕ
೬. ಮುಳಬಾಗಿಲು ಶ್ರೀ ಪುರಂದರ ದಾಸರ ಆರಾಧನಾ ಟ್ರಸ್ಟ್ ಮತ್ತಿತರ ಸಂಸ್ಥೆಗಳಲ್ಲಿ ಅಪಾರವಾದ ಸೇವೆ ಸಲ್ಲಿಸಿ, ಎಲ್ಲರ ಅಭಿಮಾನ ಮೆಚ್ಚುಗೆಯನ್ನು ಗಳಿಸಿದರು.

೨೦೧೮ ರ ಫೆಬ್ರವರಿ ತಿಂಗಳಿನ ೨೪ ಹಾಗೂ ೨೫ ರಂದು ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ, ಡಾ. ಎಂ.ಎ.ಜಯರಾಮ್ ರಾವ್ ತಮ್ಮ ಪ್ರೀತಿಯ ಗಮಕ ಕಲೆಯ ಹಲವು ಮುಖಗಳನ್ನು ತಮ್ಮ ಸಿರಿ ಕಂಠದಿಂದ ವಾಚನ ಮಾಡುವುದಲ್ಲದೆ, ಆ ಪದ್ಯಗಳಿಗೆ ವ್ಯಾಖ್ಯಾನವನ್ನು ಸಮರ್ಪಕವಾಗಿ ಮಾಡಿ ತೋರಿಸಿದರು : ವೃತ್ತಿಯಿಂದ ಪತ್ರಕರ್ತರು, ಪ್ರವೃತ್ತಿಯಿಂದ ಗಾಯಕರು, ವ್ಯಾಖ್ಯಾನುಕಾರರು ತಮ್ಮ ತಂದೆಯವರ  ಪರಂಪರೆಯನ್ನು ಗಮಕ ಗಾಯನದಲ್ಲಿ ಮುಂದುವರೆಸಿಕೊಂಡು ಬಂದಿರುವ ಜಯರಾಮ್ ರಾವ್, ಒಳ್ಳೆಯ ಕಂಠ ಮಾಧುರ್ಯವನು ಹೊಂದಿದ್ದಾರೆ. ಸಾಹಿತ್ಯ ನಿಖರತೆ, ಹಾಗೂ ಅರ್ಥ ಸ್ಪಷ್ಟತೆ, ಕೇಳುಗರನ್ನು ಮಂತ್ರಮುಗ್ದರನ್ನಾಗಿ ಮಾಡಿತ್ತು ಕಾವ್ಯದ ರಸಕಥನವನ್ನು ಒತ್ತಿ ಹಾಡುತ್ತಾ, ತಮ್ಮ ಮಾತಿನ ರಸಾನುಭವನ್ನು ಅನುಭವಿಸುತ್ತಾ, ಶ್ರೋತೃಗಳನ್ನೂ ರಂಜಿಸಿದರು. ಕುಮಾರವ್ಯಾಸ ಭಾರತದಲ್ಲಿ ಕರ್ಣನ ವ್ಯಕ್ತಿತ್ವವನ್ನು ಪ್ರತಿಪಾದಿಸುವ ಬಗ್ಗೆ ಅತಿ ದೊಡ್ಡ ಅಧ್ಯಾಯವಿದೆ.  ಕರ್ಣನ ಹಲವಾರು ಮಹತ್ತರ ಗುಣಗಳು ನಮ್ಮನ್ನೆಲ್ಲಾ ಚಕಿತಗೊಳಿಸುತ್ತವೆ. ‘ಕರ್ಣ ರಸಾಯನ ಮಲ್ತೆ,’ ಇನ್ನುವ ಮಾತು ಎಷ್ಟು ನೈಜವಾಗಿದೆ.

