Belluru Narayana swamy,well known lawyer of Bombay (Now,Mumbai) !

ಮುಂಬಯಿನ ಮೈಸೂರ್ ಅಸೋಸಿಯೇಷನ್ ನ ಪತ್ರಿಕೆಯಾದ ನೇಸರುವಿನ ೨೦೦೮, ಸೆಪ್ಟೆಂಬರ್, ೮ ನೇ ತಾರೀಖಿನ ಸಂಚಿಕೆಯಲ್ಲಿ ಈ ಸಂದರ್ಶನ ಪ್ರಕಟವಾಗಿತ್ತು. ಆದರೆ ಅಕ್ಷರಗಳು ಓದಲು ಕಷ್ಟವಾಗಿದ್ದರಿಂದ ನಾನು ಅಕ್ಷರಗಳ ಸೈಜ್ ದೊಡ್ದದು ಮಾಡಿ, ಮೂಲದಲ್ಲಿ ಹೇಗಿದೆಯೋ ಹಾಗೆಯೇ ಇರುವ ರೀತಿಯಲ್ಲಿ ಈ ತಾಣದಲ್ಲಿ ಪ್ರಕಟಿಸಿರುತ್ತೇನೆ. ಬಹುಶಃ ಈಗ ಓದಲು ಅನುಕೂಲವಾಗಿದೆಯೆಂದು ನಂಬುತ್ತೇನೆ.

-ಎಚ್. ಆರ್. ಎಲ್, ಅಜೀವ ಸದಸ್ಯ,  ಮೈಸೂರು ಅಸೋಸಿಯೇಷನ್, ಮುಂಬಯಿ.

This slideshow requires JavaScript.

ಶ್ರೀ ಬಿ.ನಾರಾಯಣಸ್ವಾಮಿಯವರ ಶತಮಾನೋತ್ಸವವನ್ನು ಷಣ್ಮುಖಾನಂದಾ ಸಭಾಗೃಹದಲ್ಲಿ ಆಚರಿಸಲಾಯಿತು.

೩೧, ಆಗಸ್ಟ್, ೨೦೦೮ ರಂದು ಶ್ರೀ ಷಣ್ಮುಖಾನಂದ ಸಂಗೀತ ಸಭಾ ಹಾಗೂ ಎಸ್.ಐ.ಇ.ಎಸ್ ಇವರೊಡನೆ ಜೊತೆಗೂಡಿ ಮೈಸೂರ್ ಅಸೋಸಿಯೇಷನ್,  ಶ್ರೀ ಬಿ.ನಾರಾಯಣ ಸ್ವಾಮಿಯವರ ಶತಮಾನೋತ್ಸವವನ್ನು ಷಣ್ಮುಖಾನಂದಾ ಸಭಾಗೃಹದಲ್ಲಿ ಆಚರಿಸಿತು. ಈ ಸಂದರ್ಭದಲ್ಲಿ  ಅಸೋಸಿಯೇಷನ್ ಅಧ್ಯಕ್ಷರಾದ ಎಸ್. ದೊರೆಸ್ವಾಮಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಸೋಸಿಯೇಷನ್ ಗೆ ನಾರಾಯಣಸ್ವಾಮಿಯವರಿಂದ ಸಂದ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸೂಚಿಸಿದರು.

ವ್ಯಕ್ತಿ ಚಿತ್ರ :

ನೇಸರು, ಸೆಪ್ಟೆಂಬರ್, ೨೦೦೮,  ಪು.೪, 

-ಶ್ರೀ  ಬೆಳ್ಳೂರು ನಾರಾಯಣಸ್ವಾಮಿ. 

-ಡಾ. ಬಿ.ಆರ್.ಮಂಜುನಾಥ್,  ‘ನೇಸರು ವಿಶೇಷ ಸಂಚಿಕೆ’,ಯಲ್ಲಿ ಬರೆಯುತ್ತಾ ಹೋಗುತ್ತಾರೆ. 

ನಾನು ೧೯೬೨  ರಲ್ಲಿ ಮುಂಬಯಿನ ಮೈಸೂರು ಅಸೋಸಿಯೇಷನ್ ಗೆ ಬಂದಾಗ, ನಾನಿನ್ನೂ “ಬಚ್ಚಾ. “ಅಸೋಸಿಯೇಷನ್ ನಲ್ಲಿ ಅನೇಕ  ಘಟಾನುಘಟಿಗಳಾದ ಮಹಾಪುರುಷರಿದ್ದರು. ಅವರಲ್ಲಿ ಬಿ.ರಾಯಣಸ್ವಾಮಿ ಮೊದಲಿಗರು. ನಾನು ಒಂದು ಕಾರ್ಯಕ್ರಮದಲ್ಲಿ ಅವರನ್ನು ಕಂಡಾಗ, ಅವರ ಕಣ್ಣುಗಳು ಯಾವಾಗಲೂ ನಗುತ್ತಿರುವುದನ್ನು ನೋಡಿ ವಿಸ್ಮಯಗೊಂಡಿದ್ದೆ. ಆದರೆ ಮಹಾಗಾಂಭೀರ್ಯ. ನನಗೆ ನಿಜವಾಗಿ ಈ ಕುಟುಂಬದ ಅತಿ ಸನಿಹದ ಪರಿಚಯ ೧೯೭೦ ರಿಂದ. ಶ್ರೀಮತಿ. ಶಾರದಮ್ಮನವರು ಯಾವಾಗಲೂ ನಗುತ್ತಿರುವ ತಾಯಿ. ನೋಡಿದವರ ಮನದಲ್ಲಿ ಆತ್ಮೀಯತೆಯನ್ನು ಮೂಡಿಸುವಂತಹವರು. ನನ್ನನ್ನು ಯಾವಾಗಲೂ ಮಗುವಂತೆಯೇ ಕಂಡವರು. ಅತಿ ಚೇಷ್ಟೆಯಿಂದ ಮಾತನಾಡಿದಾಗ, ನಗುನಗುತ್ತಾ ಒಂದು ಏಟು ಕೈಯಮೇಲೆಹಾಕಿ ಎಚ್ಚರವನ್ನು ನೀಡುವವರು. ನಾನು ಎಷ್ಟೇಬಾರಿ, ಅಸೋಸಿಯೇಷನ್ನಿನ ಕೆಲಸದ ಮೇಲೆ ‘ಲೀಗಲ್ ಆಡ್ವೈಸ್’ ಕೇಳುವುದಕ್ಕೆ  ಹೋದಾಗ ಮೊದಲು ಅಮ್ಮ ಕೊಟ್ಟ ಕಾಫಿ ಕುಡಿದು, ಆಮೇಲೆ ನಾರಾಯಣ ಸ್ವಾಮಿಯವರು ಅಥವಾ ಶ್ರೀಕೃಷ್ಣ ಅವರ ಜೊತೆ ಅಡ್ವೈಸ್ ಪಡೆಯುವುದು. ೧೯೮೩ ಮಾರ್ಚ್ ನಲ್ಲಿ, ನಾರಾಯಣ ಸ್ವಾಮಿಯವರು ಕೊನೆಯುಸಿರೆಳೆದಾಗ, ಅಸೋಸಿಯೆಷನ್ ನವರೆಲ್ಲಾ ಮನೆಮುಂದೆ ನೆರೆದಿದ್ದರು.

ಅವರನ್ನು, ಅಸೋಸಿಯೆಷನ್  ನವರು (ಅವರೆದುರಿಗಲ್ಲ) “ಟೈಗರ್ ನಾರಾಯಣಸ್ವಾಮಿ”, ಅಂತ ಕರೆಯುತ್ತಿದ್ದುದು ಉಂಟು. ಏಕೆಂದರೆ,ಅವರು ಎಲ್ಲರನ್ನೂ ಅಷ್ಟು  ಹತೋಟಿಯಲ್ಲಿ ಇಡುತ್ತಿದ್ದರು, ಎನ್ನುವುದು ಅಲ್ಲಿದ್ದ ಹಿರಿಯರ ಮತ. ಇಂಥ ಟೈಗರ್ ಅನ್ನು ಓದುಗರಿಗೆ ಪರಿಚಯಮಾಡಿಸಬೇಕಾದರೆ, ಅವರನ್ನು ಅತಿ ಸನಿಹದಿಂದ ಕಂಡವ್ಯಕ್ತಿಗಳಿಂದ ಮಾತ್ರ ಸಾಧ್ಯ. ಇದಕ್ಕೆಂದೇ, ನಾನು ಅವರ ಮನೆಗೆ ಹೋಗಿ, ಅಮ್ಮನ ಕೈಯಿಂದ ಒಂದು ಲೋಟ ಕಾಫಿ ಸವಿದು, ಅಮ್ಮ, ಶ್ರೀಕೃಷ್ಣ, ಪೂರ್ಣಿಮಾ ಅವರನ್ನು ಸಂದರ್ಶನಮಾಡಿದೆ. 

ಸಂದರ್ಶನ : (೫ ಮತ್ತು ೬ ನೆಯ ಪುಟದಲ್ಲಿ)

AOL, Ghkpr, HRLV, SAROJ 096-framed

ಡಾ. ಬಿ. ಆರ್. ಮಂಜುನಾಥ್  ರ ಪರಿಚಯ  :

ಮಂಜುನಾಥ್, ೧೯೫೮ ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ ಆನರ್ಸ್ ಪದವಿಯ ನಂತರ, ೧೯೬೧ ರಲ್ಲಿ ಸೆಂಟ್ರೆಲ್ ಕಾಲೇಜಿನಲ್ಲಿ ಎಂ.ಎಸ್ಸಿ.ಪದವಿಗೆ ಸೇರಿದರು. ಮುಂಬಯಿನ ಬಿ.ಟಿ.ಆರ್.ಎ. (BTRA) ಸಂಶೋಧನಾಲಯದಲ್ಲಿ ಜೂನಿಯರ್ ಸೈಂಟಿಫಿಕ್ ಆಫ್ಸರ್ ಆಗಿ ಸೇರಿದರು. ‘ಸ್ಕಾಟ್ಲೆಂಡ್’ (Scotland) ದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ Studies of polymer & X-ray diffraction ವಿಷಯದಲ್ಲಿ ೨ ವರ್ಷ ಡಾ. ಮೆರಿಡಿತ್ ರವರ ವಿದ್ಯಾರ್ಥಿಯಾಗಿ ಕೆಲಸಮಾಡಿ, ಪಿ.ಎಚ್.ಡಿ.ಪದವಿ ಗಳಿಸಿದರು. ಮುಂಬಯಿನ ಟೆಕ್ಸ್ ಟೈಲ್ಸ್ ಕಮಿಟಿಯಲ್ಲಿ (Textiles Committee) ‘ಡೈರೆಕ್ಟರ್ ಆಫ್ ಲ್ಯಾಬ್’ ಆಗಿ ಆಯ್ಕೆಯಾದರು. ಮುಂದೆ ‘ಡೈರೆಕ್ಟರ್ ಆಫ್ ವಿಜಿಲೆನ್ಸ್’,ಮತ್ತು ಇನ್ಸ್ಪೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿದ ಡಾ.ಬಿ.ಆರ್.ಮಂಜುನಾಥ್, ‘ಸರ್.ಎಂ.ವಿಶ್ವೇಶ್ವರಯ್ಯ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್, ಮುಂಬಯಿಯ’,  ೮ ಜನ “ಕೋರ್ ಮೆಂಟರ್ಸ್ ಪಟ್ಟಿ” ಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 

ಎನ್.ಕೆ.ಇ.ಎಸ್.ವಿದ್ಯಾಸಂಸ್ಥೆ,ವಡಾಲದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ,  SVIMS ವಿದ್ಯಾ ಸಂಸ್ಥೆಯ ಡೈರೆಕ್ಟರ್ ಜನರಲ್, ಮತ್ತು ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮುಂಬಯಿ ನಗರದದಲ್ಲಿ ಕನ್ನಡ ಧಿಯೇಟರ್ ವಲಯದಲ್ಲಿ ೪ ದಶಕಗಳಿಂದ ನಾಟಕ ರಚನೆ,  ಅಭಿನಯ, ನಿರ್ದೇಶನ, ಮೊದಲಾದವುಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡ ಮಂಜುನಾಥರು ಸಂಗೀತ, ನೃತ್ಯ, ಮತ್ತು ಲಲಿತ ಕಲೆಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಮುಂಬಯಿನ ಮೈಸೂರು ಅಸೋಸಿಯೇಷನ್, ಮತ್ತು  SVIMS ವಿದ್ಯಾಸಂಸ್ಥೆಗಳ  ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಮಂಜುನಾಥರ ಈ ಸರ್ವೋತೋಮುಖ ಸಾಧನೆಗಳನ್ನು ಗೌರವಿಸಿ, ಕರ್ನಾಟಕ ಸಂಘ ಮುಂಬಯಿ, “ಸಾಧನ ಶಿಖರ ಪ್ರಶಸ್ತಿ” ಯನ್ನು ಪ್ರದಾನ ಮಾಡಿದ್ದಾರೆ.

ಮಂಜುನಾಥ್ : ಅಮ್ಮ, ನೀವು ಹುಟ್ಟಿದ್ದು ಎಲ್ಲಿ ?

AOL, Ghkpr, HRLV, SAROJ 091-framed

ಶಾರದಮ್ಮ:  ಹಾಸನದ  ಹತ್ತಿರ ಸಾಲಗಾಮೆಯಲ್ಲಿ ,ಮೈಲಾರ್ ಜೋಯಿಸ್ ಲಕ್ಷ್ಮೀದೇವಮ್ಮನವರಿಗೆ ನಾನು ಎರಡನೆಯ ಮಗು; ನನಗೆ ಒಬ್ಬ ಅಣ್ಣ. ಇಬ್ಬರು ತಮ್ಮಂದಿರು. ಇಬ್ಬರು ತಂಗಿಯರು.

ಮಂಜುನಾಥ್ :   ನಾರಾಯಣ ಸ್ವಾಮಿಯವರು  ಹುಟ್ಟಿದ್ದೆಲ್ಲಿ ? ಅವರ ವಿದ್ಯಾಭ್ಯಾಸ ?

ಶಾರದಮ್ಮ:  ಮಗು, ಈಗ ನನಗೆ  ಸರಿಯಾಗಿ ತಾರೀಖುಗಳೇ ನೆನಪಿರುವುದಿಲ್ಲ. ಶ್ರೀಕೃಷ್ಣಂಗೆ ಜ್ಞಾಪಕ ಇರುತ್ತೆ.

ಶ್ರೀಕೃಷ್ಣ : bns.

ಅಪ್ಪ, ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ . ಅವರು ಒಟ್ಟು ೧೪ ಮಂದಿ ಮಕ್ಕಳು. ೬ ಜನ ಅಣ್ಣ ತಮ್ಮಂದಿರು. ೮ ಜನ ಅಕ್ಕ ತಂಗಿಯರು. ಅವರು ದೊಡ್ಡಪ್ಪ ಎಜುಕೇಶನಲ್ ಇನ್ಸ್ಪೆಕ್ಟರ್ ಆಗಿದ್ದರು. ಅವರಿಗೆ ವರ್ಗವಾದ ಊರಿಗೆ ಮಕ್ಕಳು ಹೋಗಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ತುಮಕೂರಿನಲ್ಲಿ ಅವರು ಓದಿದ್ದು. ಪ್ರತಿದಿನ ಕ್ಯಾತ್ಸಂದ್ರ ದಿಂದ  ತುಮಕೂರಿಗೆ ನಡೆದುಕೊಂಡೇ ಹೋಗುತ್ತಿದ್ದರಂತೆ.

ಶಾರದಮ್ಮ:   ಓದೆಲ್ಲಾ ಬೀದಿಯ ಲಾಂದ್ರದ ಬೆಳಕಿನಲ್ಲೇ ಅಂತ ಹೇಳ್ತಾ ಇದ್ದರು.

ಶ್ರೀಕೃಷ್ಣ : B.A, ಮೈಸೂರು ಮಹಾರಾಜಾ ಕಾಲೇಜಿಂದ LLB ಪರೀಕ್ಷೆ ಪುಣೆಯ Law college ನಿಂದ. ೧೯೨೯ ರಲ್ಲಿ ಮುಗಿಸಿ ಮೈಸೂರಿನಲ್ಲಿ ಲಾಯರ್ ವೆಂಕಟಕೃಷ್ಣಯ್ಯನವರ ಹತ್ತಿರ Junior ಆಗಿ Law Practice ಮಾಡಲು ಮೊದಲು ಮಾಡಿದರು. ಆದರೆ ಅಲ್ಲಿ District Court, Magistrate Court ನಲ್ಲಿ  Practice ಮಾಡಿದ ನಂತರ ಮೈಸೂರಿಗಿಂತ, ದೊಡ್ಡಬೊಂಬಾಯಿನಲ್ಲಿ ತನಗೆ ಹೆಚ್ಚು ಅವಕಾಶವಿದೆಯೆಂದು ಒಂದು ಬ್ಯಾಗ್ ಹಿಡಿದು ಬೊಂಬಾಯಿಗೆ ಬಂದಿಳಿದರಂತೆ.

ಶಾರದಮ್ಮ:   ಆಗ ಅವರಿಗೆ ಕೇವಲ ೨೪ ವರ್ಷ.

ಶ್ರೀಕೃಷ್ಣ : ಬೊಂಬಾಯಿನಲ್ಲಿ ಅವರು ಮಾಟುಂಗಾದ ತೇಜೂಕಾಯ ಪಾರ್ಕ್ ನ ಪಕ್ಕದಲ್ಲಿ ದೌಲತ್ ವಿಲ್ಲಾ ಕಟ್ಟಡದಲ್ಲಿ ಶ್ರೀವೆಂಕಟೇಶ ಮೂರ್ತಿ, ಮತ್ತು ಶ್ರೀ ರಾಮಚಂದ್ರ ಅವರೊಡನೆ ಒಂದು ರೂಂ ಮಾಡಿಕೊಂಡಿದ್ದರು. ಆಮೇಲೆ ‘ದೇವ್ ಧರ್ ಕ್ರಾಸ್ ರೋಡ್’ ನಲ್ಲಿಯೂ ಇದ್ದರು. ಬಂದ ತಕ್ಷಣ Law practice ಸಾದ್ಯ ಇರಲಿಲ್ಲ. ಡಿಲೈಲ್ ರೋಡ್ ನಲ್ಲಿದ್ದ ಷಾಪುರ್ಜೀ ಮಿಲ್ಸ್ ನಲ್ಲಿ Legal Adviser  ಆಗಿ ಒಂದು ಕೆಲಸ ಹಿಡಿದರು.

ಮಂಜುನಾಥ್ : ಅಮ್ಮ ನಿಮ್ಮ ಮದುವೆ ಯಾವಾಗಾಯಿತು. ನಾರಾಯಣ ಸ್ವಾಮಿಯವರು ಬೊಂಬಾಯಿಗೆ ಬರುವ ಮೊದಲೇ ಆಗಿತ್ತೇನು ?

ಶಾರದಮ್ಮ : ಇಲ್ಲ. ಅವರಿಗೆ ಮೈಸೂರಿನಲ್ಲಿದ್ದಾಗಲೇ ಒಂದು ಮದುವೆ ಆಗಿತ್ತು. ದತ್ತ, ಪಾಪು ಹುಟ್ಟಿದ್ದರು. ನಾನು ಮದುವೆಯಾದಾಗ ನನಗೆ ೧೪ ವರ್ಷ. ಅವರಿಗೆ೨೪  ವರ್ಷ. ಇಲ್ಲಿಗೆ ಬಂದಾಗ ಮೊದಲ ೨ ವರ್ಷ ಮಾಟುಂಗಾದಲ್ಲಿದ್ದ Mount Matunga ಕಟ್ಟಡದಲ್ಲಿದ್ದೆವು. 

ಮಂಜುನಾಥ್ :   ಮೈಸೂರ್ ಅಸೋಸಿಯೇಷನ್ ಸೇರಿದ್ಯಾವಾಗ ?

ಶಾರದಮ್ಮ :  ಅಯ್ಯೋ ಇವರು ಬೊಂಬಾಯಿನಲ್ಲಿ ಇಳಿದಾಗ್ನಿಂದ  ಅಸೋಸಿಯೇಷನ್ ಅಂಟುಬಿಡ್ತು. ಇವರಿಗೆ ಫ್ಯಾನ್ಸಿ ಡ್ರೆಸ್ ನಾಟಕಾ ಅಂದ್ರೆ ಜೀವ. ಬುಡುಬುಡಿಕೆ ಹಾವಾಡಿಗ ಅಂತ ವೇಷ ಹಾಕ್ಕೊಂಡು ಪ್ರೈಸ್ ಗಿಟ್ಟಿಸ್ಕೊಳ್ಳೋವೃ. ನಾಟಕದ ರಿಹರ್ಸಲ್ ಅಂತ ಸಾಯಂಕಾಲ ಎಲ್ಲಾ ಅಸೋಸಿಯೇಷನ್ ನಲ್ಲೇ.  ಇವರಿಗೆ ಸಂಕೇತಿ ಸ್ನೇಹಿತರು ತುಂಬಾ. ಅವರೆಲ್ಲಾ ಇವರ್ನ ಸೇರಿಸ್ಕೊಂಡು ಭಾನುವಾರವೆಲ್ಲಾ ಆಡಿದ್ದೇ ಆಡಿದ್ದು. ಹೀಗಾಗಿ ಅಸೋಸಿಯೇಷನ್ ನಲ್ಲೇ ಇವರು ಮನೆಗಿಂತ ಹೆಚ್ಚು ಇರ್ತಿದೃ. 

ಮಂಜುನಾಥ್ :  ಹಾಗಿದ್ದರೆ ಅವರ ಪ್ರೊಫೆಶನಲ್ ಕೆಲಸ ಹೇಗೆ ನಡೆಯುತ್ತಿತ್ತು. 

ಶ್ರೀಕೃಷ್ಣ :  ಶಾಪುರ್ಜಿ ಮಿಲ್ಸ್ ನಲ್ಲಿ ಲೀಗಲ್ ಅಡ್ವೈಸರ್ ಆಗಿದ್ರು ಅಂದೆನಲ್ಲ . ಅವರು Industrial disputes  Act ಹಾಗೆ Labor  Law ನಲ್ಲಿ ಹೆಚ್ಚು ಪರಿಣತೆ ಪಡೆದಿದ್ದರು. Mill Owner’s Association ವಿಠಲ್ ಚಂದಾವರ್ಕರ್ ಅಧ್ಯಕ್ಷರಾಗಿದ್ದರು. ಮೀಟಿಂಗ್ ಗಳಲ್ಲಿ ಇವರ ಚಾತುರ್ಯ ನೋಡಿ, ಚಂದಾವರ್ಕರ್ ಮೆಚ್ಚಿದ್ದರು.ಹೀಗಾಗಿ ಆಪ್ಪ Mill Owner’s Association ಗೆ Standing council ಆಗಿ ನೇಮಕವಾದರು. ಅಲ್ಲಿಂದ ಲಾ ಪ್ರೊಫೆಶನಲ್ ನಲ್ಲಿ ಅವರ ಏಳಿಗೆ ಮೊದಲಾಯಿತು. Hindustan Construction Company ಯಲ್ಲಿ  ಶ್ರೀ ವರದರಾಜನ್ ಅವರು ಇದ್ದರು. ಅಪ್ಪನಿಗೆ ದೂರದ ಸಂಬಂಧ. ಅದರಿಂದ ಅಪ್ಪ HCC ಗೂ ವಕೀಲರಾದರು.

ಶಾರದಮ್ಮ:  ಹೀಗಾಗಿ ವರದರಾಜನ್ ರವರು, ಮಾಟುಂಗಾದಲ್ಲಿ ದೊಡ್ಡಮನೆ ಕಟ್ಟಿದಾಗ ,ನೀವು ಇಲ್ಲೇ ಬಂದಿರಿ ಎಂದರು. ಅವತ್ತಿಂದ ನಾವು ಈ  ಮನೆಯಲ್ಲೇ ಇದ್ದೀವಿ.

ಮಂಜುನಾಥ್  : ನಾರಾಯಣ ಸ್ವಾಮಿಗಳಿಗೆ ನಾಟಕದ ಹುಚ್ಚು ಅಂದ್ರಿ, ಅಮ್ಮ, ಅವರು ಯಾವ ಯಾವ ನಾಟಕಗಳಲ್ಲಿ ಮಾಡಿದೄ ಅಂತ ಹೇಳಿ..

ಶಾರದಮ್ಮ:  ಅಯ್ಯೋ, ಎಷ್ಟೋ ನಾಟಕಗಳಾದವು. ಈಗ ನನಗೆ, ಅದೆಲ್ಲಾ ಜ್ಞಾಪಕವೇ ಇಲ್ಲ. ” ಬಂಡ್ವಾಳವಿಲ್ಲದ ಬಡಾಯಿ”, “ಗಂಡಸ್ಕತ್ರಿ” “ಹೋಂ ರೂಲು”. ಆಗ ೧೯೪೬-೪೮ ರಲ್ಲಿ ಕೈಲಾಸಂ ರವರು ಇಲ್ಲೇ ಅಸೋಸಿಯೇಷನ್ ನಲ್ಲೇ ಇದ್ದರಲ್ಲಪ್ಪಾ. ಆವರ ಹಿಂದೆ ಇವರು, ಬಿ.ಜಿ.ಆಚಾರ್ರು, ಅವರೆಲ್ಲಾ ಸುತ್ತುತ್ತಾ ಇದೃ. ಆಮೇಲೆ ವಿ.ಕೆ.ಮೂರ್ತಿ (ಕುಟ್ಟಿ) ಅಸೋಸಿಯೇಷನ್ ಗೆ ಬಂದಾಗ, ‘ಅದನ್ನಾಡಿಸು, ಇದನ್ನಾಡಿಸೂಂತ’  ಒಂದು ನಾಟಕದ ಹುಚ್ಚನ್ನೇ ಎಲ್ಲಾರಿಗೂ ಆಂಟಿಸ್ಬಿಟೃ.

                                                          ಪುಟ : ೫ 

ಮಂಜುನಾಥ್  : ನೀವು ಅಸೋಸಿಯೇಷನ್ ನಲ್ಲಿ ಹೆಚ್ಚು ಭಾಗವಹಿಸ್ತಿರಲಿಲ್ವೇ  ?

ಶಾರದಮ್ಮ:  ಮಾಡ್ತಾ ಇದ್ನಪ್ಪ.  Ladies wing ಅನ್ನೋದಿತ್ತು. ಅದರಲ್ಲಿ ಹೊಲಿಗೆ, ಕಸೂತಿ, ಬೆತ್ತದ ಕೆಲಸ , ನಾನು, ಸೀತಮ್ಮ ಗರುಡಾಚಾರ್ರ ಹೆಂಡತಿ. ಪಿ.ಎನ್. ಮೂರ್ತಿಯವರ ಹೆಂಡತಿ, ಶ್ಯಾಮಲಾಂಬ ಎಲ್ಲಾ ಸೇರಿಕೊಂಡು ಚೆನ್ನಾಗಿ ಕೆಲಸ ಮಾಡ್ತಿದ್ವಿ. ಇವರು ೧೯೫೧ ರಲ್ಲಿ ಅಸೋಸಿಯೇಷನ್  ಗೆ President ಆಗಿ ಎಂಟುವರ್ಷ ಕಾಲ ಇದ್ದರು. ಇವರಿಗೆ ಸಂಗೀತದ ಹುಚ್ಚು. ಮೈಸೂರಿನ  ವೀಣೆ ವೆಂಕಟಗಿರಿಯಪ್ಪನವರ ಹತ್ತಿರ ವೀಣೆ ಕಲಿತಿದ್ದರು. ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರು ಬೊಂಬಾಯಿಗೆ ಬಂದಾಗಲೆಲ್ಲಾ ನಮ್ಮ ಮನೆಯಲ್ಲೇ ಇರುತ್ತಿದೃ. ಆಗ ಇವರಿಬ್ಬರೂ ಜುಗಲ್ ಬಂದಿ ಪ್ರಾರಂಭ ಮಾಡೋವೃ. ಯಾವ ಸಂಗೀತ ಕಚೇರಿ ಕೂಡ ತಪ್ಪಿಸಿಕೊಳ್ತಾ ಇರಲಿಲ್ಲ. ಅಸೋಸಿಯೇಷನ್  ನಲ್ಲಿ ಸಂಗೀತೋತ್ಸವ ಮಾಡಬೆಕೂಂತ ತಾನೇ ಇವರು ಗೌರಿ ಗಣೇಶೋತ್ಸವ ಮೊದಲು ಮಾಡಿದ್ದು. ಎಲ್ಲಾ ಸಂಗೀತಗಾರರನ್ನೂ ಕರೆಸೋವೃ.ಒಂದು ಸಲ ಅಸೋಸಿಯೇಷನ್ ಕಮಿಟಿನಲ್ಲಿ ದುಡ್ಡಿಲ್ಲ ;ಇಷ್ಟು ಖರ್ಚಿಗೆ ಅಂತಯಾರೋ ಗಲಾಟೆಮಾಡಿದ್ದಕ್ಕೆ ,”ನಾನೇ ಕೊಡ್ತೀನಯ್ಯ ನೀವೇನೂ ಹಾಕಬೇಡಿ” ಅಂತ ಒಂದು ಸಾವಿರ ರೂಪಾಯಿ ಕೊಟ್ಟು ಬಂದಿದೃ.  ಈ ಸಂಗೀತದ ಹುಚ್ಚಿಗೇ ಇವರು ಷಣ್ಮುಖಾನಂದ ಸಭಾ ಸೇರಿದ್ದು. ಅಲ್ಲಿ Music Festivals ಗಳನ್ನ ನಡೆಸುವುದಕ್ಕೆ ಸೇರಿಕೊಂಡಿದ್ದು. ಒಂದು ಸಲ ಯಾರೋ ಪುಂಡರು ಆ ಮಂಟಪಕ್ಕೆ ಬೆಂಕಿ ಹಾಕಿ ತುಂಬಾ ಗಾಬರಿಯಾಗಿತ್ತು.

ಮಂಜುನಾಥ್ : ಯಾರು ಬೆಂಕಿ ಹಾಕಿದೃ ?

ಶ್ರೀಕೃಷ್ಣ :  ಯಾರೋ ಗೊತ್ತಿಲ್ಲಪ್ಪ. ಆಗ ಷಣ್ಮುಖಾನಂದ ಕಟ್ಟಡ ಇರಲಿಲ್ವಲ್ಲ. ‘Don Bosco’ ಶಾಲೆಯ ಮೈದಾನದಲ್ಲಿ ನಮ್ಮಮನೆಯ ಮುಂದೆಯೇ ಒಂದು ದೊಡ್ಡಚಪ್ರ ಹಾಕ್ತಿದ್ರು. ಹಾಕಿದ ಮಂಟಪಾನ ರಾತ್ರಿ ಯಾರೋಸುಟ್ಟಿದ್ದರಿಂದ ಮತ್ತೆ ಚಪ್ಪರ ಹಾಕಬೇಕಾಯಿತು. ಆದರೆ ಇದರಿಂದ ಒಳ್ಳೆಯದೇ ಆಯಿತು ಎಂದು ಹೇಳಬೇಕು. ಆಗ ಎಲ್ಲರಿಗೂ ನಮ್ಮದೇ ಒಂದು ಕಟ್ಟಡ ಕಟ್ಕೋಬೇಕು ಅಂತ ಮನಸ್ಸು ಗಟ್ಟಿಯಾಗಿ೧೯೬೮-೬೯  ರಲ್ಲಿ ‘ಷಣ್ಮುಖಾನಂದ ಆಡಿಟೋರಿಯಂ’ ಕಟ್ಟಲಾಯಿತು.  ಅಪ್ಪ ಅದಕ್ಕೆ ಹಣ ಕೂಡಿಸುವುದರಲ್ಲಿ ಬಹಳಷ್ಟು ಕೆಲಸ ಮಾಡಿದರು.

ಶಾರದಮ್ಮ : ತಿರುಗಿ ಎಲ್ಲಿ ಚಪ್ಪರಕ್ಕೆ ಬೆಂಕಿ ಬಿದ್ದೀತೂಂತ ಇವರೆಲ್ಲಾ, ರಾತ್ರಿ ಚಪ್ಪರದಲ್ಲೇ ಮಲಗೋವೃ. ಅಷ್ಟು ಹುಚ್ಚು. 

ಮಂಜುನಾಥ್  ಅವರಿಗೆ ಸಾಹಿತ್ಯದ ಮೇಲೆ ಎಷ್ಟು ಹುಚ್ಚು ?

ಶಾರದಮ್ಮ:  ತುಂಬಾ ಇಷ್ಟ. ಏನಾದರೂ ಕವಿತೆ  ಬರಿತಾನೇ ಇರೋರು.

ಶ್ರೀಕೃಷ್ಣ :  ವರದ ರಾಜನ್ ಅವರ ಮಗಳು ವಿಜಯಲಕ್ಷ್ಮಿಮದುವೆಯಾದನಂತರ,”ಪೂನು ಪರಿಣಯ” ಎಂಬ ಕಾವ್ಯವನ್ನು ಬರೆದಿದ್ದಾರೆ. ಅದರಲ್ಲಿ ಅವಳಿಗೆ ತಕ್ಕ ವರನನ್ನು ಹುಡುಕುವ ಅರಸಾಟ, ವರ ಅವಳನ್ನು ನೋಡಲು ಬಂದಾಗ ಆದ ತರಾತುರಿ. ಮದುವೆಯ ಸಡಗರ. ಬೀಗರಾದ ಡಾ. ಸುಬ್ಬರಾಯರ ಮನೆಯವರ  ದಿಬ್ಬಣ.ಆಮೇಲೆ ಆದ ಸಣ್ಣಪುಟ್ಟ Skirmishes  ಎಲ್ಲಾ ಹಾಸ್ಯವಾಗಿ ಬರೆದಿದ್ದರು.

ಶಾರದಮ್ಮ: ಯಾವಾಗಲೂ ಇವರಿಗೆ ಹಾಸ್ಯ. 

ಮಂಜುನಾಥ್  ಎಲ್ಲಾ ಕಲೆಗಳ ಮೇಲೆ ಇಷ್ಟವಿದ್ದರೆ, ಸ್ಪೋರ್ಟ್ಸ್ ಮೇಲೆ ಅಂಥಾ  ಆಸಕ್ತಿ ಇರಲಿಲ್ಲವೇ ?

ಶಾರದಮ್ಮ: ಅಯ್ಯಪ್ಪಾ, ಕ್ರಿಕೆಟ್ ಹುಚ್ಚು ತುಂಬಾ. ಎಲ್ಲಿ ಕ್ರಿಕೆಟ್ ಮ್ಯಾಚ್ ಆದರೂ ಕೋರ್ಟ್ ಕೆಲ್ಸಾ ಕೂಡಾ ಬಿಟ್ಟು ಓಡಿಹೋಗ್ಬಿಡ್ತಿದೃ. ಒಂದು ಸಲ ಆ ಜಡ್ಜ್ ನ ಕೂಡ ಪುಸಲಾಯಿಸಿ ಬ್ರೆಬೊರ್ನ್ ಸ್ಟೇಡಿಯಂ ನಲ್ಲಿ ಯಾವುದೋ ಟೆಸ್ಟ್ ಮ್ಯಾಚ್ ಅಂತ ಓಡಿ ಹೋಗಿದ್ರು.  ಆರು ದಿನ. ಅಂಥಾ ಹುಚ್ಚು. ಮಕ್ಕಳನ್ನು ಸೇರಿಸ್ಕೊಂಡು ಈ ‘ಡಾನ್ ಬಾಸ್ಕೊ ಮೈದಾನ’ದಲ್ಲಿ ಕ್ರಿಕೆಟ್ ಭಾನುವಾರ- ಭಾನುವಾರ ಷುರು ಮಾಡ್ಕೊಂಡ್ಬಿಡೋರು.

ಶ್ರೀಕೃಷ್ಣ : ಅವರು President ಆಗಿದ್ದಾಗಲೇ ಅಸೋಸಿಯೇಷನ್  ನಲ್ಲಿ Basket ball, Table tennis, Billiards Tournament  ಗಳು ಮೊದಲಾಗಿದ್ದು.

ಮಂಜುನಾಥ್ : ಕನ್ನಡ ಸ್ಕೂಲು ಮೊದಲು ಮಾಡಿದ್ದು ಹೇಗೆ ?

ಶ್ರೀಕೃಷ್ಣ :  ಆರ್. ವೆಂಕಟೇಶ ಮೂರ್ತಿಯವರಿಗೆ ಮಕ್ಕಳಿಗೆ ಕನ್ನಡ ಶಾಲೆ ತೆರೆಯಬೇಕೆಂದು ತುಂಬಾ ಇಷ್ಟವಿತ್ತು. ನಾವೊಂದು ಶಾಲೆ ತೆಗೆಯೋಣ ಅಂತಹೇಳಿದ್ದಕ್ಕೆ, ಅಪ್ಪ ಸರಿ “ನಾನು ನನ್ನ ನಾಲ್ಕು ಮಕ್ಕಳನ್ನು ಶಾಲೆಗೆ ಹಾಕ್ತೀನಿ . ನೀನೊಂದು ನಾಕು ಮಕ್ಕಳು ನಿಂದು ಹಾಕು ” ಅಂದರು. ಹೀಗೆ ಮೈಸೂರು  ಅಸೋಸಿಯೇಷನ್ ನಲ್ಲಿ ಮೊದಲಾದ ಶಾಲೆ ಮಹಿಳಾಶ್ರಮದ ರಸ್ತೆಯ ಕಟ್ಟಡದಲ್ಲಿ ಎರಡುಕೋಣೆ,ನಂತರ, Army Barracks ನಲ್ಲಿ ಹರಡಿ, ಆಮೇಲೆ ವಡಾಲಾದ ಕಟ್ಟಡದಲ್ಲಿ ಬಂದು ನಿಂತಿತು. ಈ ಕೆಲಸದಲ್ಲಿ ಅಪ್ಪ, ವೆಂಕಟೇಶಮೂರ್ತಿ ಆರ್.ಡಿ.ಚಾರ್.ರವರ ಹೆಂಡತಿ ವೈದೇಹಿ ಚಾರ್, ವರದರಾಜನ್ ಅವರನ್ನೆಲ್ಲಾ ಸೇರಿದ್ದರಿಂದ ಕೆಲಸ ಕೈಗೂಡಿತು.

ಶಾರದಮ್ಮ:  ದತ್ತ, ಮಸೂರಿನಲ್ಲಿ ಓದ್ತಾ ಇದ್ದ. ಅವನು ಒಂದು ವರ್ಷ ಕನ್ನಡ ಶಾಲೇಲಿ ಓದಿದ. ಆಮೇಲೆ SIES ನಲ್ಲಿ.ಆದರೆ ಪಾಪು, ಶ್ರೀಕೃಷ್ಣ, ಲಕ್ಷ್ಮಿ, ಶ್ರೀಕರ  ಶ್ರೀಕಾಂತ, ಚಂದೃ ಎಲ್ಲರೂ ಕನ್ನಡ ಶಾಲೆಯಲ್ಲೇ ಓದಿದವರು.

ಶ್ರೀಕೃಷ್ಣ : ಅಪ್ಪ ಕನ್ನಡ ಶಾಲೆಯಲ್ಲಿ ಮಾಡುತ್ತಿದ್ದ ಕೆಲಸಗಳನ್ನು ನೋಡಿ SIES ನವರು ಕರೆದರು. ಅವರು ಆಗ ತುಂಬಾಕಷ್ಟದಲ್ಲಿದ್ದರು. ಅಪ್ಪ ಅಲ್ಲಿಯೂ ಸುಮಾರು ವರ್ಷ ಪ್ರೆಸಿಡೆಂಟ್ ಆಗಿದ್ದರು.ಹೀಗಾಗಿ ಅಪ್ಪನಿಗೆ ವಿದ್ಯಾಭ್ಯಾಸದಮೇಲೆ ತುಂಬಾ ಚಿಂತೆಯಿತ್ತು.

ಮಂಜುನಾಥ್  ಇದೆಲ್ಲಾ ಸಾರ್ವಜನಿಕ ಕಾರ್ಯಗಳಾದವು. ವ್ಯಕ್ತಿ ನಿಜವಾಗಿಯೂ ಹೇಗೆ ?

ಶಾರದಮ್ಮ: ಅವರು ಯಾವುದನ್ನೂ ತಲೆಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ. ಮಾಡುವ ಕೆಲಸದಲ್ಲಿ ಉತ್ಸಾಹ. ಆದರೆ ಮಾಡುವ ಕೆಲಸದಲ್ಲಿ ಮನೆಯವರನ್ನೆಲ್ಲಾ ತೊಡಗಿಸುವ ಹವ್ಯಾಸ. ತಾವು ಅಸೋಸಿಯೇಷನ್ ನಲ್ಲಿ ನಾಟಕ ಮಾಡ್ತಾ ಇದ್ರೆ,ನನ್ನನ್ನೂ ನಾಟಕಕ್ಕೆಳೆದರು. “ಮೀನಾಮದುವೆ” ನಾವು ಮೊದಲು ಜೊತೆಯಲ್ಲಿ ಮಾಡಿದ್ದು. ಯಾವಾಗಲೂ ಜೊತೆಜೊತೆಯಲ್ಲಿ ಇರಬೇಕೂಂತ ಅವರಿಗೆ ಆಸೆ.ಮಕ್ಕಳನ್ನು ಕಂಡರೆಪ್ರೀತಿ ಇದ್ದರೂ ಕೂಡ, ತುಂಬಾ ಶಿಸ್ತು. ಕಟ್ಟು-ನಿಟ್ಟು.  ಮನೆಗೆ ೬-೩೦ ಕ್ಕೆಮುಂಚೆ ಬರಬೇಕು.ಓದು ಕಡಿಮೆಯಾಗಿರಬಾರದು. ಮನೆಯಲ್ಲಿ ಜನ ಯಾವಾಗಲೂ ಬಂದು ಹೋಗುತ್ತಿರಬೇಕು. ನಮ್ಮ ಮನೆಯಲ್ಲಿ ಯಾವಾಗಲೂ ಅತಿಥಿಗಳು. ಗೋಪಾಲಾಚಾರ್ಯರನ್ನು ಕಂಡರೆ ತುಂಬಾ ಗೌರವ. ಅವರ ಪ್ರವಚನ,  ಭಜನೆಗಳಿಗೆ ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಶ್ರೀಕೃಷ್ಣನ್ನ ಅವರ ಹತ್ತಿರ ಅದ್ವೈತ, ವೇದ ಕಲಿಯುವುದಕ್ಕೆ ಕಳಿಸುತ್ತಿದ್ದರು. ಆಚಾರ ಸಂಪ್ರದಾಯವೆಂದರೆ ತುಂಬಾ ಗೌರವ. ಮನೆಯಲ್ಲಿ ನಾವು ಹೆಣ್ಣುಮಕ್ಕಳು, ಸೊಸೆಯರು, ಕೆಲಸಮಾಡುತ್ತಿದ್ದಾಗ, ಹೊದ್ದಿದ್ದ ಸೆರಗು ಒಂದೇ ಹೆಗಲಿಗೆ ಜಾರಿದ್ದರೆ, ಮಾತಿಲ್ಲದೆ ಹಿಂದಿನಿಂದ ಬಂದು ಸೆರಗನ್ನು ಹೊದ್ದಿಸಿ ಹೋಗುವ ಮನಸ್ಸು.

ಮಂಜುನಾಥ್ : ಅಮ್ಮ ನಿಮ್ಮ ಜೀವನದ ಬಗ್ಗೆ ನಿಮಗೆ ಎಷ್ಟು ಸಾರ್ಥಕತೆ ಇದೆ ಅಂತ ಅನ್ನಿಸುತ್ತೆ ?

ಶಾರದಮ್ಮ:  ಒಬ್ಬ ಹೆಂಗಸು ಏನನ್ನು ಬಯಸಬಹುದೋ ಅದಕ್ಕಿಂತ ಹತ್ತು ಪಟ್ಟು ನನಗೆ ಸಿಕ್ಕಿದೆ ಅನ್ನಿಸುತ್ತೆ. ೮ ಮಕ್ಕಳನ್ನು ಸಾಕಿದೆ.ಒಳ್ಳೆಯ ಅತ್ತೆಯೂ ಆಗಿದ್ದೇನೆ ಅಂತ ನನಗನ್ನಿಸುತ್ತೆ.

ಮಂಜುನಾಥ್ :  ಪೂರ್ಣಿಮಾ ಅವರನ್ನೇ ಕೇಳೋಣ. ಅಮ್ಮ ಒಳ್ಳೆಯ ಅತ್ತೇನೇ ?

ಪೂರ್ಣಿಮಾ :  photoಅತ್ತೆ ಅನ್ನೊದಕ್ಕಿಂತ, ಅಮ್ಮ, ಫ್ರೆಂಡ್ ಅಂತ ಅನ್ನಬಹುದು. ಅವರಿದ್ದಲ್ಲಿ ನೆಮ್ಮದಿ. ತೃಪ್ತಿ ತುಂಬಿರುತ್ತದೆ.

 

 


(ಸಂದರ್ಶನ ಮುಗಿಯಿತು)

English version of the Interview  :

Shri. Belluru Narayana swamy’s centenary celebration was celebrated at The Shanmukhananda hall. On 31st, Aug, 2008, jointly by  The Mysore Association, and Shankhananda fine arts sabha. Shri. N. Doreswamy, the then Chairman, of MA, spoke on the dais, recalling the great services done by Shri. B. Narayana swamy, (worked for more than a decade, as  Vice Patron, and Chairman)

The Mysore association brought out a special issue of ‘NESARU’, on Aug, 2008  ! An interview was conducted by Dr.B.R.Manjunath, specially for the Association magazine, nesaru. (Smt.Sharadamma narayana swamy, Smt. Purnima srikrishna, and Shri. Srikrishna took part in the discussion)

(Original interview was in Kannada; for the benefit of people who can not understand kannada, the excerpts are given in  English language)

Introduction of Dr. B.R. Manjunath :

Shri. B. R. Manjunath, secured his M.Sc degree, from the University of Mysore in 1961, and later joined BTRA, Mumbai as the Jr. Scientific Officer, He earned Ph. D from Scotland, under the guidance of Prof. Meredith. The subject was, “Studies of polymer & X-ray diffraction”. Returned to Mumbai and continued at BTRA. Later he joined Textiles Committee, Mumbai as Director of Laboratory, Director of Vigilance, and Inspection divisions.

He was responsible to initiate and train the staff of two, Private Testing laboratories, in Mumbai and other important cities of India. Further, he joined SVIMS, Wadala, as the chief of Core mentors. He has been serving as the Director general, and Mentor of NKIES.

Dr. B.R.Manjunath, is a kannada stage actor,Writer, Director, He is closely associated with the ‘Lalit kala division of Mysore Association’, since 4 decades. Theater is his forte, apart from that, he loves, Music, Dance and Cultural activities. Karnataka Sangha of Mumbai, has awarded him “Sadhna shikhara prashati”, in recognition of his over all contributions, viz : Theater, institutions building, etc;

Manjunath : AOL, Ghkpr, HRLV, SAROJ 096-framed Amma, where were you born ?

Sharadamma :

 AOL, Ghkpr, HRLV, SAROJ 091-framed

I, was born at a village called Salagame. My parents were Shri. Mylar jois, and Smt. Lakshmidevamma. Among the 5 children i was second and I had two youger brothers and two younger sisters, and and one brother elder to me.

Manjunath :   Where did Shri. Narayana swamy born ? And about his education.

Sharadamma : Now a days my  memory power is diminished and can’t recollect the events immediately.  Please ask Sririshna.

 bns.

Srikrishna :  Appa was born at Chikkaballapur, Among 14 children, to his father, 6 brothers and 8 sisters,including himself. Appa’s Uncle was Educational inspector,at Chikkaballapur, When ever transfers took place children were joined differenct schools. Appa had his initial schooling at Kyatsandra.(ಕ್ಯಾತ್ಸಂದ್ರ), He has to walk all the way to Tumkur.(ತುಮಕೂರು)

Sharadamma : Electric lights were not available in homes. So, one has to study under the street lights.

Srikrishana :  Appa, completed his  B,A,degree from the University of Mysore. From Pune university, he completed his  (LLB) Law degree. In the 1929, came to Mysore, and practiced law, under a Sr. lawyer, Venkata krishnaiah, who was serving at the District Magistrate court. He learnt from his friends that Bombay, has more scope to pursue as lawyer, So, he proceeded to Bombay, with a suitcase in his hand.

Sharadamma : Then, he was 24 years of age.

Srikrishna :   After landing in Bombay, he  Stayed at Daulat villa, next to Tejukayya park, at Matunga. His room mates were,Shri. Ramachandra, Shri. R.Venkatesha murthy, for some years. Later, shifted to Deodhar cross road also. He could not practice law, because of new place, and lack of contacts.  Instead he secured a job at Shapurji Textile mills, deslisle road as a Legal adviser.

Manjunath :   When was  the marriage solemnized ? Before coming to Bombay or after.

Sharadamma :

My husband got married in Mysore. From this first wife, he  had two children, Datta, and Papu. I came to his life when he was 24 years old. I was 14 years then. After our marriage we came to Bombay and initially stayed  at Matunga, in ‘Mount Matunga mansion’, for two years. 

Manjunath : Since when he started going to MA ?

After coming to Bombay, he made an inquiry of The Mysore association, and started going there during evenings. My husband was very good in dressing like budubudikewala, Havadiga, etc. So, enacting those roles, he used attract his friends, and relatives. During Fancy dress competitions, he got many prizes. After coming from Court, he was going straight to Mysore association, to participate in the kannada  drama rehearsals. He had many friends,who were very good actors, and singers. He used to spend too much time even on sun days.  

Manjunath :

How was his professional career as a lawyer, in a new city like Bombay  ?

Srikrishna :

Joined as the legal Adviser at Shapurji mills, He was specialised in The Act of Labor laws Vithal Chandavarkar, was the president of Bombay Mill owners’ association then. By observing the arguments, and presentation of his views, he was impressed and made him, one of the Standing council members of MOA. This new assignment gave him impetus to furter his profession, as a lawyer.

Varadarajan, CEO of Hindustan construction company was our distant relative, and his help in introducing many top executives is worth mentioning here. Because of his recommendations, B.N. became the adviser to H.C.C. specialized in industrial dispute act, and labor law

Sharadamma :

Varadarajan built a big house at Matunga, just behind UDCT, He requested us to come and stay in the same building. Since then we are living in this building.

You mentioned during our discussion, that BN had great passion for Dramas.  How many dramas he took part.

Sharadamma :

So many dramas were enacted then, I do not exactly remember, now.He was very much interested in Dramas, and fine arts like, music, Dance, and cultural activities. During 1946-48, the famous kannada Drama writer, T.P. Kailasam came to Bombay and used to stay at The Mysore Association. Kailasam had very big fan circle. Among them, B.G.Achar, V.K,.Murthy, G. Narayanaswamy, and host of other fans.

When V.K.Murthy joined Association, BN, initiated him to take directions of  many dramas at The Mysore Association. Like that the Association, organised several dramas written by Kailasam : It became a craze to act in dramas then. Some of the important dramas, which interested the audience then were :

* Gandaskatri, (ಗಂಡಸ್ಕತ್ರಿ),

* Bandwalvillada badayi, (ಬಂಡವಾಳವಿಲ್ಲದ ಬಡಾಯಿ)

* Home rule, etc;(ಹೋಂ ರೂಲ್ ಇತ್ಯಾದಿ).

 ಪುಟ : ೫ 

Manjunath :  Amma, Were you not taking part in the activities of  Association ?

Sharadamma :

Yes. I too was was taking part with my friends. At the Mysore Association, Ladies wing started. Stitching, Embroidery, Bamboo handicraft works, etc, were made by Mrs. Seethamma rao, Mrs. Garudachar, Mrs. Shyamalamba P.N.murthy. Sharadamma also joined. B.N. was the president of Mysore Association (1951-59) for 8 years.

He liked to play Veena. Mysore veena  venkatagiriyappa taught veena to him. Whenever Veena maestro, N. Doraiswamy iyengar came to Bombay, he used to stay in our house. Both were playing jugal bandi, on Veena. He never missed a single music concert,conducted in Bombay. During his period as the president Ganeshotsav, started at MA, all artists were invited from karnataka came to MA. When ever some shortage of funds he, paid Rs.1,000/-once. The passion for music was the reason that he started associating with Shanmukhananda sabha.He joined to conduct music festivals. once  some miscreants put fire to the pandal. We were all scared.

Manjunath :  Who did this heinous act ?

Shrikrishna : 

We did not have any clues. Shanmukhananda sabha did not have their own building then. Pandals were erected at Don Bosco school grounds and in front of our building. But once the pandal got burnt by some people. This act made the music enthusiasts very unhappy. Some times we used to sleep in the pandals during night as, watchmen. Some how, it was not practicable. Every one had the opinion to construct our own hall to cater to the needs of the kannadigas staying in Bombay.  Appa was taking very big role in funds collection drive. ೧೯೬೮-೬೯. Auditorium was erected by the generous contributions by the public.

Appa, Joined The Shanmukhananda sangit sabha. Classcial music was yet another forte for him. Many music festivals were organised by him. Once the pendal got fire by some miscreants,  who were not liking.

Sharadamma : All gents used to sleep in the pandals during night time, as watchmen.

Manjunath : Had he any inclination towards the  Literature ? 

Srikrishna :  Yes. He was writing poems and articles when ever he gets time. Starting from arranging a suitable alliance to marriage to our niece, all the events chronologically covered in his book, in a humorous way, like marriage excitements, ceremony etc etc. A few Skirmishes which took place were nicely recorded in the book. 

Sharadamma : He was always  used to be jolly. Not  very much serious  about  house hold matters.

Manjunath : What about sports?

Cricket, was much liked sports. Some times, after leaving office he used to go to Brabourne stadium, to see matches, along with magistrate friend. On Sundays. he used to play cricket with children in the grounds of Don bosco school, which is very near to our house.

Srikrishna :  Basket ball, Billiards, T.T. tournaments conducted during the tenure of  his president ship. 

Pandit. Gopalachar, was very much respected.  He  was attending his lectures on Vedanta. Never missed Bhajan, Sankritans, pujas etc; he Respected our old traditions, and rituals.

Manjunath: when did Kannada school start ?

Srikrishna : When  R.V. Murthy, proposed about starting a kannada school in bombay, appa agreed to send his children to attend. He requested other friends to send as many children as they can. An experimental school started at Mysore Association, and later shifted to Mahilashram road building in two rooms. Further in Army barracks, finally at Wadala  district. The enthusiasts toiled for this mission were, Appa, R.V.Murthy, Vaidehi char, Varadarajan, and others.

Sharadamma : Datta, who was studying at Mysore  was asked to join and he studied for one year. Later joined SIES.  But, Papu, Srikrishna, lakshmi, Shrikara, and Chandru,all studied at NKIES. 

Srikrishna :  After working for NKIES school, SIES achool invited  Appa, and he became the president there, for several years.

Manjunath : After knowing  him as a responsible Social work, how was your husband, as a person  ?

Sharadamma : Working  for social cause was his forte. He used to involve all the members of the house. One drama played at The Mysore Association was, ‘Meena maduve’, still I remember.  We acted together. He liked children;  but strict. They  should come before, 6-30 pm. should study well. So many guests used to be in our house always. Mahuli Gopalacharya, was very much liked by all of us.  We used to send Srikrishna to learn Advaita, and Vedas with him. B.N. liked old traditions and sampradayas. Purnima,our  lovable daughter-in-law, is liked by every one in the house.

What ever work he does, with full devotion and enthusiasm. Not only that involve every one in the family. When The ‘Meen maduve’ drama was enacted  for for particular occasion, he invited me to take part, So, both of us acted in that drama. He wanted, we should be together always, Children were very much loved. But he was very strict about about their upbringing. They should be at home,before dusk, at 6-30 p.m. No compromise about their studies. Hardworking is a must. Our house was always full with guests, and relatives.

Manjunath : With this family background, marrying a lawyer, writer, one who is connoisseur of drama, music, literature, and social works, how do you feel ? Do you feel satisfied in married life ?

Sharadamma  : By  entering into this ‘Belluru family house hold, I felt a deep sense of fulfillment in my life. I raised 8 children, I think I have  became a good mother- in-law, grandmother.  God is very kind to me; I got a great husband, Children, grand children. I feel the destiny has offered me more, than I deserved. I am very thankful to the almighty for that.

Manjunath :   Purnima Madam, What is your say about your mother-in-law  ?

Smt. Purnima srikrishna :

 photo

“Amma,” as I always call her lovingly, is a true friend to me. She has been the inspiration to all of us in the family, promoting  grace, dignity, and sense of security unconditionally, always  !

 
 
 
 
 
 
 
 
 
 
 
 
 
.
 
.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
.
 
.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

 

 

l

Advertisements

Published by ದಿನ ಪ್ರತಿದಿನ !

ಮುಂಬಯಿನಲ್ಲಿ ಹತ್ತಿ ಸಂಶೋಧನಾಲಯದಲ್ಲಿ ಕೆಲಸಮಾಡಿ 37 ವರ್ಷ ಸೇವೆಮಾಡಿ ಸೇವಾನಿವೃತ್ತನಾಗಿದ್ದೇನೆ. ಈಗ ಇಂಟರ್ನೆಟ್ ಮತ್ತು ಫೇಸ್ ಬುಕ್, ಬ್ಲಾಗಗಳ ರಚನೆ, ಮತ್ತು ಓದು ಬರಹಗಳಲ್ಲಿ ವ್ಯಸ್ತನಾಗಿದ್ದೇನೆ.

ನಿಮ್ಮ ಟಿಪ್ಪಣಿ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: