ಭಾರತದ ಇತಿಹಾಸದ ಸ್ಮರಣೀಯ ದಿನಗಳು !

ಗಾಂಧಿ ನೆನಪು-1

This slideshow requires JavaScript.

ಸ್ವಾತಂತ್ರ್ಯದ ಹೋರಾಟ ಮುಗಿಯಿತು. ದೇಶಕ್ಕಾಗಿ ಹೋರಾಡಿ ಮಡಿದ ಲಕ್ಷಾಂತರ ರಾಷ್ಟ್ರಪ್ರೇಮಿಗಳ ತರಹ ಗಾಂಧಿಯವರೂ, ಅಮರರಾದರು !

ಸ್ವರಾಜ್ಯ ಸಿಗುವವರೆಗೂ ಭಾರತದ ಜನ ಅತ್ಯಂತ ಸಂಯಮದಿಂದ ನಡೆದುಕೊಂಡಿದ್ದರು. ಗಾಂಧೀಜಿಯವರಜೊತೆಗೆ ಸೊಂಟಕ್ಕೆ ಸೊಂಟಕೊಟ್ಟು, ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆದರೆ, ಸ್ವತಂತ್ರ್ಯಬಂದ ಕೆಲವೇ ತಿಂಗಳುಗಳಲ್ಲಿ ಅವರು ತೋರಿಸಿದ ಮುಖವಾಡವೇ ಬೇರೆಯದಾಗಿತ್ತು. ಇಲ್ಲಿ ದ್ವೇಷ, ಅಸೂಯೆ, ಅಸಮಧಾನ, ಅಪನಂಬಿಕೆ, ಅನಾದರ, ಅವಿಶ್ವಾಸಗಳ ಮಹಾಪೂರವೇ ಹರಿದುಬರುವಂತೆ ಭಾಸವಾಗುತ್ತಿತ್ತು. ಒಮ್ಮೆ ನಿಧಾನವಾಗಿ ಯೋಚಿಸಿದಾಗ, ಇದೇ ಜನರೇ ಈಗ ಹೀಗೆ ವರ್ತಿಸುತ್ತಿರುವುದು, ಎನ್ನುವಷ್ಟು ಅವರು ಬದಲಾಯಿಸಿದ್ದರು. ಎಲ್ಲರ ಮೇಲೂ ಅಪನಂಬಿಕೆ. ಶಾಂತಿ, ಸೌಹಾರ್ದತೆಗಳು ಕೇವಲ ಕಾಗದದ ತುಂಡಿನಮೇಲೆ ಇರುವಂತೆ ಭಾಸವಾಗುತ್ತಿತ್ತು.

ಈಗ ಯಾರಿಗೂ ಗಾಂಧೀಜಿಯವರು ಬೇಡ. ಅವರ ತತ್ವಗಳೂ ಆಷ್ಟೆ. ಮಹಾತ್ಮಾ ಗಾಂಧಿಯವರೂ ಇದನ್ನು, ಕಣ್ಣಾರೆಕಂಡರು. ಅವರ ಆಪ್ತ ಸ್ವಾತಂತ್ರ್ಯ ಚಳುವಳಿಯ ಹಿಂಬಾಲಕ, ಕೊಂಡವೆಂಕಪ್ಪಯ್ಯ, ಎಂಬ ೮೦ ವರ್ಷದ ಹಿರಿಯ ಕಾಂಗ್ರೆಸ್ ಕೆಲಸಗಾರ, ೧೯೦೦ ರಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದಿದ್ದ. ಆತ, ಗಾಂಧೀಜಿಯವರಿಗೆ ಪತ್ರಬರೆದು, ದೇಶದಲ್ಲಿ ಬೆಳೆಯುತ್ತಿರುವ, ಸಾಮಾಜಿಕ ವಲಯಗಳಲ್ಲಿನ ಅಸ್ಥಿರತೆಯನ್ನು ಕುರಿತು ಬರೆದ ಪತ್ರ, ಹೀಗಿದೆ :

” ಸ್ವತಂತ್ರ್ಯ ಸರ್ಕಾರ ಬಂದ ೫ ತಿಂಗಳಲ್ಲಿ ಭಾರತದೇಶದ ಜನ ಧೃತಿಗೆಟ್ಟಿದ್ದಾರೆ. ಲಂಚ, ರಿಷ್ವತ್ತುಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರಕ್ಕಿಂತ ಫಿರಂಗಿಯವರ ಸರ್ಕಾರವೇ ಚೆನ್ನಾಗಿತ್ತೇನೋ, ಎನ್ನುವ ಸಂಶಯ ಬರಹತ್ತಿದೆ. “ಏಕೆಂದರೆ ಶಿಸ್ತು, ವ್ಯವಸ್ಥೆ, ಮತ್ತು ಕಾರ್ಯತತ್ಪರತೆ, ಎಲ್ಲೋ ಮಾಯವಾದಂತಿದೆ,” ಎನ್ನುತ್ತಿದ್ದಾರೆ ಜನರು”.

ಈ ಮಾತುಗಳು ಕೇವಲ ವೆಂಕಪ್ಪಯ್ಯನವರದಾಗಿರಲಿಲ್ಲ. ಬದಲಾಗಿ ಅದು, ಬದಲಾಗುತ್ತಿದ್ದ ಭಾರತದ ನಾಗರಿಕರೆಲ್ಲರ ಸಾಮೂಹಿಕ ಕೂಗಾಗಿತ್ತು. ಹಿಂದೂ-ಮುಸಲ್ಮಾನರು ಆಣ್ಣ-ತಮ್ಮಂದಿರಂತೆ ಬಾಳಲಿ, ಎನ್ನುವ ಬಾಪುವಾಣಿಯನ್ನು ಯಾರೂ ಪಾಲಿಸುತ್ತಿಲ್ಲ. ಇದನ್ನೆಲ್ಲಾ ಬಾಪೂ ಗಮನಿಸುತ್ತಲೇ ಇದ್ದರು. ಅವರಿಗೆ ಏನನ್ನು ಹೇಳಲೂ ಸಾಧ್ಯವಾಗಲಿಲ್ಲ. ಇನ್ನು ಮುಂದೆ ಹೋರಾಟಮಾಡುವಷ್ಟು ದೇಹಧಾರಢ್ಯ, ಅವರಲ್ಲಿರಲಿಲ್ಲ. ೭೯ ವರ್ಷ ವಯಸ್ಸಾಗಿದ್ದ ಗಾಂಧಿಯವರ ಮನಸ್ಸಿನಲ್ಲಿ ಜೀವನದ ಸಮರದಲ್ಲಿ ಸ್ವಲ್ಪ ಸೋತಂತೆ ಭಾಸಾವಾಗುತ್ತಿತ್ತು. ಮನೆಯಲ್ಲಿ ಮಕ್ಕಳಿಗೆ ಸರಿಯಾದ ವಿಧ್ಯಾಸವಿಲ್ಲದೆ ಅವರು ಪರಿತಪಿಸುತ್ತಿದ್ದರು. ಕಸ್ತುರ್ ಬಾ ಅವರನ್ನು ಅಗಲಿ, ಆಗಲೇ ೪ ವರ್ಷಗಳಾಗಿತ್ತು. ವಯಸ್ಸು, ಹಾಗೂ ನಿತ್ರಾಣ ಅವರಮೇಲೆ ಮೋಡಿಮಾಡಿತ್ತು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸನ್ನು ವಜಾಮಾಡಲು, ಅವರು ಪದೇ ಪದೇ ರಾಜಕೀಯ ಮುಖಂಡರಿಗೆಲ್ಲಾ, ಮನವಿಮಾಡಿಕೊಂಡರು. ಆದರೆ, ಮುಂದೆ ಸರ್ಕಾರದ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಡೆಸಲು, ಕಾಂಗ್ರೆಸ್ಸಿನ ಪಾತ್ರವೇ ಬಿರುಸಾಗಿತ್ತು. ಅಷ್ಟರಲ್ಲೇ, ಅವರು ೧೯೪೮ ರಲ್ಲಿ ಆಗುಂತಕನೊಬ್ಬನ ಗುಂಡಿನೇಟಿಗೆ ಶಿಕಾರಿಯಾದರು.

ದೀಪ ನಂದಿಹೋಯಿತು. ದೀಪದ ಆಕಡೆ ಕತ್ತಲಿರುವಂತೆ, ಮಹಾತ್ಮರ ೩೩ ವರ್ಷಗಳ ಒಡಾನಾಟದ ಪ್ರಭಾವದ ಕ್ಷಣಗಳು ತಮ್ಮ ಕಾಂತಿಯನ್ನು ಕಳೆದುಕೊಂಡಿದ್ದವು. ಆದರೆ ಇವೆಲ್ಲದರ ಮಧ್ಯೆಯೂ ಆಶಾಕಿರಣ, ಅಂಧಕಾರದ ನಡುವೆ, ತೂರಿಬರುತ್ತಿತ್ತು. ಹೊಸ ದೇಶ, ಸ್ವಛ್ಛಂದ ವತಾವರಣ. ಒಳ್ಳೆಯದು ಕೆಟ್ಟದ್ದು ಮಾಡುವವರು ನಾವೇ, ನಮ್ಮ ಜನರೇ, ಎನ್ನುವ ಭಾವನೆ ಯುವಜನರನ್ನೂ, ದೇಶವಾಸಿಗಳನ್ನೂ, ಹುಚ್ಚೆಬ್ಬಿಸಿತ್ತು. ಹೊಸ ನಾಳೆಗಳು ತೆರೆಯುತ್ತಾ ಹೋಗುತ್ತಿದ್ದಂತೆ, ಹೊಸ ಹೊಸ ಪ್ರತಿಭೆಗಳು ಭಾರತದ ದಿಗಂತದಲ್ಲಿ, ಪ್ರಜ್ವಲಿಸಲಾರಂಭಿಸಿದವು. ೬೦ ಪ್ರಾಯೋಗಿಕ ವರ್ಷಗಳು ಉರುಳಿವೆ. ಹಳೆಯ ತಪ್ಪುಗಳನ್ನು ಮರೆತು, ಹೊಸದಾಗಿ ಕಾರ್ಯದಲ್ಲಿ ತೊಡಗೋಣ.

ಇದರಲ್ಲಿ ತಪ್ಪಾದರೆ ಏನು ? ನಾವೇ, ನಮ್ಮವರಿಂದ ತಾನೇ ? ಸರಿಪಡಿಸಿಕೊಂಡು ಒಂದು ಭವ್ಯ ರಾಷ್ಟ್ರವನ್ನು ನಿರ್ಮಿಸೋಣ !

ಸ್ವಾತಂತ್ರ್ಯ ಭಾರತದ ಹೊಸ ಅಧ್ಯಾಯದ, ಶುಭಾರಂಭ !

೧೯೪೭, ನೆ ಇಸವಿ, ಆಗಸ್ಟ್, ೧೫ ರ, ಮಧ್ಯರಾತ್ರಿ, ನಮ್ಮ ಮೊಟ್ಟ ಮೊದಲ ಪ್ರಧಾನಿ, ಜವಹರ್ಲಾಲರು ಮಾಡಿದ ಚಾರಿತ್ರ್ಯಿಕ ಭಾಷಣದ ಕೆಲವು ಸಾಲುಗಳು :

” ಶತಮಾನಗಳಿಂದ ನಮ್ಮ ದೇಶದ ಭವಿಷ್ಯದ ಬಗ್ಗೆ, ರಾಜಿಮಾಡಿಕೊಂಡು ಕಾಯುತ್ತಲೇ ಇದ್ದೆವು ನಾವು. ಅದು ನನಸಾಗುವ ಕಾಲ ಇಂದು ಬಂದಿದೆ. ನಮ್ಮ ದೇಶದ ದಾಸ್ಯದ -ಸಂಕೋಲೆಗಳನ್ನು ಕಳಚಿ ಬಿಸಾಡಲು ಮಾಡಿದ ಹಲವಾರು ಪ್ರತಿಜ್ಞೆಗಳು, ಸಾಕಾರವಾಗುವ ಕಾಲ ಒದಗಿ ಬಂದಿದೆ. ಪೂರ್ತಿಯಾಗಿ ನಾವು ಕಳೆದುಕೊಂಡದ್ದನ್ನೆಲ್ಲಾ ವಾಪಸ್ ಪಡೆಯಲು ಸಾಧ್ಯವಾಗದಿದ್ದರೂ, ನಮ್ಮ ಬಹಳಷ್ಟು ಕನಸುಗಳು ನನಸಾಗಲಿವೆ. ಈಗ ಹೊಡೆದ ಈ ಮಧ್ಯರಾತ್ರಿಯ ೧೨ ಗಂಟೆಯ “ಧಣಾರ್” ನಾದದೊಂದಿಗೆ, ನಮ್ಮ ಭಾರತ ಎಚ್ಚೆತ್ತು ಕಾದು ಕೂತಿದೆ ; ತನ್ನ ಮುಂದಿನ ಜೀವಿತದ ಭವಿತವ್ಯದ ಆಸೆ, ಆಕಾಂಕ್ಷೆಗಳನ್ನು ಕಾರ್ಯಗತಗೊಳಿಸಲು ; ಇಂತಹ ಭರವಸೆಯ ಕ್ಷಣಗಳು ಯಾವಾಗಲೋ ಚರಿತ್ರೆಯಲ್ಲಿ, ಕೆಲವೊಮ್ಮೆ ಬರುತ್ತವೆ, ಆದರೆ ಬಹಳ ಅಪರೂಪವಾಗಿ ; ಹಾಗೆ ಬಂದಾಗ ನಾವು, ಹಳೆಯ ಜಡ್ಡುಗಟ್ಟಿದ ಸಂಪ್ರದಾಯದಿಂದ ಮೇಲೆದ್ದು, ಹೊಸದನ್ನು ಅಪ್ಪಿಕೊಳ್ಳುತ್ತೇವೆ. ಒಂದು ವ್ಯವಸ್ಥೆಯಿಂದ ಇನ್ನೊಂದು ಉತ್ತಮ ವ್ಯವಸ್ಥೆಯಕಡೆಗೆ, ಚಿಮ್ಮುತ್ತೇವೆ. ಬಹುಕಾಲ, ನಮ್ಮ ಹೃದಯಾತ್ಮಗಳನ್ನು ಹಿಡಿದಿಟ್ಟಿದ್ದ ವೇದನೆಯ ಪೊರೆ ಕಳೆದು, ಎಲ್ಲೆಡೆ ಸ್ವಾತಂತ್ರ್ಯದಕೂಗು, ಪ್ರತಿಧ್ವನಿಸುತ್ತಿದೆ. ಭೂತಕಾಲದ ಅನಿಷ್ಟಗಳನ್ನು ಮರೆತು, ಹೊಸ ಸಂಭ್ರಮದ-ನಾಳೆಗಳನ್ನು ಕಂಡುಕೊಳ್ಳಲು ಹೊರಟಿದ್ದೇವೆ, ನಾವು. ” !

“Long years ago we made a tryst with destiny, and now the time comes when we will redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends and when the soul of a nation, long suppressed, finds utterance…. We end today a period of ill fortune, and India discovers herself again.”

– Jawaharlal Nehru (Speech on Indian Independence Day, 1947)

ಇಂತಹ ಸುಂದರ ರಾತ್ರಿಯ ಶುಭಸನ್ನಿವೇಷದಲ್ಲೂ ನಮ್ಮ ಮಹಾತ್ಮ ಗಾಂಧಿಯವರು, ಭಾರತದೇಶದ ಭಾವೈಕ್ಯತೆಗಾಗಿ, ಉಪವಾಸವನ್ನು ಕಲ್ಕತ್ತಾದಲ್ಲಿ ಮಾಡುತ್ತ, ತಮ್ಮ ದೇಹವನ್ನು ದಂಡಿಸುತ್ತಿದ್ದರು. ಬೇರೆ ಇಂದಿನ ನಮ್ಮ ರಾಜಕಾರಿಣಿಗಳಾಗಿದ್ದಿದ್ದರೆ, ಮನೆ-ಮಂದಿಯನ್ನೇಲ್ಲಾ ವೇದಿಕೆಗೆ ಕರೆತಂದು, ದೊಡ್ಡ ಹಂಗಾಮವನ್ನೇ ಮಾಡುತ್ತಿದ್ದರು.

-ಜವಹರ್ ಲಾಲ್ ನೆಹ್ರು, ೧೫, ಆಗಸ್ಟ್, ೧೯೪೭. ಮಧ್ಯ ರಾತ್ರಿ, ೧೨ ಘಂಟೆ. ಲಾಲ್ ಕಿಲ, ಹೊಸ ದೆಹಲಿ.

-ಸಂಗ್ರಹದಿಂದ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s