ಯಾರ ಮನಸ್ಸನ್ನೂ ನೋಯಿಸದ, ತನ್ನ ಒಡೆಯ ಕೌರವೇಂದ್ರನ ಬಗ್ಗೆ ಇದ್ದ ಅಪಾರ ಸಹಾನುಭೂತಿ, ಗೌರವ, ಒಂದು ಮಟ್ಟದಲ್ಲಿ ತನ್ನ ಹುಟ್ಟಿನ ಗುಟ್ಟನ್ನು ಅರಿತರೂ ತನ್ನ ತಾಯಿಯನ್ನು ಸ್ವಲ್ಪವೂ ದೂಷಿಸದೆ, ವಿಧಿಯನ್ನು ದ್ವೇಷಿಸದೆ, ತನ್ನ ಸರ್ವಸ್ವವನ್ಯೂ ದುರ್ಯೋಧನನ ಒಳಿತಿಗಾಗಿ ಸಮರ್ಪಿಸುವ ಕರ್ಣ ಆಕಾಶದೆತ್ತರ ಬೆಳೆಯುತ್ತಾನೆ. ಇಲ್ಲಿ ಕೃಷ್ಣನ ಕುಹಕ, ಅರ್ಜುನನನ್ನು ಗೆಲ್ಲಿಸಲು ಮಾಡುವ ಕೂಟ ನೀತಿಯನ್ನು ನಮ್ಮೆಲ್ಲರ ಮುಂದೆ ಎತ್ತಿ ಹಿಡಿದು, ತಮ್ಮ ಒಂದು ಗಂಟೆಗೂ ಮೀರಿ ಮಾಡಿದ ಭಾಷಣ ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಸಮಯ ಕಳೆದದ್ದೇ ನಮಗ್ಯಾರಿಗೂ ತಿಳಿಯಲೇ ಇಲ್ಲ ! ಗಮಕ ವಾಚನದ ಒಳನೋಟಗಳನ್ನು ಹಲವಾರು ಉದಾಹರಣೆಗಳಿಂದ ವಿವರಿಸಿದ ಪರಿ ಅನನ್ಯವಾಗಿತ್ತು. ಗಮಕ ಕಲೆಯ ವಿರಾಟರೂಪವನ್ನು ನಮ್ಮೆಲ್ಲರ ಮುಂದೆ ತೆರೆದಿಟ್ಟರು. ಅದರ ಆಳ-ಅಗಲ- ಹರವುಗಳನ್ನು ನಾವು ಚೆನ್ನಾಗಿ ಆಸ್ವಾದಿಸಿದೆವು. “ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ಗಮಕಿ ಕಂಡ” ಎನ್ನುವ ಮಾತನ್ನು ಡಾ. ಉಪಾಧ್ಯ ಒತ್ತಿ ಹೇಳಿದಾಗ, ಆ ವಾಕ್ಯದ ಅರ್ಥ ಶ್ರೋತೃಗಳಾದ ನಮಗೆಲ್ಲಾ ಮನದಟ್ಟಾಯಿತು. ಜಯರಾಮರಾಯರು ಪಂಪ,ರನ್ನರ ಜೊತೆ ಕುಮಾರವ್ಯಾಸನ ಕೃತಿಗಳಲ್ಲಿ ಅವನು ಒತ್ತುಕೊಡುವ ಕೃಷ್ಣನ ಪಾತ್ರದ ಹಲವಾರು ಮುಖಗಳನ್ನು ನಮಗೆ ಪರಿಚಯಿಸಿದರು. ಪಂಪನ ಕೆಲವು ಪಾತ್ರಗಳು ಜೈನಧರ್ಮದ ಲೇಪವನ್ನು ಹೊಂದಿರುವುದನ್ನು ನಮ್ಮ ಗಮನಕ್ಕೆ ತಂದರು. ವಸ್ತ್ರಾಪಹರಣದ ಸಮಯದಲ್ಲಿ ತನ್ನ ಐವರು ವೀರ ಪತಿಗಳಿದ್ದಾಗ್ಯೂ ಕೃಷ್ಣನ ಮೊರೆಹೋಗುವಿಕೆ, ದ್ರೌಪದಿಯ ಹಲುಬಾಟವನ್ನು ಅದ್ಭುತವಾಗಿ ಅರ್ಥೈಸಿ ಹೇಳಿದರು.

http://epaper.udayavani.com/viewpage.php?edn=Mumbai&isid=UVANI_MUM_20180309&pid=UVANI_MUM#Page/3/Article/UVANI_MUM_20180309_3_2/214px/141425D, ಉದಯ ವಾಣಿ ದಿನಪತ್ರಿಕೆ, ಮಾರ್ಚ್, 9, 2018, ‘ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ’, ಮೈಸೂರ್ ಅಸೋಸಿಯೇಷನ್,ದತ್ತಿ ಉಪನ್ಯಾಸ’. “ಕರ್ಣ ಒಬ್ಬ ದುರಂತ ಜೀವಿ, ಡಾ. ಎಂ. ಎ. ಜಯರಾಮ್ ರಾವ್”

ದತ್ತಿ ಉಪನ್ಯಾಸದ ಬಳಿಕ, ಮೈಸೂರ್ ಅಸೋಸಿಯೇಷನ್ ಅಧ್ಯಕ್ಷೆ,  ಶ್ರೀಮತಿ. ಕಮಲಾ ಕಾಂತರಾಜು ಹಾಗೂ,  ಕಾರ್ಯದರ್ಶಿ, ಡಾ. ಶಂಕರಲಿಂಗರವರು ವಿಶ್ವವಿದ್ಯಾಲಯಕ್ಕೆ, 50 ಸಾವಿರ ರೂಪಾಯಿಗಳ ಚೆಕ್ ನ್ನು ಹಸ್ತಾಂತರಿಸಿದರು.

 

Advertisements

Published by ದಿನ ಪ್ರತಿದಿನ !

ಮುಂಬಯಿನಲ್ಲಿ ಹತ್ತಿ ಸಂಶೋಧನಾಲಯದಲ್ಲಿ ಕೆಲಸಮಾಡಿ 37 ವರ್ಷ ಸೇವೆಮಾಡಿ ಸೇವಾನಿವೃತ್ತನಾಗಿದ್ದೇನೆ. ಈಗ ಇಂಟರ್ನೆಟ್ ಮತ್ತು ಫೇಸ್ ಬುಕ್, ಬ್ಲಾಗಗಳ ರಚನೆ, ಮತ್ತು ಓದು ಬರಹಗಳಲ್ಲಿ ವ್ಯಸ್ತನಾಗಿದ್ದೇನೆ.

ನಿಮ್ಮ ಟಿಪ್ಪಣಿ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.

%d bloggers like this: