Belluru Narayana swamy,well known lawyer of Mumbai !

This slideshow requires JavaScript.

ಶ್ರೀ ಬಿ.ನಾರಾಯಣಸ್ವಾಮಿಯವರ ಶತಮಾನೋತ್ಸವವನ್ನು ಷಣ್ಮುಖಾನಂದಾ ಸಭಾಗೃಹದಲ್ಲಿ ಆಚರಿಸಲಾಯಿತು.

೩೧, ಆಗಸ್ಟ್, ೨೦೦೮ ರಂದು ಶ್ರೀ ಷಣ್ಮುಖಾನಂದ ಸಂಗೀತ ಸಭಾ ಹಾಗೂ ಎಸ್.ಐ.ಇ.ಎಸ್ ಇವರೊಡನೆ ಜೊತೆಗೂಡಿ ಮೈಸೂರ್ ಅಸೋಸಿಯೇಷನ್,  ಶ್ರೀ ಬಿ.ನಾರಾಯಣ ಸ್ವಾಮಿಯವರ ಶತಮಾನೋತ್ಸವವನ್ನು ಷಣ್ಮುಖಾನಂದಾ ಸಭಾಗೃಹದಲ್ಲಿ ಆಚರಿಸಿತು. ಈ ಸಂದರ್ಭದಲ್ಲಿ  ಅಸೋಸಿಯೇಷನ್ ಅಧ್ಯಕ್ಷರಾದ ಎಸ್. ದೊರೆಸ್ವಾಮಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಸೋಸಿಯೇಷನ್ ಗೆ ನಾರಾಯಣಸ್ವಾಮಿಯವರಿಂದ ಸಂದ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸೂಚಿಸಿದರು.

ವ್ಯಕ್ತಿ ಚಿತ್ರ :   ನೇಸರು, ಸೆಪ್ಟೆಂಬರ್, ೨೦೦೮,  ಪು. ೪, 

ಶ್ರೀ  ಬೆಳ್ಳೂರು ನಾರಾಯಣಸ್ವಾಮಿ 

ಡಾ. ಬಿ.ಆರ್.ಮಂಜುನಾಥ್,  ‘ನೇಸರು ವಿಶೇಷ ಸಂಚಿಕೆ’,ಯಲ್ಲಿ ಬರೆಯುತ್ತಾ ಹೋಗುತ್ತಾರೆ. 

ನಾನು ೧೯೬೨  ರಲ್ಲಿ ಮುಂಬಯಿನ ಮೈಸೂರು ಅಸೋಸಿಯೇಷನ್ ಗೆ ಬಂದಾಗ, ನಾನಿನ್ನೂ “ಬಚ್ಚಾ. “ಅಸೋಸಿಯೇಷನ್ ನಲ್ಲಿ ಅನೇಕ  ಘಟಾನುಘಟಿಗಳಾದ ಮಹಾಪುರುಷರಿದ್ದರು. ಅವರಲ್ಲಿ ಬಿ.ರಾಯಣಸ್ವಾಮಿ ಮೊದಲಿಗರು. ನಾನು ಒಂದು ಕಾರ್ಯಕ್ರಮದಲ್ಲಿ ಅವರನ್ನು ಕಂಡಾಗ, ಅವರ ಕಣ್ಣುಗಳು ಯಾವಾಗಲೂ ನಗುತ್ತಿರುವುದನ್ನು ನೋಡಿ ವಿಸ್ಮಯಗೊಂಡಿದ್ದೆ. ಆದರೆ ಮಹಾಗಾಂಭೀರ್ಯ. ನನಗೆ ನಿಜವಾಗಿ ಈ ಕುಟುಂಬದ ಅತಿ ಸನಿಹದ ಪರಿಚಯ ೧೯೭೦ ರಿಂದ. ಶ್ರೀಮತಿ. ಶಾರದಮ್ಮನವರು  ಯಾವಾಗಲೂ ನಗುತ್ತಿರುವ ತಾಯಿ. ನೋಡಿದವರ ಮನದಲ್ಲಿ ಆತ್ಮೀಯತೆಯನ್ನು ಮೂಡಿಸುವಂತಹವರು. ನನ್ನನ್ನು ಯಾವಾಗಲೂ ಮಗುವಂತೆಯೇ ಕಂಡವರು. ಅತಿ ಚೇಷ್ಟೆಯಿಂದ ಮಾತನಾಡಿದಾಗ,  ನಗುನಗುತ್ತಾ ಒಂದು ಏಟು ಕೈಯಮೇಲೆಹಾಕಿ ಎಚ್ಚರವನ್ನು ನೀಡುವವರು. ನಾನು ಎಷ್ಟೇಬಾರಿ, ಅಸೋಸಿಯೇಷನ್ನಿನ ಕೆಲಸದ ಮೇಲೆ ‘ಲೀಗಲ್ ಆಡ್ವೈಸ್’ ಕೇಳುವುದಕ್ಕೆ  ಹೋದಾಗ ಮೊದಲು ಅಮ್ಮ ಕೊಟ್ಟ ಕಾಫಿ ಕುಡಿದು, ಆಮೇಲೆ ನಾರಾಯಣ ಸ್ವಾಮಿಯವರು ಅಥವಾ ಶ್ರೀಕೃಷ್ಣ ಅವರ ಜೊತೆ ಅಡ್ವೈಸ್ ಪಡೆಯುವುದು. ೧೯೮೩ ಮಾರ್ಚ್ ನಲ್ಲಿ, ನಾರಾಯಣ ಸ್ವಾಮಿಯವರು ಕೊನೆಯುಸಿರೆಳೆದಾಗ, ಅಸೋಸಿಯೆಷನ್ ನವರೆಲ್ಲಾ ಮನೆಮುಂದೆ ನೆರೆದಿದ್ದರು.

ಅವರನ್ನು, ಅಸೋಸಿಯೆಷನ್  ನವರು (ಅವರೆದುರಿಗಲ್ಲ) “ಟೈಗರ್ ನಾರಾಯಣಸ್ವಾಮಿ”, ಅಂತ ಕರೆಯುತ್ತಿದ್ದುದು ಉಂಟು. ಏಕೆಂದರೆ,ಅವರು ಎಲ್ಲರನ್ನೂ ಅಷ್ಟು  ಹತೋಟಿಯಲ್ಲಿ ಇಡುತ್ತಿದ್ದರು, ಎನ್ನುವುದು ಅಲ್ಲಿದ್ದ ಹಿರಿಯರ ಮತ. ಇಂಥ ಟೈಗರ್ ಅನ್ನು ಓದುಗರಿಗೆ ಪರಿಚಯಮಾಡಿಸಬೇಕಾದರೆ, ಅವರನ್ನು ಅತಿ ಸನಿಹದಿಂದ ಕಂಡವ್ಯಕ್ತಿಗಳಿಂದ ಮಾತ್ರ ಸಾಧ್ಯ. ಇದಕ್ಕೆಂದೇ, ನಾನು ಅವರ ಮನೆಗೆ ಹೋಗಿ, ಅಮ್ಮನ ಕೈಯಿಂದ ಒಂದು ಲೋಟ ಕಾಫಿ ಸವಿದು, ಅಮ್ಮ, ಶ್ರೀಕೃಷ್ಣ, ಪೂರ್ಣಿಮಾ ಅವರನ್ನು ಸಂದರ್ಶನಮಾಡಿದೆ. 

ಸಂದರ್ಶನ : (೫ ಮತ್ತು ೬ ನೆಯ ಪುಟದಲ್ಲಿ)

AOL, Ghkpr, HRLV, SAROJ 096-framed

ಡಾ. ಬಿ. ಆರ್. ಮಂಜುನಾಥ್  ರ ಪರಿಚಯ  :

ಮಂಜುನಾಥ್, ೧೯೫೮ ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ ಆನರ್ಸ್ ಪದವಿಯ ನಂತರ, ೧೯೬೧ ರಲ್ಲಿ ಸೆಂಟ್ರೆಲ್ ಕಾಲೇಜಿನಲ್ಲಿ ಎಂ.ಎಸ್ಸಿ.ಪದವಿಗೆ ಸೇರಿದರು. ಮುಂಬಯಿನ ಬಿ.ಟಿ.ಆರ್.ಎ. (BTRA) ಸಂಶೋಧನಾಲಯದಲ್ಲಿ ಜೂನಿಯರ್ ಸೈಂಟಿಫಿಕ್ ಆಫ್ಸರ್ ಆಗಿ ಸೇರಿದರು. ‘ಸ್ಕಾಟ್ಲೆಂಡ್’ (Scotland) ದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ Studies of polymer & X-ray diffraction ವಿಷಯದಲ್ಲಿ ೨ ವರ್ಷ ಡಾ. ಮೆರಿಡಿತ್ ರವರ ವಿದ್ಯಾರ್ಥಿಯಾಗಿ ಕೆಲಸಮಾಡಿ, ಪಿ.ಎಚ್.ಡಿ.ಪದವಿ ಗಳಿಸಿದರು.  ಮುಂಬಯಿನ ಟೆಕ್ಸ್ ಟೈಲ್ಸ್ ಕಮಿಟಿಯಲ್ಲಿ (Textiles Committee) ‘ಡೈರೆಕ್ಟರ್ ಆಫ್ ಲ್ಯಾಬ್’ ಆಗಿ ಆಯ್ಕೆಯಾದರು. ಮುಂದೆ ‘ಡೈರೆಕ್ಟರ್ ಆಫ್ ವಿಜಿಲೆನ್ಸ್’,ಮತ್ತು ಇನ್ಸ್ಪೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿದ ಡಾ.ಬಿ.ಆರ್.ಮಂಜುನಾಥ್, ‘ಸರ್.ಎಂ.ವಿಶ್ವೇಶ್ವರಯ್ಯ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್, ಮುಂಬಯಿಯ’,  ೮ ಜನ “ಕೋರ್ ಮೆಂಟರ್ಸ್ ಪಟ್ಟಿ” ಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 

ಎನ್.ಕೆ.ಇ.ಎಸ್.ವಿದ್ಯಾಸಂಸ್ಥೆ,ವಡಾಲದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ,  SVIMS ವಿದ್ಯಾ ಸಂಸ್ಥೆಯ ಡೈರೆಕ್ಟರ್ ಜನರಲ್, ಮತ್ತು ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮುಂಬಯಿ ನಗರದದಲ್ಲಿ ಕನ್ನಡ ಧಿಯೇಟರ್ ವಲಯದಲ್ಲಿ ೪ ದಶಕಗಳಿಂದ ನಾಟಕ ರಚನೆ,  ಅಭಿನಯ, ನಿರ್ದೇಶನ, ಮೊದಲಾದವುಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡ ಮಂಜುನಾಥರು ಸಂಗೀತ, ನೃತ್ಯ, ಮತ್ತು ಲಲಿತ ಕಲೆಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಮುಂಬಯಿನ ಮೈಸೂರು ಅಸೋಸಿಯೇಷನ್, ಮತ್ತು  SVIMS ವಿದ್ಯಾಸಂಸ್ಥೆಗಳ  ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಮಂಜುನಾಥರ ಈ ಸರ್ವೋತೋಮುಖ ಸಾಧನೆಗಳನ್ನು ಗೌರವಿಸಿ, ಕರ್ನಾಟಕ ಸಂಘ ಮುಂಬಯಿ, “ಸಾಧನ ಶಿಖರ ಪ್ರಶಸ್ತಿ” ಯನ್ನು ಪ್ರದಾನ ಮಾಡಿದ್ದಾರೆ.

ಮಂಜುನಾಥ್ : ಅಮ್ಮ, ನೀವು ಹುಟ್ಟಿದ್ದು ಎಲ್ಲಿ ?

AOL, Ghkpr, HRLV, SAROJ 091-framed

ಶಾರದಮ್ಮ:  ಹಾಸನದ  ಹತ್ತಿರ ಸಾಲಗಾಮೆಯಲ್ಲಿ ,ಮೈಲಾರ್ ಜೋಯಿಸ್ ಲಕ್ಷ್ಮೀದೇವಮ್ಮನವರಿಗೆ ನಾನು ಎರಡನೆಯ ಮಗು; ನನಗೆ ಒಬ್ಬ ಅಣ್ಣ. ಇಬ್ಬರು ತಮ್ಮಂದಿರು. ಇಬ್ಬರು ತಂಗಿಯರು.

ಮಂಜುನಾಥ್ :   ನಾರಾಯಣ ಸ್ವಾಮಿಯವರು  ಹುಟ್ಟಿದ್ದೆಲ್ಲಿ ? ಅವರ ವಿದ್ಯಾಭ್ಯಾಸ ?

ಶಾರದಮ್ಮ:  ಮಗು,  ಈಗ ನನಗೆ  ಸರಿಯಾಗಿ ತಾರೀಖುಗಳೇ ನೆನಪಿರುವುದಿಲ್ಲ. ಶ್ರೀಕೃಷ್ಣಂಗೆ ಜ್ಞಾಪಕ ಇರುತ್ತೆ.

ಶ್ರೀಕೃಷ್ಣ :

bns.

ಅಪ್ಪ, ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ . ಅವರು ಒಟ್ಟು ೧೪ ಮಂದಿ ಮಕ್ಕಳು. ೬ ಜನ ಅಣ್ಣ ತಮ್ಮಂದಿರು. ೮ ಜನ ಅಕ್ಕ ತಂಗಿಯರು. ಅವರು ದೊಡ್ಡಪ್ಪ ಎಜುಕೇಶನಲ್ ಇನ್ಸ್ಪೆಕ್ಟರ್ ಆಗಿದ್ದರು. ಅವರಿಗೆ ವರ್ಗವಾದ ಊರಿಗೆ ಮಕ್ಕಳು ಹೋಗಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ತುಮಕೂರಿನಲ್ಲಿ ಅವರು ಓದಿದ್ದು. ಪ್ರತಿದಿನ ಕ್ಯಾತ್ಸಂದ್ರ ದಿಂದ  ತುಮಕೂರಿಗೆ ನಡೆದುಕೊಂಡೇ ಹೋಗುತ್ತಿದ್ದರಂತೆ.

ಶಾರದಮ್ಮ:   ಓದೆಲ್ಲಾ ಬೀದಿಯ ಲಾಂದ್ರದ ಬೆಳಕಿನಲ್ಲೇ ಅಂತ ಹೇಳ್ತಾ ಇದ್ದರು.

ಶ್ರೀಕೃಷ್ಣ : B.A ಮೈಸೂರು ಮಹಾರಾಜಾ ಕಾಲೇಜಿಂದ LLB ಪರೀಕ್ಷೆ ಪುಣೆಯ Law college ನಿಂದ. ೧೯೨೯ ರಲ್ಲಿ ಮುಗಿಸಿ ಮೈಸೂರಿನಲ್ಲಿ ಲಾಯರ್ ವೆಂಕಟಕೃಷ್ಣಯ್ಯ ನವರ ಹತ್ತಿರ Junior ಆಗಿ Law  Practice ಮಾಡಲು ಮೊದಲು ಮಾಡಿದರು. ಆದರೆ ಅಲ್ಲಿ District Court, Magistrate Court  ನಲ್ಲಿ  Practice ಮಾಡಿದ ನಂತರ ಮೈಸೂರಿಗಿಂತ,  ದೊಡ್ಡಬೊಂಬಾಯಿನಲ್ಲಿ ತನಗೆ ಹೆಚ್ಚು ಅವಕಾಶವಿದೆಯೆಂದು ಒಂದು ಬ್ಯಾಗ್ ಹಿಡಿದು ಬೊಂಬಾಯಿಗೆ ಬಂದಿಳಿದರಂತೆ.

ಶಾರದಮ್ಮ:   ಆಗ ಅವರಿಗೆ ಕೇವಲ ೨೪ ವರ್ಷ.

ಶ್ರೀಕೃಷ್ಣ : ಬೊಂಬಾಯಿನಲ್ಲಿ ಅವರು ಮಾಟುಂಗಾದ ತೇಜೂಕಾಯ ಪಾರ್ಕ್ ನ ಪಕ್ಕದಲ್ಲಿ ದೌಲತ್ ವಿಲ್ಲಾ ಕಟ್ಟಡದಲ್ಲಿ ಶ್ರೀವೆಂಕಟೇಶ ಮೂರ್ತಿ, ಮತ್ತು ಶ್ರೀ ರಾಮಚಂದ್ರ ಅವರೊಡನೆ ಒಂದು ರೂಂ ಮಾಡಿಕೊಂಡಿದ್ದರು. ಆಮೇಲೆ ‘ದೇವ್ ಧರ್ ಕ್ರಾಸ್ ರೋಡ್’ ನಲ್ಲಿಯೂ ಇದ್ದರು. ಬಂದ ತಕ್ಷಣ Law practice ಸಾದ್ಯ ಇರಲಿಲ್ಲ. ಡಿಲೈಲ್ ರೋಡ್ ನಲ್ಲಿದ್ದ ಷಾಪುರ್ಜೀ ಮಿಲ್ಸ್ ನಲ್ಲಿ Legal Adviser  ಆಗಿ ಒಂದು ಕೆಲಸ ಹಿಡಿದರು.

ಮಂಜುನಾಥ್ : ಅಮ್ಮ ನಿಮ್ಮ ಮದುವೆ ಯಾವಾಗಾಯಿತು. ನಾರಾಯಣ ಸ್ವಾಮಿಯವರು ಬೊಂಬಾಯಿಗೆ ಬರುವ ಮೊದಲೇ ಆಗಿತ್ತೇನು ?

ಶಾರದಮ್ಮ : ಇಲ್ಲ. ಅವರಿಗೆ ಮೈಸೂರಿನಲ್ಲಿದ್ದಾಗಲೇ ಒಂದು ಮದುವೆ ಆಗಿತ್ತು. ದತ್ತ, ಪಾಪು ಹುಟ್ಟಿದ್ದರು. ನಾನು ಮದುವೆಯಾದಾಗ ನನಗೆ ೧೪ ವರ್ಷ. ಅವರಿಗೆ೨೪  ವರ್ಷ. ಇಲ್ಲಿಗೆ ಬಂದಾಗ ಮೊದಲ ೨ ವರ್ಷ ಮಾಟುಂಗಾದಲ್ಲಿದ್ದ Mount Matunga

ಕಟ್ಟಡದಲ್ಲಿದ್ದೆವು. 

ಮಂಜುನಾಥ್ :   ಮೈಸೂರ್ ಅಸೋಸಿಯೇಷನ್ ಸೇರಿದ್ಯಾವಾಗ ?

ಶಾರದಮ್ಮ :  ಅಯ್ಯೋ ಇವರು ಬೊಂಬಾಯಿನಲ್ಲಿ ಇಳಿದಾಗ್ನಿಂದ  ಅಸೋಸಿಯೇಷನ್ ಅಂಟುಬಿಡ್ತು. ಇವರಿಗೆ ಫ್ಯಾನ್ಸಿ ಡ್ರೆಸ್ ನಾಟಕಾ ಅಂದ್ರೆ ಜೀವ. ಬುಡುಬುಡಿಕೆ ಹಾವಾಡಿಗ ಅಂತ ವೇಷ ಹಾಕ್ಕೊಂಡು ಪ್ರೈಸ್  ಗಿಟ್ಟಿಸ್ಕೊಳ್ಳೋವೃ. ನಾಟಕದ ರಿಹರ್ಸಲ್ ಅಂತ ಸಾಯಂಕಾಲ ಎಲ್ಲಾ ಅಸೋಸಿಯೇಷನ್ ನಲ್ಲೇ.  ಇವರಿಗೆ ಸಂಕೇತಿ ಸ್ನೇಹಿತರು ತುಂಬಾ. ಅವರೆಲ್ಲಾ ಇವರ್ನ ಸೇರಿಸ್ಕೊಂಡು ಭಾನುವಾರವೆಲ್ಲಾ ಆಡಿದ್ದೇ ಆಡಿದ್ದು. ಹೀಗಾಗಿ ಅಸೋಸಿಯೇಷನ್ ನಲ್ಲೇ ಇವರು ಮನೆಗಿಂತ ಹೆಚ್ಚು ಇರ್ತಿದೃ. 

ಮಂಜುನಾಥ್ :  ಹಾಗಿದ್ದರೆ ಅವರ ಪ್ರೊಫೆಶನಲ್ ಕೆಲಸ ಹೇಗೆ ನಡೆಯುತ್ತಿತ್ತು. 

ಶ್ರೀಕೃಷ್ಣ :  ಶಾಪುರ್ಜಿ ಮಿಲ್ಸ್ ನಲ್ಲಿ ಲೀಗಲ್ ಅಡ್ವೈಸರ್ ಆಗಿದ್ರು ಅಂದೆನಲ್ಲ . ಅವರು Industrial disputes  Act ಹಾಗೆ Labor  Law ನಲ್ಲಿ ಹೆಚ್ಚು ಪರಿಣತೆ ಪಡೆದಿದ್ದರು. Mill Owner’s Association ವಿಠಲ್ ಚಂದಾವರ್ಕರ್ ಅಧ್ಯಕ್ಷರಾಗಿದ್ದರು. ಮೀಟಿಂಗ್ ಗಳಲ್ಲಿ ಇವರ ಚಾತುರ್ಯ ನೋಡಿ, ಚಂದಾವರ್ಕರ್ ಮೆಚ್ಚಿದ್ದರು.ಹೀಗಾಗಿ ಆಪ್ಪ Mill Owner’s Association ಗೆ Standing council ಆಗಿ ನೇಮಕವಾದರು. ಅಲ್ಲಿಂದ ಲಾ ಪ್ರೊಫೆಶನಲ್ ನಲ್ಲಿ ಅವರ ಏಳಿಗೆ ಮೊದಲಾಯಿತು. Hindustan Construction Company ಯಲ್ಲಿ  ಶ್ರೀ ವರದರಾಜನ್ ಅವರು ಇದ್ದರು. ಅಪ್ಪನಿಗೆ ದೂರದ ಸಂಬಂಧ. ಅದರಿಂದ ಅಪ್ಪ HCC ಗೂ ವಕೀಲರಾದರು.

ಶಾರದಮ್ಮ:

ಹೀಗಾಗಿ ವರದರಾಜನ್ ರವರು, ಮಾಟುಂಗಾದಲ್ಲಿ ದೊಡ್ಡಮನೆ ಕಟ್ಟಿದಾಗ ,ನೀವು ಇಲ್ಲೇ ಬಂದಿರಿ ಎಂದರು. ಅವತ್ತಿಂದ ನಾವು ಈ  ಮನೆಯಲ್ಲೇ ಇದ್ದೀವಿ.

ಮಂಜುನಾಥ್  :

ನಾರಾಯಣ ಸ್ವಾಮಿಗಳಿಗೆ ನಾಟಕದ ಹುಚ್ಚು ಅಂದ್ರಿ, ಅಮ್ಮ, ಅವರು ಯಾವ ಯಾವ ನಾಟಕಗಳಲ್ಲಿ ಮಾಡಿದೄ ಅಂತ ಹೇಳಿ..

ಶಾರದಮ್ಮ:  ಅಯ್ಯೋ, ಎಷ್ಟೋ ನಾಟಕಗಳಾದವು. ಈಗ ನನಗೆ, ಅದೆಲ್ಲಾ ಜ್ಞಾಪಕವೇ ಇಲ್ಲ. ” ಬಂಡ್ವಾಳವಿಲ್ಲದ ಬಡಾಯಿ”, “ಗಂಡಸ್ಕತ್ರಿ” “ಹೋಂ ರೂಲು”. ಆಗ ೧೯೪೬-೪೮ ರಲ್ಲಿ ಕೈಲಾಸಂ ರವರು ಇಲ್ಲೇ ಅಸೋಸಿಯೇಷನ್ ನಲ್ಲೇ ಇದ್ದರಲ್ಲಪ್ಪಾ. ಆವರ ಹಿಂದೆ ಇವರು, ಬಿ.ಜಿ.ಆಚಾರ್ರು, ಅವರೆಲ್ಲಾ ಸುತ್ತುತ್ತಾ ಇದೃ. ಆಮೇಲೆ ವಿ.ಕೆ.ಮೂರ್ತಿ (ಕುಟ್ಟಿ) ಅಸೋಸಿಯೇಷನ್ ಗೆ ಬಂದಾಗ, ‘ಅದನ್ನಾಡಿಸು, ಇದನ್ನಾಡಿಸೂಂತ’  ಒಂದು ನಾಟಕದ ಹುಚ್ಚನ್ನೇ ಎಲ್ಲಾರಿಗೂ ಆಂಟಿಸ್ಬಿಟೃ.

ಪುಟ : ೫ 

ಮಂಜುನಾಥ್  :

ನೀವು ಅಸೋಸಿಯೇಷನ್ ನಲ್ಲಿ ಹೆಚ್ಚು ಭಾಗವಹಿಸ್ತಿರಲಿಲ್ವೇ  ?

ಶಾರದಮ್ಮ :

ಮಾಡ್ತಾ ಇದ್ನಪ್ಪ.  Ladies wing ಅನ್ನೋದಿತ್ತು. ಅದರಲ್ಲಿ ಹೊಲಿಗೆ, ಕಸೂತಿ, ಬೆತ್ತದ ಕೆಲಸ , ನಾನು, ಸೀತಮ್ಮ ಗರುಡಾಚಾರ್ರ ಹೆಂಡತಿ. ಪಿ.ಎನ್. ಮೂರ್ತಿಯವರ ಹೆಂಡತಿ, ಶ್ಯಾಮಲಾಂಬ ಎಲ್ಲಾ ಸೇರಿಕೊಂಡು ಚೆನ್ನಾಗಿ ಕೆಲಸ ಮಾಡ್ತಿದ್ವಿ. ಇವರು ೧೯೫೧ ರಲ್ಲಿ ಅಸೋಸಿಯೇಷನ್  ಗೆ President ಆಗಿ ಎಂಟುವರ್ಷ ಕಾಲ ಇದ್ದರು. ಇವರಿಗೆ ಸಂಗೀತದ ಹುಚ್ಚು. ಮೈಸೂರಿನ  ವೀಣೆ ವೆಂಕಟಗಿರಿಯಪ್ಪನವರ ಹತ್ತಿರ ವೀಣೆ ಕಲಿತಿದ್ದರು. ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರು ಬೊಂಬಾಯಿಗೆ ಬಂದಾಗಲೆಲ್ಲಾ ನಮ್ಮ ಮನೆಯಲ್ಲೇ ಇರುತ್ತಿದೃ. ಆಗ ಇವರಿಬ್ಬರೂ ಜುಗಲ್ ಬಂದಿ ಪ್ರಾರಂಭ ಮಾಡೋವೃ. ಯಾವ ಸಂಗೀತ ಕಚೇರಿ ಕೂಡ ತಪ್ಪಿಸಿಕೊಳ್ತಾ ಇರಲಿಲ್ಲ. ಅಸೋಸಿಯೇಷನ್  ನಲ್ಲಿ ಸಂಗೀತೋತ್ಸವ ಮಾಡಬೆಕೂಂತ ತಾನೇ ಇವರು ಗೌರಿ ಗಣೇಶೋತ್ಸವ ಮೊದಲು ಮಾಡಿದ್ದು. ಎಲ್ಲಾ ಸಂಗೀತಗಾರರನ್ನೂ ಕರೆಸೋವೃ.ಒಂದು ಸಲ ಅಸೋಸಿಯೇಷನ್ ಕಮಿಟಿನಲ್ಲಿ ದುಡ್ಡಿಲ್ಲ ;ಇಷ್ಟು ಖರ್ಚಿಗೆ ಅಂತಯಾರೋ ಗಲಾಟೆಮಾಡಿದ್ದಕ್ಕೆ ,”ನಾನೇ ಕೊಡ್ತೀನಯ್ಯ ನೀವೇನೂ ಹಾಕಬೇಡಿ” ಅಂತ ಒಂದು ಸಾವಿರ ರೂಪಾಯಿ ಕೊಟ್ಟು ಬಂದಿದೃ.  ಈ ಸಂಗೀತದ ಹುಚ್ಚಿಗೇ ಇವರು ಷಣ್ಮುಖಾನಂದ ಸಭಾ ಸೇರಿದ್ದು. ಅಲ್ಲಿ Music Festivals ಗಳನ್ನ ನಡೆಸುವುದಕ್ಕೆ ಸೇರಿಕೊಂಡಿದ್ದು. ಒಂದು ಸಲ ಯಾರೋ ಪುಂಡರು ಆ ಮಂಟಪಕ್ಕೆ ಬೆಂಕಿ ಹಾಕಿ ತುಂಬಾ ಗಾಬರಿಯಾಗಿತ್ತು.

ಮಂಜುನಾಥ್ : ಯಾರು ಬೆಂಕಿ ಹಾಕಿದೃ ?

ಶ್ರೀಕೃಷ್ಣ :

ಯಾರೋ ಗೊತ್ತಿಲ್ಲಪ್ಪ. ಆಗ ಷಣ್ಮುಖಾನಂದ ಕಟ್ಟಡ ಇರಲಿಲ್ವಲ್ಲ. ‘Don Bosco’ ಶಾಲೆಯ ಮೈದಾನದಲ್ಲಿ ನಮ್ಮಮನೆಯ ಮುಂದೆಯೇ ಒಂದು ದೊಡ್ಡಚಪ್ರ ಹಾಕ್ತಿದ್ರು. ಹಾಕಿದ ಮಂಟಪಾನ ರಾತ್ರಿ ಯಾರೋಸುಟ್ಟಿದ್ದರಿಂದ ಮತ್ತೆ ಚಪ್ಪರ ಹಾಕಬೇಕಾಯಿತು. ಆದರೆ ಇದರಿಂದ ಒಳ್ಳೆಯದೇ ಆಯಿತು ಎಂದು ಹೇಳಬೇಕು. ಆಗ  ಎಲ್ಲರಿಗೂ ನಮ್ಮದೇ ಒಂದು ಕಟ್ಟಡ ಕಟ್ಕೋಬೇಕು ಅಂತ ಮನಸ್ಸು ಗಟ್ಟಿಯಾಗಿ೧೯೬೮-೬೯  ರಲ್ಲಿ ‘ಷಣ್ಮುಖಾನಂದ ಆಡಿಟೋರಿಯಂ’ ಕಟ್ಟಲಾಯಿತು.  ಅಪ್ಪ ಅದಕ್ಕೆ ಹಣ ಕೂಡಿಸುವುದರಲ್ಲಿ ಬಹಳಷ್ಟು ಕೆಲಸ ಮಾಡಿದರು.

ಶಾರದಮ್ಮ : ತಿರುಗಿ ಎಲ್ಲಿ ಚಪ್ಪರಕ್ಕೆ ಬೆಂಕಿ ಬಿದ್ದೀತೂಂತ ಇವರೆಲ್ಲಾ, ರಾತ್ರಿ ಚಪ್ಪರದಲ್ಲೇ ಮಲಗೋವೃ. ಅಷ್ಟು  ಹುಚ್ಚು. 

ಮಂಜುನಾಥ್  ಅವರಿಗೆ ಸಾಹಿತ್ಯದ ಮೇಲೆ ಎಷ್ಟು ಹುಚ್ಚು ?

ಶಾರದಮ್ಮ: ತುಂಬಾ ಇಷ್ಟ. ಏನಾದರೂ ಕವಿತೆ  ಬರಿತಾನೇ ಇರೋರು.

ಶ್ರೀಕೃಷ್ಣ :

ವರದ ರಾಜನ್ ಅವರ ಮಗಳು ವಿಜಯಲಕ್ಷ್ಮಿಮದುವೆಯಾದನಂತರ,”ಪೂನು ಪರಿಣಯ” ಎಂಬ ಕಾವ್ಯವನ್ನು ಬರೆದಿದ್ದಾರೆ. ಅದರಲ್ಲಿ ಅವಳಿಗೆ ತಕ್ಕ ವರನನ್ನು ಹುಡುಕುವ ಅರಸಾಟ, ವರ ಅವಳನ್ನು ನೋಡಲು ಬಂದಾಗ ಆದ ತರಾತುರಿ. ಮದುವೆಯ ಸಡಗರ. ಬೀಗರಾದ ಡಾ. ಸುಬ್ಬರಾಯರ ಮನೆಯವರ  ದಿಬ್ಬಣ.ಆಮೇಲೆ ಆದ ಸಣ್ಣಪುಟ್ಟ Skirmishes  ಎಲ್ಲಾ ಹಾಸ್ಯವಾಗಿ ಬರೆದಿದ್ದರು.

ಶಾರದಮ್ಮ: ಯಾವಾಗಲೂ ಇವರಿಗೆ ಹಾಸ್ಯ. 

ಮಂಜುನಾಥ್  ಎಲ್ಲಾ ಕಲೆಗಳ ಮೇಲೆ ಇಷ್ಟವಿದ್ದರೆ, ಸ್ಪೋರ್ಟ್ಸ್ ಮೇಲೆ ಅಂಥಾ  ಆಸಕ್ತಿ ಇರಲಿಲ್ಲವೇ ?

ಶಾರದಮ್ಮ: ಅಯ್ಯಪ್ಪಾ, ಕ್ರಿಕೆಟ್ ಹುಚ್ಚು ತುಂಬಾ. ಎಲ್ಲಿ ಕ್ರಿಕೆಟ್ ಮ್ಯಾಚ್ ಆದರೂ ಕೋರ್ಟ್ ಕೆಲ್ಸಾ ಕೂಡಾ  ಬಿಟ್ಟು ಓಡಿಹೋಗ್ಬಿಡ್ತಿದೃ. ಒಂದು ಸಲ ಆ ಜಡ್ಜ್ ನ ಕೂಡ ಪುಸಲಾಯಿಸಿ ಬ್ರೆಬೊರ್ನ್ ಸ್ಟೇಡಿಯಂ ನಲ್ಲಿ ಯಾವುದೋ ಟೆಸ್ಟ್ ಮ್ಯಾಚ್ ಅಂತ ಓಡಿ ಹೋಗಿದ್ರು.  ಆರು ದಿನ. ಅಂಥಾ ಹುಚ್ಚು. ಮಕ್ಕಳನ್ನು ಸೇರಿಸ್ಕೊಂಡು ಈ ‘ಡಾನ್ ಬಾಸ್ಕೊ ಮೈದಾನ’ದಲ್ಲಿ ಕ್ರಿಕೆಟ್ ಭಾನುವಾರ- ಭಾನುವಾರ ಷುರು ಮಾಡ್ಕೊಂಡ್ಬಿಡೋರು.

ಶ್ರೀಕೃಷ್ಣ :

ಅವರು President ಆಗಿದ್ದಾಗಲೇ ಅಸೋಸಿಯೇಷನ್  ನಲ್ಲಿ Basket ball, Table tennis, Billiards Tournament  ಗಳು ಮೊದಲಾಗಿದ್ದು.

ಮಂಜುನಾಥ್ : ಕನ್ನಡ ಸ್ಕೂಲು ಮೊದಲು ಮಾಡಿದ್ದು ಹೇಗೆ ?

ಶ್ರೀಕೃಷ್ಣ : ಆರ್. ವೆಂಕಟೇಶ ಮೂರ್ತಿಯವರಿಗೆ ಮಕ್ಕಳಿಗೆ ಕನ್ನಡ ಶಾಲೆ ತೆರೆಯಬೇಕೆಂದು ತುಂಬಾ ಇಷ್ಟವಿತ್ತು. ನಾವೊಂದು ಶಾಲೆ ತೆಗೆಯೋಣ ಅಂತಹೇಳಿದ್ದಕ್ಕೆ, ಅಪ್ಪ ಸರಿ “ನಾನು ನನ್ನ ನಾಲ್ಕು ಮಕ್ಕಳನ್ನು ಶಾಲೆಗೆ ಹಾಕ್ತೀನಿ . ನೀನೊಂದು ನಾಕು ಮಕ್ಕಳು ನಿಂದು ಹಾಕು ” ಅಂದರು.

ಹೀಗೆ ಮೈಸೂರು  ಅಸೋಸಿಯೇಷನ್ ನಲ್ಲಿ ಮೊದಲಾದ ಶಾಲೆ ಮಹಿಳಾಶ್ರಮದ ರಸ್ತೆಯ ಕಟ್ಟಡದಲ್ಲಿ ಎರಡುಕೋಣೆ,ನಂತರ, Army Barracks ನಲ್ಲಿ ಹರಡಿ, ಆಮೇಲೆ ವಡಾಲಾದ ಕಟ್ಟಡದಲ್ಲಿ ಬಂದು ನಿಂತಿತು. ಈ ಕೆಲಸದಲ್ಲಿ ಅಪ್ಪ, ವೆಂಕಟೇಶಮೂರ್ತಿ ಆರ್.ಡಿ.ಚಾರ್.ವರ ಹೆಂಡತಿ ವೈದೇಹಿ ಚಾರ್, ವರದರಾಜನ್ ಅವರನ್ನೆಲ್ಲಾ ಸೇರಿದ್ದರಿಂದ ಕೆಲಸ ಕೈಗೂಡಿತು.

ಶಾರದಮ್ಮ:  ದತ್ತ, ಮಸೂರಿನಲ್ಲಿ ಓದ್ತಾ ಇದ್ದ. ಅವನು ಒಂದು ವರ್ಷ ಕನ್ನಡ ಶಾಲೇಲಿ ಓದಿದ. ಆಮೇಲೆ SIES ನಲ್ಲಿ.ಆದರೆ ಪಾಪು, ಶ್ರೀಕೃಷ್ಣ, ಲಕ್ಷ್ಮಿ, ಶ್ರೀಕರ  ಶ್ರೀಕಾಂತ, ಚಂದೃ ಎಲ್ಲರೂ ಕನ್ನಡ ಶಾಲೆಯಲ್ಲೇ ಓದಿದವರು.

ಶ್ರೀಕೃಷ್ಣ :

ಅಪ್ಪ ಕನ್ನಡ ಶಾಲೆಯಲ್ಲಿ ಮಾಡುತ್ತಿದ್ದ ಕೆಲಸಗಳನ್ನು ನೋಡಿ SIES ನವರು ಕರೆದರು. ಅವರು ಆಗ ತುಂಬಾಕಷ್ಟದಲ್ಲಿದ್ದರು. ಅಪ್ಪ ಅಲ್ಲಿಯೂ ಸುಮಾರು ವರ್ಷ ಪ್ರೆಸಿಡೆಂಟ್ ಆಗಿದ್ದರು.ಹೀಗಾಗಿ ಅಪ್ಪನಿಗೆ ವಿದ್ಯಾಭ್ಯಾಸದಮೇಲೆ ತುಂಬಾ ಚಿಂತೆಯಿತ್ತು.

ಮಂಜುನಾಥ್ :

ಇದೆಲ್ಲಾ ಸಾರ್ವಜನಿಕ ಕಾರ್ಯಗಳಾದವು. ವ್ಯಕ್ತಿ ನಿಜವಾಗಿಯೂ ಹೇಗೆ ?

ಶಾರದಮ್ಮ:

ಅವರು ಯಾವುದನ್ನೂ ತಲೆಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ. ಮಾಡುವ ಕೆಲಸದಲ್ಲಿ ಉತ್ಸಾಹ. ಆದರೆ ಮಾಡುವ ಕೆಲಸದಲ್ಲಿ ಮನೆಯವರನ್ನೆಲ್ಲಾ ತೊಡಗಿಸುವ ಹವ್ಯಾಸ. ತಾವು ಅಸೋಸಿಯೇಷನ್ ನಲ್ಲಿ ನಾಟಕ ಮಾಡ್ತಾ ಇದ್ರೆ,ನನ್ನನ್ನೂ ನಾಟಕಕ್ಕೆಳೆದರು. “ಮೀನಾಮದುವೆ” ನಾವು ಮೊದಲು ಜೊತೆಯಲ್ಲಿ ಮಾಡಿದ್ದು. ಯಾವಾಗಲೂ ಜೊತೆಜೊತೆಯಲ್ಲಿ ಇರಬೇಕೂಂತ ಅವರಿಗೆ ಆಸೆ.ಮಕ್ಕಳನ್ನು ಕಂಡರೆಪ್ರೀತಿ ಇದ್ದರೂ ಕೂಡ, ತುಂಬಾ ಶಿಸ್ತು. ಕಟ್ಟು-ನಿಟ್ಟು.  ಮನೆಗೆ ೬-೩೦ ಕ್ಕೆಮುಂಚೆ ಬರಬೇಕು.ಓದು ಕಡಿಮೆಯಾಗಿರಬಾರದು. ಮನೆಯಲ್ಲಿ ಜನ ಯಾವಾಗಲೂ ಬಂದು ಹೋಗುತ್ತಿರಬೇಕು. ನಮ್ಮ ಮನೆಯಲ್ಲಿ ಯಾವಾಗಲೂ ಅತಿಥಿಗಳು. ಗೋಪಾಲಾಚಾರ್ಯರನ್ನು ಕಂಡರೆ ತುಂಬಾ ಗೌರವ. ಅವರ ಪ್ರವಚನ,  ಭಜನೆಗಳಿಗೆ ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಶ್ರೀಕೃಷ್ಣನ್ನ ಅವರ ಹತ್ತಿರ ಅದ್ವೈತ, ವೇದ ಕಲಿಯುವುದಕ್ಕೆ ಕಳಿಸುತ್ತಿದ್ದರು. ಆಚಾರ ಸಂಪ್ರದಾಯವೆಂದರೆ ತುಂಬಾ ಗೌರವ. ಮನೆಯಲ್ಲಿ ನಾವು ಹೆಣ್ಣುಮಕ್ಕಳು, ಸೊಸೆಯರು, ಕೆಲಸಮಾಡುತ್ತಿದ್ದಾಗ, ಹೊದ್ದಿದ್ದ ಸೆರಗು ಒಂದೇ ಹೆಗಲಿಗೆ ಜಾರಿದ್ದರೆ, ಮಾತಿಲ್ಲದೆ ಹಿಂದಿನಿಂದ ಬಂದು ಸೆರಗನ್ನು ಹೊದ್ದಿಸಿ ಹೋಗುವ ಮನಸ್ಸು.

ಮಂಜುನಾಥ್ :

ಅಮ್ಮ ನಿಮ್ಮ ಜೀವನದ ಬಗ್ಗೆ ನಿಮಗೆ ಎಷ್ಟು ಸಾರ್ಥಕತೆ ಇದೆ ಅಂತ ಅನ್ನಿಸುತ್ತೆ ?

ಶಾರದಮ್ಮ: 

ಒಬ್ಬ ಹೆಂಗಸು ಏನನ್ನು ಬಯಸಬಹುದೋ ಅದಕ್ಕಿಂತ ಹತ್ತು ಪಟ್ಟು ನನಗೆ ಸಿಕ್ಕಿದೆ ಅನ್ನಿಸುತ್ತೆ. ೮ ಮಕ್ಕಳನ್ನು ಸಾಕಿದೆ.ಒಳ್ಳೆಯ ಅತ್ತೆಯೂ ಆಗಿದ್ದೇನೆ ಅಂತ ನನಗನ್ನಿಸುತ್ತೆ.

ಮಂಜುನಾಥ್ :  ಪೂರ್ಣಿಮಾ ಅವರನ್ನೇ ಕೇಳೋಣ. ಅಮ್ಮ ಒಳ್ಳೆಯ ಅತ್ತೇನೇ ?

ಪೂರ್ಣಿಮಾ :  photoಅತ್ತೆ ಅನ್ನೊದಕ್ಕಿಂತ, ಅಮ್ಮ, ಫ್ರೆಂಡ್ ಅಂತ ಅನ್ನಬಹುದು. ಅವರಿದ್ದಲ್ಲಿ ನೆಮ್ಮದಿ. ತೃಪ್ತಿ ತುಂಬಿರುತ್ತದೆ.


(ಸಂದರ್ಶನ ಮುಗಿಯಿತು)

English version of the Interview  :

Shri. Belluru Narayana swamy’s centenary celebration was celebrated at The Shanmukhananda hall. On 31st, Aug, 2008, jointly by  The Mysore Association, and Shankhananda fine arts sabha. Shri. N. Doreswamy,  the then Chairman, of MA, spoke on the dais, recalling the great services done by Shri. B. Narayana swamy, (worked for more than a decade,  as  Vice Patron, and Chairman)

The Mysore association brought out a special issue of ‘NESARU’, on Aug, 2008  ! An interview was conducted by Dr.B.R.Manjunath, specially for the Association magazine, nesaru. (Smt.Sharadamma narayana swamy, Smt. Purnima srikrishna, and Shri. Srikrishna took part in the discussion)

(Original interview was in Kannada; for the benefit of people who can not understand kannada, the excerpts are given in  English language)

Introduction of Dr. B.R. Manjunath :

Shri. B. R. Manjunath, secured his M.Sc degree, from the University of Mysore in 1961, and later joined BTRA, Mumbai as the Jr. Scientific Officer, He earned Ph. D from Scotland, under the guidance of Prof. Meredith. The subject was, “Studies of polymer & X-ray diffraction”. Returned to Mumbai and continued at BTRA. Later he joined Textiles Committee, Mumbai as Director of Laboratory, Director of Vigilance, and Inspection divisions.

He was responsible to initiate and train the staff of two, Private Testing laboratories, in Mumbai and other important cities of India. Further, he joined SVIMS, Wadala, as the chief of Core mentors. He has been serving as the Director general, and Mentor of NKIES.

Dr. B.R.Manjunath, is a kannada stage actor,Writer, Director, He is closely associated with the ‘Lalit kala division of Mysore Association’, since 4 decades. Theater is his forte, apart from that, he loves, Music, Dance and Cultural activities. Karnataka Sangha of Mumbai, has awarded him “Sadhna shikhara prashati”, in recognition of his over all contributions, viz : Theater, institutions building, etc;

Manjunath : AOL, Ghkpr, HRLV, SAROJ 096-framed Amma, where were you born ?

Sharadamma :

 AOL, Ghkpr, HRLV, SAROJ 091-framed

I, was born at a village called Salagame. My parents were Shri. Mylar jois, and Smt. Lakshmidevamma. Among the 5 children i was second and I had two youger brothers and two younger sisters, and and one brother elder to me.

Manjunath :   Where did Shri. Narayana swamy born ? And about his education.

Sharadamma : Now a days my  memory power is diminished and can’t recollect the events immediately.  Please ask Sririshna.

 bns.

Srikrishna :  Appa was born at Chikkaballapur, Among 14 children, to his father, 6 brothers and 8 sisters,including himself. Appa’s Uncle was Educational inspector,at Chikkaballapur, Whenever transfers take place children were joined differenct schools. Appa had his initial schooling at Kyatsandra.(ಕ್ಯಾತ್ಸಂದ್ರ), He has to walk all the way to Tumkur.(ತುಮಕೂರು)

Sharadamma : Electric lights were not available in homes. So, one has to study under the street lights.

Srikrishana :  Appa, completed his  BA degree from the University of Mysore. From Pune university, he completed his  (LLB) Law degree. In 1929 came to Mysore, and practiced law, under a Sr. lawyer, Venkata krishnaiah, who was serving at the District Magistrate court. He learnt from his friends that Bombay, has more scope to pursue as lawyer, So he proceeded to Bombay, with a suitcase  in his hand.

Sharadamma : Then, he was 24 years of age

Srikrishna :   After landing in Bombay, he  Stayed at Daulat villa, next to Tejukayya park, at Matunga. His room mates were,Shri. Ramachandra, Shri. R.Venkatesha murthy, for some years. Later, shifted to  Deodhar cross road also. He could not practice law, because of new place, and lack of contacts.  Instead he secured a job at  Shapurji Textile mills, deslisle road as a Legal adviser.

Manjunath :   When was  the marriage solemnized ? Before coming to Bombay or after.

Sharadamma :

My husband got married in Mysore. From this first wife, he  had two children, Datta, and Papu. I came to his life when he was 24 years old. I was 14 years then. After our marriage we came to Bombay and initially stayed  at Matunga, in ‘Mount Matunga mansion’, for two years. 

Manjunath : Since when he started going to MA ?

After coming to Bombay, he made an inquiry of The Mysore association, and started going there during evenings. My husband was very good in dressing like budubudikewala, Havadiga, etc. So, enacting those roles, he used attract his friends, and relatives. During Fancy dress competitions, he got many prizes. After coming from Court, he was going straight to Mysore association, to participate in the kannada  drama rehearsals. He had many friends,who were very good actors, and singers. He used to spend too much time even on sun days.  

Manjunath :

How was his profession career as a lawyer, in a new city like Bombay  ?

Srikrishna :  Joined as the legal Adviser at Shapurji mills, He was specialised in The Act of Labor laws Vithal Chandavarkar was the president of Bombay Mill owners’ association then. By observing the arguments, and presentation of his views, he was impressed and made him, one of the Standing council members of MOA. This new assignment gave him impetus to furter his profession, as a lawyer. Varadarajan,CEO of Hindustan construction company was our distant relative, and his help in introducing many top executives is worth mentioning here. Because of his recommendations, BN became the adviser to HCC. specialized in industrial dispute act, and labor law

Sharadamma :

Varadarajan built a big house at Matunga, just behind UDCT, He requested us to come and stay in the same building.  Since then we are living in this building.

You mentioned during our discussion, that BN had great passion for Dramss.  How many dramas he took part.

Sharadamma :

So many dramas were enacted then, I do not exactly remember, now.He was very much interested in Dramas, and fine arts like, music, Dance, and cultural activities. During 1946-48, the famous kannada Drama writer, T.P. Kailasam came to Mumbai and used to stay at MA. Kailasam had very big fan circle. Among them, B.G.Achar, V.K,.Murthy, G.Narayanaswamy, and host of other fans. When V.K.Murthy joined Association, BN, initiated him to take directions of  many dramas at The Mysore Association.So, like that the Association, organised several  dramas written by Kailasam : It became a craze to act in dramas then. Some of the important dramas, which interested the audience then were :

* Gandaskatri, (ಗಂಡಸ್ಕತ್ರಿ),

* Bandwalvillada badayi, (ಬಂಡವಾಳವಿಲ್ಲದ ಬಡಾಯಿ)

* Home rule, etc;(ಹೋಂ ರೂಲ್ ಇತ್ಯಾದಿ).

 ಪುಟ : ೫ 

Manjunath : Amma, Were you not taking part in the activities of  Association ?Yes. I too was was taking part with my friends. At the Mysore Association, Ladies wing started. Stitching, Embroidery, Bamboo handicraft works, etc, were made by Mrs. Seethamma rao, Mrs.Garudachar, Mrs.Shyamalamba p.n.murthy. Sharadamma also joined. BN was the president of Mysore Association (1951-59) for 8 years.The details of the Working committee, is as follows : 

He liked to play Veena. Mysore veena  venkatagiriyappa taught veena to him. Whenever Veena maestro, N Doraiswamy iyengar came to Bombay, he used to stay in our house. Both were playing jugal bandi, on Veena. He never missed a single music concert,conducted in Bombay. During his period as the president Ganeshotsav, started at MA, all artists were invited from karnataka came to MA. When ever some shortage of funds he, paid Rs.1,000/-once. The passion for music was the reason that he started associating with Shanmukhananda sabha.He joined to conduct music festivals. once  some miscreants put fire to the pandal. We were all scared.

Manjunaath :  Who did this heinous act ?

Srikrishna :

We did not have any clues. Shanmukhananda sabha did not have their own building then. Pandals were erected at Don Bosco school grounds and in front of our building. But once the pandal got burnt by some people. This  act made the music enthusiasts very unhappy. Some times we used to sleep in the pandals during night as, watchment. Some how it was not practicable and to construct our own hall to every one. Appa was taking very big role in funds collection drive. ೧೯೬೮-೬೯.  Auditorium was erected by the generous contributions by the public.

Appa,Joined The Shanmukhananda sangit sabha. Classcial music was yet another forte for him. Many music festivals were organised by him. Once the pendal  got fire by some miscreants,  who were not liking.

Sharadamma : all gents used to sleep in the pandals during night time, as watchmen.

Manjunaath :  Regarding Literature has any inclination.

Srikrishna :  Yes. He was writing poems and articles when ever he gets time. Starting from arranging a suitable alliance to marriage.. All the events chronologically covered in a humorous way, like marriage excitements, ceremony etc etc. A few Skirmishes which took place were nicely  recorded in the book. 

Sharadamma : He was always  used to jolly. Not  very much serious bout  house hold matters.

Manjunath : What about sports?

Cricket, was much liked sports. some times, leaving office works he used to go to Brabourne cricket stadium, to see matches, along with magistrate friend.Don bosco grounds cricket matches played with children on Sundays.

Srikrishna :  basket ball billiards,TT tournaments conducted during his president ship. 

Gopalachar was very much respected.  He  was attending his lectures on Vedanta. Never missed Bhajan, Sankritans, pujas etc;; Respected our old  tradition, and ritualts.

Manjunath: when did Kannada school started ?

Srikrishna : When  RVM proposed about starting a kannada school in bombay, appa agreed to send his children to attend. He requested other friends to send as many children as they can. An experimental school started at MA and later shifted to Mahilashram road building in two rooms. Further in Army barracks finally at Wadala  district. The enthusiasts toiled for  this mission were, Appa, RVM, Vaidehi char, Varadarajan, and others.

Sharadamma : Datta, who was studying at Mysore  was asked to join and he studied  for one year.Later joined SIES.  But, Papu, Srikrishna, lakshmi, Shrikara, and Chandru,all studied at NKIES. 

Srikrishna :  After working for NKIES school, SIES achool invited  Appa and he became the president there,for several years.

Manjunath : After knowing the  Social work, how was your husband , as  a person  ?

Sharadamma : Working  for social cause was very much liked. involve all the members of the house. ‘Meena maduve’, acted together at MA.liked children but strict, should come before, 6-30 pm.should study well. guests were always, Mahuli Gopalacharya, was very much liked. used to send Srikrishna to teach Advaita, and  Vedas with him. tradition and sampradayas sere  appreciated. Purnima,   lovable daughter-in-law, liked by every one in the house.

What ever work he does with full devotion and enthusiasm. Not only that involve every one in the family. When The Meen maduve drama was taken for for particular occasion, he invited me to take part, So, both of us acted in that drama. He wanted we should be together always, Children were very much loved. But he was very strict about about their upbringing. They should be at home,before dusk, at 6-30pm. No compromise about their studies. Hardworking is a  must. Our house was always full with guests, and relatives.

Manjunath : With this family background, marrying a lawyer, writer, one who is connoisseur of drama,  music, literature, and social works, how do you feel ? Do you feel in life ?

Sharadamma  : By  entering into this Belluru house hold I felt a deep sense of fulfillment in my life. I raised 8 children, I think I have  became a good mother in law, grandmother, God is very kind to me; I got a great husband, Children, grand children. I feel the destiny has offered me more, than I deserve. I am very thankful to almighty for that.

Manjunath :   Purnima Madam, What is your say about your mother in law  ?

Smt. Purnima srikrishna :

 photo

“Amma,” as I always call her lovingly, is a real friend to me. She has been the inspiration to all of us in the family, promoting  grace, dignity, and satisfaction, always  !

 
 
 
 
 
 
 
 
 
 
 
 
 
.
 
.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
.
 
.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 l

Advertisements

कावॅड जल यात्रा,आयोजन कर्ता : श्री जगन्नाथ सेवा मंडल, मुंबई-400072 !

Shree Jagannath Seva Mandal, Shree Jagannath  Mandir Rd, Satya Nagar, Sakinaka, Mumbai-400  072,   organised this Yatra !

This slideshow requires JavaScript.

Every year, this program is being arranged during the month of Shravan. The Pooja for the same was performed at Powai lake, (Ganapati immersion place) by the Kawdis.

The Yatra started from Powai,  and with sacred water and proceeded to Shree Himalayeshwar Mandir via Sakinaka JagannathMandir Rd, 90 Feet Rd,  Tilak Nagar, Asalpha and terminated at Shree Himalayeshwar Mandir (Himalayeshwar Mandir) between 11-00-12.pm.

The  following devotees took the lead :  

1. Mr. Anand Dhapola

2. Mr. Pradhan

3. Mr. Lalit Tiwari

4. Mr.Navin Tiwari

5. Adarsh mahila mandal

 

SVIMS College, Wadala, Mumbai

This slideshow requires JavaScript.

Sir M Visvesvaraya Institute of Management Studies & Research,Wadala,Mumbai.

I, stay at Ghatkopar west, and for quite some time (For nearly 5 years, I have not come to Wadala area. I  used to come to meet my friend, who was staying just opposite to NKES. But,now he has  shifted to Vidyavihar, and of course he is no more now  !

When I saw the Kannada school,(Even to-day we call it kannada school) I was flabbergasted and could not believe my eyes !

It has grown into leaps and bounds,and transformed into a new institution, which offers so many new courses, to cater to the demands of the present world.

I met a few executives, and old/new friends who are working tirelessly. I appreciate their hard work, vision, and making sincere efforts to devise new innovative methods, to  the students of Mumbai !

Here, I have posted a few pictures, of the excellent infrastructure and the state-of-the-art of spacious seminar halls, Class rooms, and the ambiance is very users’ friendly !

-Radhatanaya, a welwisher of any educational institute in Mumbai !

Celebrating 75th year of dedicated Educational services to the Metropolis of Mumbai. Now the 4 year Degree courses, affiliated  to the University of Mumbai.Masters in Management studies : Marketing, Finance, HR, Operations.

(Minority Institution, for  Kannada, Konkani, Tulu and Kodava communities,in particular and Mumbai students in General)

Source : https://www.facebook.com/photo.php?fbid=840824002718689&set=pcb.608396485994232&type=3&theater

‘ಕ್ವಿಟ್ ಇಂಡಿಯ ಆಂದೋಳನ’೧೯೪೨ ರ ಆಗಸ್ಟ್ ೮ ರಂದೇ ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು !

ಈ ದಿನವೇ ಅಂದರೆ,2016 ನೇ ಇಸವಿ, ಆಗಸ್ಟ್ ೮ ನೆಯ ತಾರಿಖು ೧೯೪೨ ರಲ್ಲಿ , ಮಧ್ಯ ಬೊಂಬಾಯಿನ ‘ಗೋವಾಲಿಯ ಕೆರೆಯ ಅಂಗಳ’ದಲ್ಲಿ (ಈಗ ಅದನ್ನು ಆಗಸ್ಟ್ ಕ್ರಾಂತಿ ಮೈದಾನವೆನ್ನುತ್ತಾರೆ.) ಮಹಾತ್ಮ ಗಾಂಧಿ ಯವರೂ ಸೇರಿದಂತೆ ಕಾಂಗ್ರೆಸ್ಸಿನ (ಎ.ಐ.ಸಿ.ಸಿ) ನಾಯಕರುಗಳೆಲ್ಲಾ ಸಮಾಲೋಚಿಸಿ ‘ಕ್ವಿಟ್ ಯಿಂಡಿಯ’ ಆಂದೋಳನವನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಘೋಷಿಸಿದರು.

ಇಲ್ಲಿ ಗಮನಿಸಬಹುದಾದ ಪ್ರಮುಖ ಅಂಶವೆಂದರೆ, ಪಂಡಿತ್ ನೆಹ್ರೂ, ರಾಜಾಜಿಯವರೂ ಸೇರಿದಂತೆ ಹಲವಾರು ಹೆಸರಾಂತ ಹೋರಾಟಗಾರರು ಗಾಂಧೀಜಿಯವರ ಈ ಆಂದೋಳನದಲ್ಲಿ ಪಾಲ್ಗೊಳ್ಳಲ್ಲಿಲ್ಲ ಎನ್ನುವ ಮಾತು. ಆದರೆ ಅಚಲವಾದ ಆತ್ಮವಿಶ್ವಾಸ, ಧೃಡ ನಿರ್ಧಾರಗಳ ಖಣಿಯಾಗಿದ್ದ ಬಾಪೂಜಿ ತಮ್ಮ ವೃದ್ಧಾಪ್ಯದಿಂದ ಝ

This slideshow requires JavaScript.

ರ್ಝಿತವಾದ ಪರಿಸ್ಥಿತಿಯಲ್ಲೇ  ಯಾರಿಗೂ ಕಾಯದೆ ತಮ್ಮಜೊತೆಗೆ ಸಹಕರಿಸಿದ ಭಾರತಮಾತೆಯ ಪರಿಚಾರಕರ ಜೊತೆ ದಾಪುಗಾಲು ಹಾಕುತ್ತಾ ದಾಂಡೇಲಿಯ ಕಡೆ ಚಂಡಮಾರುತದಂತೆ ಧಾವಿಸಿದರು !

ಎರಡನೆ ವಿಶ್ವ ಯುದ್ಧ ಸಮೀಪಿಸುತ್ತಿತ್ತು. ಇಂಗ್ಲೆಂಡ್, ಭಾರತೀಯರ ಸಮ್ಮತಿ ಇಲ್ಲದೆ ನಮ್ಮ ಸೈನ್ಯವನ್ನು ಅವರ ಪರವಾಗಿ ಜರ್ಮನಿಯ ವಿರುದ್ಧ ಹೋರಾಡಲು ಆಜ್ಞಾಪಿಸಿತ್ತು. ಇದು ಗಾಂಧಿಜಿಯವರನ್ನು ಒಳಗೊಂಡಂತೆ ದೇಶದ ನಾಯಕರುಗಳಿಗೆ ‘ಆಘಾತ’ ತಂದಿತ್ತು. ಕಾಂಗ್ರೆಸ್ ಪ್ರತಿಭಟನೆ ಘೋಶಿಸುತ್ತಿದ್ದಂತೆ ಬ್ರಿಟನ್ ಎಲ್ಲಾ ನೇಕಾರರನ್ನೂ ಜೈಲಿನಲ್ಲಿ ಬಂಧಿಸಿದರು.ಆದರೆ ಇದರ ವಿರುದ್ಧ ಪ್ರಜೆಗಳು ದಂಗೆ ಎದ್ದರು. ದೇಶದಾದ್ಯಂತ ಪ್ರತಿಭಟನೆ ನಡೆಯಿತು. ಕೊನೆಗೆ ಭಾರತಕ್ಕೆ ವಿಜಯ ಸಿಕ್ಕು ದೇಶಕ್ಕೆ ‘ಸ್ವಾತಂತ್ರ್ಯ’ ಸಿಕ್ಕಿತು. ಇನ್ನೊಂದು ಘಟನೆಯೆಂದರೆ, ಆಗಸ್ಟ್ ೧೫ ರ ಮಧ್ಯರಾತ್ರಿ ನಮಗೆ ಸಿಕ್ಕ ಸ್ವಾತಂತ್ರ್ಯ ! ಅದೊಂದು ಸುದಿನ. ಮಹಾದಿನ ! ಭಾರತಿಯರೆಲ್ಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಸಂಘರ್ಷ ಮಾಡಿ ಬಲಾಢ್ಯ ಇಂಗ್ಲೀಶ್ ಆಡಳಿತವನ್ನು ಪರಿಸಮಾಪ್ತಿ ಗೊಳಿಸಿದ ‘ಚಾರಿತ್ರ್ಯಿಕ ದಿನ’. ತಮ್ಮ ತನು, ಮನ, ಧನ ಗಳನ್ನು ಬಲಿಕೊಟ್ಟ ನೂರಾರು, ಸಾವಿರಾರು ಜನರಿಗೆ ನಾವು ಇಂದು, “ಗೌರವ ಶ್ರದ್ಧಾಂಜಲಿ” ಸಲ್ಲಿಸಬೇಕಲ್ಲವೆ !

ಇನ್ನು ಸ್ವಾತಂತ್ರ್ಯಾನಂತರ ಬಳಲಿ ಸೊರಗಿದ್ದ ಭಾರತವನ್ನು, ಮೇಲೆತ್ತಿ ನಿಲ್ಲಿಸಿ ಕಟ್ಟುವಕಾರ್ಯವನ್ನು ‘ನೆಹ್ರೂ’ ರವರು ಪ್ರಧಾನಿಯಾದಮೇಲೆ ಯಶಸ್ವಿಯಾಗಿ ನೆರವೇರಿಸಿದರು. ಸಾವಿರಾರು ಜನ, ‘ಬಾಪು’ರವರ ತ್ಯಾಗ,ಬಲಿದಾನ,ಸ್ನೇಹ ಪ್ರೇಮ, ಸೇವೆಯನ್ನು ತಮ್ಮ ಆದರ್ಶವನ್ನಾಗಿಟ್ಟುಕೊಂಡು ರಾಷ್ಟ್ರ ನಿರ್ಮಾಣಕಾರ್ಯದಲ್ಲಿ ತಮ್ಮ ಇಡೀ ಜೀವನವನ್ನು ತೊಡಗಿಸಿಕೊಂಡರು.ಅವರಲ್ಲಿ ಆಡಳಿತಗಾರರು,ಉದ್ಯಮಿಗಳು, ಶಿಕ್ಷಕರು, ಇಂಜಿನಿಯರ್ ಗಳು, ಸಾರ್ವಜನಿಕ ಸಂಸ್ಥೆಗಳ ಧುರೀಣರು, ಪತ್ರಿಕೋದ್ಯಮಿಗಳು, ಮಠಾಧಿಪತಿಗಳು ಇದ್ದರು. ಇಂತಹವರ ಮಧ್ಯೆ ಒಬ್ಬ ಕಣ್ಣಿನ ರೊಗದ ವೈದ್ಯ, ಮಹಾಸಾಧಕ, “ಡಾ.ಎಮ್.ಸಿ,ಮೊದಿ” ಯವರನ್ನು ಹೆಸರಿಸುವುದು ‘ಸಾಂದರ್ಭಿಕ’ವೆಂದು ನನ್ನ ಅಭಿಪ್ರಾಯ !

ಡಾ.ಮುರಿಗೆಪ್ಪ ಚೆನ್ನವೀರಪ್ಪ ಮೋದಿ ಒಬ್ಬ ಮಹಾಮಾನವ; ಆದರ್ಶ ವಾದಿ. ಗಾಂಧಿ ಭಕ್ತರು. ಪ್ರಾತಃ ಸ್ಮರಣೀಯರು ! ಮೂಲತಃ ಅವರು ಬಾಗಿಲುಕೋಟೆಯ ಲೋಕಾಪುರದವರು.೧೯೧೫ ರಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದರು.ಬಾಲ್ಯದಲ್ಲಿ ಅವರು ಕೆಲವು ‘ನೇತ್ರ ಹೀನ’ರನ್ನು ಕಂಡಾಗ, ಅವರ ಬಗ್ಗೆ ಕನಿಕರ ಮೂಡಿತು. ಮುಂದೆ ದೊಡ್ಡವನಾದ ಮೇಲೆ ಹೇಗಾದರು ಮಾಡಿ ಅವರ ‘ಅಂಧತ್ವ’ ವನ್ನು ನಿರ್ಮೂಲ ಮಾಡಬೇಕೆಂದು ಪಣ ತೊಟ್ಟರು. ಎಸ್.ಎಸ್.ಎಲ್.ಸಿ ಯ ನಂತರ ಬಿ.ಎಮ್.ಎಸ್. ವೈದ್ಯ ಕೊರ್ಸ್ ಮಾಡಿ ಬೊಂಬಾಯಿನ ಆಸ್ಪತ್ರೆಯೊಂದರಲ್ಲಿ ಪ್ರಾಕ್ಟೀಸ್ ಮಾಡಿದರು. ಅವರು ಬೊಂಬಾಯಿಯಲ್ಲಿ ಇದ್ದ ಸಮಯದಲ್ಲಿ ಗಾಂಧೀಜಿಯವರ ಸತ್ಯಾಗ್ರಹದಲ್ಲೂ ಭಾಗವಹಿಸುತ್ತಿದ್ದರು. ಒಮ್ಮೆ ‘ಬಾಪು’ರವರನ್ನು ಭೇಟಿಮಾಡಿದಾಗ ಗಾಂಧಿಯವರು ಮೋದಿಯವರ ಸೂಕ್ಷ್ಮಗ್ರಾಹಿತ್ವ, ಕೈಚಳಕದಬಗ್ಗೆ ತಿಳಿದುಕೊಂಡು ಸಂತೋಷಪಟ್ಟರು. ‘ಇದನ್ನೆ ಮುಂದುವರೆಸಿಕೊಂಡು ಹೋಗು. ನಮ್ಮದೇಶದ ಸಾವಿರಾರು ಅದೃಷ್ಟಹೀನ ಬಡ ಅಂಧರಿಗೆ ನಿನ್ನ ಕೈಲಾದ ಸೇವೆ ಮಾಡಿ ಅವರ ಜೀವನದಲ್ಲಿ ಬೆಳಕು ಚೆಲ್ಲು’ ಎಂದು ನುಡಿದರು.

ಅವರ ಮಾತುಗಳು ಯುವ ಮೊದಿಯವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದವು.ಅಲ್ಲಿಂದ ಮುಂದೆ ಅವರು ತಮ್ಮ ಜೀವನವನ್ನು ‘ನೇತ್ರಹೀನ’ರ ಸೇವೆಗಾಗಿಯೆ ಮುಡುಪಾಗಿಟ್ಟರು.ಸಾಮೂಹಿಕವಾಗಿ ಹತ್ತಾರು, ನೂರಾರು ಜನರನ್ನು ಒಟ್ಟಿಗೆ ತಪಾಸುಮಾಡುವುದು ಅವರ ‘ಕಾರ್ಯವೈಖರಿ’ಯಾಗಿತ್ತು. ಅವರು ನಡೆಸಿದ ಮೊಟ್ಟಮೊದಲನೆಯ ‘ಕಣ್ಣು ಚಿಕಿತ್ಸಾ ಶಿಬಿರ’ಗುಜರಾತಿನ ‘ಪಟ್ಟನ್ ಎಂಬ ಊರಿನಲ್ಲಿ. ಇದು ‘ಬಾಪು’ ರವರ ಹುಟ್ಟಿದೂರಿನ ಬಳಿ ಇತ್ತು.ಇದರಲ್ಲಿ ಕಂಡ ಯಶಸ್ಸಿನಿಂದ ಅವರ ‘ಆತ್ಮ ಸ್ಥೈರ್ಯ’ ಹೆಚ್ಚಿತು.

ಅಲ್ಲಿಂದ ಮುಂದೆ ಇಂತಹ ಶಿಬಿರ ಗಳು ಬಹಳಷ್ಟು ನಡೆದವು. ಬೊಂಬಾಯಿನಿಂದ ಅವರು ಬೆಳಗಾಂ ನಲ್ಲಿ ಕೆಲಸ ಮಾಡಿ, ಕೊನೆಗೆ ದಾವಣಗೆರೆಯಲ್ಲಿ ನೆಲೆಸಿದರು.ಅಲ್ಲಿ ಲಯನ್ಸ್ ಕ್ಲಬ್,ಹಾಗು ಹನುಮಂತಪ್ಪನವರ ಸಹಾಯದಿಂದ ಅವರು ‘ಕಣ್ಣಿನ ದವಾಖಾನೆ’ಯನ್ನು ಸ್ಥಾಪಿಸಿದರು. ೧೯೫೦ ರಲ್ಲಿ ತಿರುಪತಿಯಲ್ಲಿ ಒಂದು ‘ಕಣ್ಣಿನ ಶಿಬಿರ’ದ ಏರ್ಪಾಟಾಯಿತು. ಅಲ್ಲಿ ಅವರು ಒಂದೇ ದಿನದಲ್ಲಿ ೬೭೫ ಆಪರೇಷನ್ ಮಾಡಿದ್ದರಂತೆ. ಅದೂ ಅವರಿಗೆ ಸಮಾಧಾನ ಕೊಡಲಿಲ್ಲ. ಮಾರನೆಯ ವರ್ಷ ನಡೆಸಿದ ತಿರುಪತಿಯ ಶಿಬಿರದಲ್ಲಿ ಈ ಸಲ ೮೩೩ ಕಣ್ಣಿನ ಶಸ್ತ್ರ ಚಿಕೆತ್ಸೆ ಮಾಡಿ ಒಂದು ವಿಕ್ರಮವನ್ನೇ ಸ್ಥಾಪಿಸಿದರು.ಇದನ್ನು “ಗಿನ್ನಿಸ್ ಧಾಖಲೆಯ ಪುಸ್ತಕ” ದಲ್ಲಿ ದಾಖಲಿಸಲಾಯಿತು ! ವಿಶ್ವದ ವೈದ್ಯರೆಲ್ಲಾ ಇದನ್ನು ತಿಳಿದು ಅವರನ್ನು ಭೇಟಿಮಾಡಲು ಬರುತ್ತಿದ್ದರು. ಅವರು ವಿಶ್ವಮಾನ್ಯತೆ ಗಳಿಸಿದರು. ಇದಾದ ಮೇಲೆ ಅವರಿಗೆ ಪ್ರಶಸ್ತಿಗಳ ಸುರಿಮಳೆಯೇ ಆಯಿತು.ಗೌರವ ಡಾಕ್ಟರೇಟ್ ಗಳು ಬಹಳಷ್ಟು ಬರತೊಡಗಿದವು. ಖಾಸಗೀ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು ವಿಶೇಷವಾಗಿ ಧನ ಸಹಾಯಮಾಡಲು ಮುಂದೆ ಬಂದವು. ಚಿಕಾಗೊದ, ಇಲಿನಾಯ್ ನ ‘ಅಂತರರಾಷ್ಟ್ರೀಯ ಪ್ರಶಸ್ತಿ’,’ಹ್ಯುಮಾನಿಟಿ ಪ್ರಶಸ್ತಿ’, ‘ನೈಟ್ ಆಫ್ ಬ್ಲೈಂಡ್’, ‘ಅಂಬ್ಯಾಸಿಡರ್ ಆಫ್ ಗುಡ್ ವಿಲ್’, ‘ಎ.ಜಿ.ಎಫ್’ ಇತ್ಯಾದಿ. ಬೇಕದಷ್ಟು ಹಣವೂ ಬಂತು. ಅವೆಲ್ಲಾ ಬಡವರ ಕಲ್ಯಾಣಕ್ಕೆ ಮೀಸಲಾಗಿಟ್ಟರು.

ಆಪರೇಶನ್ ನಂತರ ಒಂದು ಜೊತೆ ಕನ್ನಡಕವನ್ನು ಮುಫತ್ ಆಗಿ ಕೊಡುತ್ತಿದ್ದರಂತೆ. ‘ಪೊಸ್ಟ್ ಆಪರೇಶನ್’ ವಿಧಿಗಳನ್ನು ಚಾಚು ತಪ್ಪದೆ, ರೋಗಿಗಳು ಕೇಳುವ ಮೊದಲೇ ಒದಗಿಸುತ್ತಿದ್ದರಂತೆ. “ಹೀಗಾಗಿ ಮೊದಿಯವರೆಂದರೆ ಜನರಿಗೆ ದೇವರ ಸಮಾನ” !

ಡಾ.ಮೋದಿಯವರು

* ಮಾಡಿದ ಒಟ್ಟು ಕಣ್ಣಿನ ಆಪರೇಶನ್ ಗಳು : ೬,೧೦,೫೬೪.

* ತಪಾಸುಮಾಡಿದ ರೋಗಿಗಳಸಂಖ್ಯೆ : ೧೨,೧೧೮,೬೩೦.

* ೪೬,೧೨೦ ಹಳ್ಳಿಗಳಲ್ಲಿ ತಮ್ಮ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.

ಕರ್ಣಾಟಕ ಸರ್ಕಾರ ಅವರ ಈ ಅದ್ಭುತ ಕಾರ್ಯವನ್ನು ತೊರಿಸಲು ‘ One Man’s Army’ ಎಂಬ ಒಂದು ‘ಸಾಕ್ಷಿ ಚಿತ್ರ’ವನ್ನು ತಯಾರಿಸಿತು. ಇದನ್ನು ಖ್ಯಾತ ನಿರ್ದೇಶಕ, ಎಮ್.ಎಸ್.ಸತ್ಯು ರವರು ನಿರ್ದೇಶಿಸಿದರು. ಭಾರತ ಸರ್ಕಾರ ೧೯೫೬ ರಲ್ಲಿ ‘ಪದ್ಮಶ್ರಿ’, ಮತ್ತು ೧೯೬೮ ರಲ್ಲಿ ‘ಪದ್ಮ ವಿಭೂಷಣ’ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿತು. ೧೯೯೩ ರಲ್ಲಿ ಮೊದಿಯವರಿಗೆ ೭೮ ವರ್ಷ ತುಂಬಿತ್ತು. ಆಗ ಅವರು ತಮ್ಮ ಕಾರ್ಯಚಟುವಟಿಕೆಯಲ್ಲಿ ಸ್ವಲ್ಪ ಮಾರ್ಪಾಡನ್ನು ಮಾಡಿಕೊಂಡರು.

ಬೆಂಗಳೂರಿನ ರಾಜಾಜಿನಗರದಲ್ಲಿ ‘Dr.Modi Charitable Eye Hospital’ನ್ನು ಸ್ಥಾಪಿಸಿದರು. ವ್ಯಾನಿನಲ್ಲಿ ಕಣ್ಣಿನ ರೋಗಿಗಳನ್ನು ತಂದು ಅವರ ಆಸ್ಪತ್ರೆಯಲ್ಲಿ ಭರ್ತಿಮಾಡಿ ಅವರಿಗೆ ಉಪಚಾರ ಮಾಡಿ ಕಳಿಸಿಕೊಡುತ್ತಿದ್ದರು. ಬಹಳ ನಾಚಿಗೆ ಸ್ವಭಾವದ ‘ಮೊದಿ’ಯವರು ಪೂರ್ತಿ ಸಸ್ಯಾಹಾರಿಗಳಾಗಿದ್ದರು. ಹಾಲು ಹಾಕದೆ ‘ಚಹ’ ಸೇವನೆ ಅವರಿಗೆ ಪ್ರಿಯ. ಎಳನೀರು, ಪಪ್ಪಾಯಿ ಹಣ್ಣುಗಳ ಸೇವನೆ ಅವರಿಗೆ ಬಹಳ ಸಹಾಯವಾಯಿತು. ಹಳ್ಳಿಗಳಲ್ಲಿ ಇವೆ ತಾನೆ ಅವರಿಗೆ ಸಿಗುತ್ತಿದ್ದ, ತಿಂಡಿ ತಿನಸುಗಳು !

ಸಾರ್ವಜನಿಕ ಸೇವೆಯ ಸಾಕಾರ ಮೂರ್ತಿಯಂತಿದ್ದ ಡಾ. ಮೋದಿಯವರು ತಮ್ಮ ‘ವಿಲ್’ ನಲ್ಲಿ ಮರಣೋತ್ತರದಲ್ಲಿ ತಮ್ಮ ‘ಕಣ್ಣು’ಗಳನ್ನು ದಾನವಾಗಿಕೊಡುವುದಾಗಿ ತಮ್ಮ ‘ಅಂತಿಮ ಇಚ್ಛೆ’ಯಲ್ಲಿ ಬಯಸಿದ್ದರು ! ಹೀಗೆ ನಮ್ಮ ಕನ್ನಡದ ಮತ್ತೊಬ್ಬ ಕಣ್ಮಣಿ, ‘ತಮ್ಮ ಸಾರ್ಥಕ ಜೀವನ’ಕ್ಕೆ ಮಂಗಳಹಾಡಿ ಕೃತಾರ್ಥರಾದರು. ನಮ್ಮ ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ‘ಅಮರ’ರಾಗಿ ಉಳಿದಿದ್ದಾರೆ.

೨೦೦೫ ರ ನವೆಂಬರ್ ೧೧ ರಂದು ತಮ್ಮ ೯೦ ನೆಯ ವಯಸ್ಸಿನಲ್ಲಿ, ಬೆಂಗಳೂರಿನ ಒಂದು ಖಾಸಗಿ ‘ನರ್ಸಿಂಗ್ ಹೋಮಿ’ನಲ್ಲಿ ಬೆಳಗಿನ ಸಮಯದಲ್ಲಿ ಕಣ್ಣುಮುಚ್ಚಿದ ಅವರಿಗೆ ಒಬ್ಬ ಮಗ, ಹೆಂಡತಿ ಇದ್ದಾರೆ.

“ಓಹ್ ನಮ್ಮ ಸ್ವಾತಂತ್ರ್ಯದಿನದ ಹಬ್ಬ ” ಬಂದೇ ಬಿಡ್ತು !

Courtesy : Google pics.

ಹೌದು. ಮುಂದಿನ ವಾರವೇ ಅಲ್ವೆ, “ಸ್ವಾತಂತ್ರ್ಯದಿನಾಚರಣೆ” ದಿನ !

ತಿಳಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ನಮಗೆಲ್ಲಾ ಗಳಿಸಿ ಕೊಟ್ಟ ಸ್ವಾಧೀನತಾ ದಿನ ! ಬನ್ನಿ ಮೊದಲು ನಾವು ಇದರ ಮಹತ್ವವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಮಕ್ಕಳೊಡನೆ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. ಈ ‘ಸುದಿನ’ ದಂದು ನಾವು ಅವರ ಹೃದಯದಲ್ಲಿ ದೇಶಪ್ರೇಮ ಬಿತ್ತಿ, ನೀರೆರದು ಬೆಳೆಸಲು ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ಬರಲಿರುವ ೧೫ ನೆಯ ತಾರೀಖಿನ ‘ರಾಷ್ಟ್ರವ್ಯಾಪಿ ಹಬ್ಬ’ಕ್ಕೆ ಮಾನಸಿಕವಾಗಿ ಪೂರ್ತಿಯಾಗಿ ಸಿದ್ಧರಾಗಬೇಕಾಗಿದೆ.

ಅಲೆಗ್ಝಾಂಡರನ ದಾಳಿಯಿಂದ ಹಿಡಿದು ೧೯೪೭ ರ ವರೆಗೆ ಅನೇಕ ‘ವಿದೇಶಿ ಶಕ್ತಿಗಳು’ ನಮ್ಮದೇಶದಮೇಲೆ ಮುತ್ತಿಗೆ ಹಾಕಿ, ಕೊಳ್ಳೆ ಹೊಡೆದು, ಸುಲಿಗೆ ಮಾಡಿ, ಸಂಪತ್ತನ್ನೆಲ್ಲಾ ದೋಚಿಕೊಂಡು ಪಲಾಯಮಾಡಿದ್ದರು. ಇನ್ನು ಹಲವರು ಈ ದೇಶದಲ್ಲೇ ತಳವೂರಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮ ಅಸ್ತಿತ್ವವೇ ಇಲ್ಲವೆನ್ನಿಸುವಂತೆ ಮಾಡಿದರು. ಹೀಗೆ ನಾವು ಶತಮಾನಗಳ ದಾಸ್ಯದ ಹೊರೆಯಿಂದ ನರಳಿ ಬೆಂಡಾಗಿದ್ದೆವು. ಕೊನೆಯ ೨೦೦ ವರ್ಷಗಳು ಬ್ರಿಟಿಷರ ಲೆಖ್ಖಕ್ಕೆ ಸೇರಿವೆ.

೧೫೦ ವರ್ಷಗಳ ಹಿಂದೆಯೇ ನಮ್ಮ ಸೇನೆಯ ‘ಸಿಪಾಯಿ’ಗಳು ಇಂಗ್ಲಿಷ್ ಪ್ರಭುತ್ವವನ್ನು ಪ್ರತಿಭಟಿಸಿ ಹೋರಾಡಿದ್ದರು. ಆದರೆ ದೇಶದಲ್ಲಿ ಸಾಕಷ್ಟು ಬೆಂಬಲ ಸಿಗದೆ ಪ್ರತಿಭಟನೆಯ ಜ್ವಾಲೆ ಆಗಲೇ ನಂದಿತು !
ಮುಂದೆ ತಿಳಕರು, ಗೋಪಾಲಕೃಷ್ಣ ಗೋಖಲೆಯವರು, ದಾದಾಭಾಯಿ ನವರೋಜಿಯವರು, ಗಡಿನಾಡು ಗಾಂಧಿಯವರು, ಮೊದಲಾದವರು ಯುವಕರನ್ನು ಹೋರಾಡಲು ಮಾನಸಿಕವಾಗಿ ತಯಾರುಮಾಡಲು ಶ್ರಮಿಸಿದ್ದರು. ಆದರೆ ಅದು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರ ಫಲಕಾರಿಯಾಗಿದ್ದು ರಾಷ್ಟ್ರದಾದ್ಯಂತ ಹಬ್ಬಲಿಲ್ಲ. ೧೯೨೦ ರ ಹೊತ್ತಿಗೆ ದಕ್ಷಿಣ ಆಫ್ರಿಕದಿಂದ ಒಬ್ಬ ಮಹಾನ್ ಆದರ್ಶವಾದಿ, ಪ್ರಭಾವಿ ಸಂಘಟಕ ಭಾರತಕ್ಕೆ ಬಂದರು. ಸುಮಾರು ೪೭ ವರ್ಷವಯಸ್ಸಿನ, ಬಡಕಲು ಶರೀರದ ಈ ವ್ಯಕ್ತಿ ದೇಶದ ‘ಹೋರಾಟದನೀಲನಕ್ಷೆ’ ಯನ್ನು ಜೊತೆಗೆ ತಂದಿದ್ದರೇನೋ ಅನ್ನಿಸುತ್ತಿತ್ತು. ಭಾರತ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಕೊನೆಯವರೆವಿಗೂ ಎಲ್ಲಾ ಸಂಘರ್ಷಗಳಲ್ಲೂ ತಮ್ಮ ಇಳಿಯ ವಯಸ್ಸಿನಲ್ಲೂ ಮುಂದುವರೆಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ತಮ್ಮ ಪರಿವಾರದ ಏಳಿಗೆಯನ್ನೂ ಲೆಕ್ಕಿಸದೆ ಕೇವಲ ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟರು ಅವರೇ ಗುಜರಾತಿನ ‘ಮೋಹನದಾಸ್ ಕರಮಚಂದ್ ಗಾಂಧಿಯವರು ‘ ! ಅವರು ಒಬ್ಬ ಸುಶಿಕ್ಷಿತ ವಕೀಲರು.ದಕ್ಷಿಣ ಆಫ್ರಿಕ ದಲ್ಲಿ ಕೆಲಸ ಮಾಡಿ ಬಂದ ಅವರಿಗೆ ಬಿಳಿಯರ ದೌರ್ಜನ್ಯ, ದಬ್ಬಾಳಿಕೆಗಳ ಕಟು ಅನುಭವವಾಗಿತ್ತು. ಶುದ್ಧ ಚಾರಿತ್ರ್ಯದ, ವಿಶಾಲ ಹೃದಯದ, ಸಮರ್ಥ ಸಂಘಟಕರಾದ ಗಾಂಧಿಯವರು ದೇಶದಾದ್ಯಂತ ಸುತ್ತಿ ತಮ್ಮ ಪ್ರಭಾವದಿಂದ ಎಲ್ಲಾ ವರ್ಗದ ಭಾರತೀಯರನ್ನೂ ಆಕರ್ಶಿಸಿದರು. ಅವರು ಸ್ವಾತಂತ್ರ್ಯದ ಆಂದೋಳನವನ್ನು ನಡೆಸಿಕೊಂದು ಹೋದ ರೀತಿ ಅನನ್ಯ ! ಅವರ ಅಸಂಖ್ಯ ಬೆಂಬಲಿಗರು, ದಿನ ದಿನ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಬೆಳೆಯುತ್ತಲೇ ಹೋದರು. ಇಂತಹ ಹೋರಾಟ ದಶಕಗಟ್ಟಲೆ ಸಮಯದಲ್ಲಿ ನಡೆದು ಅವರ ‘ಸತ್ಯಾಗ್ರಹ’ದಿಂದ ಬ್ರಿಟಿಷ್ ಸರ್ಕಾರ ನಡುಗಿಹೋಯಿತು.

ಕೊನೆಗೆ ಯಾವ ಉಪಾಯವೂ ಕಾಣದೆ ಸಂದರ್ಭದ ಒತ್ತಡಕ್ಕೆ ಮಣಿದು ತೆಪ್ಪಗೆ ದೇಶ ಬಿಟ್ಟು ಕೊಟ್ಟು ಹೋಗಬೇಕಾಗಿ ಬಂತು. ‘ಜಲಿಯನ್ ವಾಲಾ ಹತ್ಯಾಕಾಂಡ’ದ ರಕ್ತ ಪಾತ ವನ್ನು ಮರೆಯಲು ಸಾಧ್ಯವೇ ? ನಮ್ಮಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಗಳಿರಲಿಲ್ಲ. ಹೀಗೆ ಶಾಂತಿಯ ಮಾರ್ಗದಿಂದ ಸಿಕ್ಕ ‘ವಿಜಯದ ಘಟನೆ’ ವಿಶ್ವದ ಇತಿಹಾಸದಲ್ಲಾಗಲೀ ಭಾರತದ ಇತಿಹಾಸದಲ್ಲಾಗಲೀ ಹುಡುಕಿದರು ಸಿಗುವುದು ಕಷ್ಟ !

ಭಾರತದ ಕೊನೆಯ ವೈಸ್ ರಾಯ್, ಮೌಂಟ್ ಬ್ಯಾಟನ್ ನಮ್ಮ ಪ್ರಥಮ ಪ್ರಧಾನಿ ಪಂ.ನೆಹರೂ ರವರಿಗೆ ದೇಶದ ‘ಚುಕ್ಕಾಣಿ’ಯನ್ನು ಒಪ್ಪಿಸಿ ‘ಹಸ್ತಲಾಘ’ ವನ್ನು ಕೊಟ್ಟು ತಮ್ಮ ದೇಶಕ್ಕೆ ನಿರ್ಗಮಿಸಿದ ದೃಷ್ಯ ಬಹುಶಃ ಯಾವ ದೇಷದಲ್ಲೂ ಕಂಡರಿಯದ, ಕೇಳರಿಯದ ಸಂಗತಿಯಾಗಿದೆ ! ಇದನ್ನು ‘ಸುವರ್ಣಾಕ್ಷರಗಳಲ್ಲಿ’ ಬರೆಯಬಹುದೇನೋ !

ಆ ಸಮಯದಲ್ಲಿ ನಮ್ಮ ‘ರಾಷ್ಟ್ರಪಿತ, ಮಹಾತ್ಮಾ ಗಾಂಧಿ’ಯವರು ಉಪಸ್ಥಿತರಾಗಲು ಸಾಧ್ಯವಾಗಲಿಲ್ಲ ! ಅವರು ಬಂಗಾಳದ ಕೊಮುವಾರು ಸಂಘರ್ಷದಲ್ಲಿ, ಉಭಯತ್ರರಿಗೂ ಮನಒಲಿಸಲು ‘ಸತ್ಯಾಗ್ರಹ’ ಕೈಗೊಂಡಿದ್ದರು !

ಈ ತರಹದ ‘ಶಕ್ತಿ’ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುಲಭವಾಗಿ ‘ಹಸ್ತಾಂತರ’ ವಾಗಲು ಕಾರಣ, ಮಹಾತ್ಮ ಗಾಂಧಿಯವರ ‘ಅಮೋಘವ್ಯಕ್ತಿತ್ವ’ ಮುಂದಾಳುತನ, ಮತ್ತು ಅವರು ನಂಬಿದ ಅದರ್ಶಗಳು, ನಡೆಸಿಕೊಂಡು ಬಂದ ರೀತಿ, ಮತ್ತು ಅವರ ‘ಕಾರ್ಯ ವೈಖರಿಗಳೆ’ ಕಾರಣ ! ಅವರ ಹಿಂಬಾಲಕರುಗಳು ಗಾಧಿಯವರ ತತ್ವಗಳನ್ನು ಮೈಗೂಡಿಸಿಕೊಂಡಿದ್ದರು.ಅವರಿಗೆ ವಿರುದ್ಧವಾಗಿ ಎಂದೂ ಹೊಗಲಿಲ್ಲ !

ಈ ದಿನ, ಅಂತಹ ಮಹಾನುಭಾವರುಗಳ ದೇಶಪ್ರೇಮ,ತ್ಯಾಗಗಳನ್ನು ಸ್ಮರಿಸಿಕೊಂಡು ಅದರಂತೆ ನಡೆದು ನಮ್ಮದೇಶವನ್ನು ಮುಂದೆ ತರಬೇಕಾಗಿದೆ !
ಇಂದಿನ ಆತಂಕವಾದ,
ದೇಶದಲ್ಲಿನ ಆದರ್ಶಗಳ ಕೊರತೆ,
ಲಂಚಕೋರತನ,
ಅಸಮಾನತೆಗಳನ್ನು ನಿರ್ಮೂಲಮಾಡಲು ಪ್ರತಿಜ್ಞೆ ಮಾಡಬೇಕಾಗಿದೆ !

ಇವೆಲ್ಲಾ ಯಶಸ್ವಿಯಾಗಿ ನಡೆಯಬೇಕಾದರೆ ‘ನಮ್ಮ ಯುವ ಪೀಡಿ’ ಮತ್ತು ‘ಮಕ್ಕಳನ್ನು’ ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗುವುದು ಅತಿಮುಖ್ಯ. ಅವರ ಮುಂದಿನ ಬಾಳನ್ನು ಹಸನಾಗಿಸಲು ‘ಸದೃಢ’ ಗೊಳಿಸಲು ‘ಪಂಚತಂತ್ರ’, ‘ದಶತಂತ್ರ’, ‘ಶತತಂತ್ರಗಳ’ ನ್ನು ಬೋಧಿಸ ಬೇಕಾಗಿದೆ. ಈಗಿನ ‘ಸ್ಪರ್ಧಾತ್ಮಕ’ ಜೀವನದಲ್ಲಿ ಎಷ್ಟು ಕಲಿತರೂ ಕಡಿಮೆಯೇ !
ಹಿರಿಯರಾದ ನಾವು, ನಮ್ಮ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆ ಕಳೆಯಬೇಕು. ಜಾಗರೂಕತೆಯಿಂದ, ಮೊದಲು “ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು” ಬಹಳ ಮುಖ್ಯ ! ನಂತರ, ಅವರ ಜೀವನದ ಮಾರ್ಗದಲ್ಲಿ ‘ಕೈಮರ’ವಾಗಿ ನಿಲ್ಲಬೇಕಾದದ್ದು ಅನಿವಾರ್ಯವಾಗಿದೆ.

ನನ್ನ ದೃಷ್ಟಿಯಲ್ಲಿ ಮೊಟ್ಟಮೊದಲು ನಮ್ಮನ್ನು ನಾವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗದೆ ನಿಯಂತ್ರಿಸಿಕೊಳ್ಳುವುದು, ಒಳ್ಳೆಯ ಜೀವನಕ್ಕೆ ತಯಾರು ಮಾಡಿಕೊಳ್ಳುವ ಅಗತ್ಯ ಬಂದಿದೆ. ಎಲ್ಲಕ್ಕಿಂತ ಮೊದಲು ನಮ್ಮ ಮುಂದಿನ ಜನಾಂಗ ಮಕ್ಕಳೇ ಅಲ್ಲವೇ ಅವರನ್ನು ತಯಾರುಮಾಡಿ ಸಿದ್ಧಗೊಳಿಸುವುದು ಅತಿ ಪ್ರಮುಖ ವಾದ ಹೆಜ್ಜೆಗಳಲ್ಲೊಂದು :

೧. ಪ್ರತಿವರ್ಷದ ಆಗಸ್ಟ್ ೧೫ ರಂದು ಮನೆಯಲ್ಲಿ, ನಮ್ಮ ಯುಗಾದಿ, ದೀಪಾವಳಿಯ ತರಹ
ಸ್ವಾತಂತ್ರ್ಯದ ದಿನವನ್ನೂ ಹಬ್ಬದಂತೆ ಆಚರಿಸಬೇಕು.

೨. ಆ ದಿನ ತಪ್ಪದೆ ಮಕ್ಕಳ ಜೊತೆ, ‘ಗಾಂಧಿಯವರ ಸ್ವಾತಂತ್ರ್ಯ ಸಂಗ್ರಾಮದ ಚಿತ್ರ’ವನ್ನು
ಖಡ್ಡಾಯವಾಗಿ ನೋಡಬೇಕು. ನಂತರ, ಚಿತ್ರದ ಬಗ್ಗೆ ಅವರು ಕೇಳುವ ಪ್ರಶ್ನೆ ಗಳಿಗೆ
ಸಮರ್ಪಕವಾಗಿ ಉತ್ತರಿಸ ಬೇಕು.ಆಮೆಲೆ ಅವರ ತಿಳುವಳಿಕೆಯ ಮಟ್ಟಕ್ಕೆ ಸರಿಯಾಗಿ
ಸಾಂದರ್ಭಿಕ ಸನ್ನಿವೇಷಗಳನ್ನು ‘ಕಥೆ’ಯ ರೂಪದಲ್ಲಿ ಅವರಿಗೆ ತಿಳಿಯಹೇಳ ಬೇಕು.

೩. ನಾವು ವೀಕ್ಷಿಸುವ ‘ಟೀವಿ’ ಕಾರ್ಯಕ್ರಮಗಳ ಮೇಲೆ ಹಿಡಿತ ಅತಿ ಮುಖ್ಯ ! ಇಲ್ಲಿ ನಮ್ಮನ್ನು
ನಾವೇ ನಿಯಂತ್ರಿಸಿಕೊಳ್ಳುವುದು ಅತಿ ಮುಖ್ಯ ! ತಂದೆ ತಾಯಿಗಳು ಸಮಾಲೊಚಿಸಿ ಮಕ್ಕಳಿಗೆ
ಏನು ತೊರಿಸ ಬೇಕು,ಎಷ್ಟು, ಎನ್ನುವುದನ್ನು ನಿರ್ಧರಿಸಬೇಕು. ಮಕ್ಕಳಿಲ್ಲದಿದ್ದಾಗ ಬೇರೆ
ಕಾರ್ಯಕ್ರಮಗಳನ್ನು ನೋಡಬಹುದು !

೪. ಮನೆಯಲ್ಲಿ ಅವರ ಜೊತೆ ಖಡ್ಡಾಯವಾಗಿ ಕನ್ನಡದಲ್ಲೇ (ಮಾತೃಭಾಷೆ)ಮಾತನಾಡಬೇಕು.
ಅವರಿಗೆ ಅದರಲ್ಲಿ ಓದಲು,ಬರೆಯಲು ಕಲಿಸಬೇಕು. ಸ್ವಲ್ಪ ದೇಹಕ್ಕೆ ಪೆಟ್ಟಾದರು ‘ಅಮ್ಮಾ’
ಎಂದು ಚೀರುವಷ್ಟು ಭಾಷೆ ಬೇಕು. ‘ಮಾತೃಭಾಷೆ’ಯಲ್ಲಿ ಯೊಚಿಸುವುದನ್ನು ಕಲಿಸಲೇ
ಬೇಕು.

೫. ನಮ್ಮ ದೇಶದ ಸಂಸ್ಕೃತಿಯ ಪರಿಚಯ ಅವರಿಗೆ ಬೇಕು. ಸಂಗೀತ,ನೃತ್ಯ,ಕಲೆಯ ಪರಿಚಯ
ಸಾಧ್ಯವಾದಾಗಲೆಲ್ಲಾ ಮಾಡಿಸಬೇಕು.

೬. ನಮ್ಮ ಮಕ್ಕಳು ‘ಅತ್ಯಾಧುನಿಕ ಉಡುಪು’ ಧರಿಸಲಿ, ಅತ್ಯಾಧುನಿಕ ‘ತಂತ್ರಜ್ಞಾನ’
ಪಡೆಯಲಿ. ಆದರೆ ಹೃದಯದಲ್ಲಿ ಭಾರತೀಯತೆ ತುಂಬಿರಲಿ !

೭. ಬೇರೆ ಭಾಷೆ, ನಡವಳಿಕೆ, ‘ಸಹಬಾಳ್ವೆ’ ಯಿಂದ ಬಂದೇಬರುತ್ತೆ. ಯೋಚಿಸುವುದು ಬೇಡ.

೮. ನಾವು ನಮ್ಮ ಮಕ್ಕಳ ಭವಿಷ್ಯದ ಬಗ್ಗೆ “ಹೆಚ್ಚು ಹೆಚ್ಚು ಆಶೆಬುರುಕರಾಗೋಣ” ! ಮೇಲೆ ತಿಳಿಸಿದ ಎಲ್ಲಾ
‘ವಿಶೇಷ ಗುಣಗಳು’ ನಮ್ಮ ಮಕ್ಕಳಲ್ಲಿ ಮೇಳೈಸುವಂತೆ ಗಮನ ಹರಿಸೋಣ !

-ಭಾರತ್ ಮಾತಾ ಕಿ ಜೈ.

ಭಾರತದ ಇತಿಹಾಸದ ಸ್ಮರಣೀಯ ದಿನಗಳು !

ಗಾಂಧಿ ನೆನಪು-1

This slideshow requires JavaScript.

ಸ್ವಾತಂತ್ರ್ಯದ ಹೋರಾಟ ಮುಗಿಯಿತು. ದೇಶಕ್ಕಾಗಿ ಹೋರಾಡಿ ಮಡಿದ ಲಕ್ಷಾಂತರ ರಾಷ್ಟ್ರಪ್ರೇಮಿಗಳ ತರಹ ಗಾಂಧಿಯವರೂ, ಅಮರರಾದರು !

ಸ್ವರಾಜ್ಯ ಸಿಗುವವರೆಗೂ ಭಾರತದ ಜನ ಅತ್ಯಂತ ಸಂಯಮದಿಂದ ನಡೆದುಕೊಂಡಿದ್ದರು. ಗಾಂಧೀಜಿಯವರಜೊತೆಗೆ ಸೊಂಟಕ್ಕೆ ಸೊಂಟಕೊಟ್ಟು, ಬ್ರಿಟಿಷರ ವಿರುದ್ಧ ಪ್ರತಿಭಟಿಸಿದ್ದರು. ಆದರೆ, ಸ್ವತಂತ್ರ್ಯಬಂದ ಕೆಲವೇ ತಿಂಗಳುಗಳಲ್ಲಿ ಅವರು ತೋರಿಸಿದ ಮುಖವಾಡವೇ ಬೇರೆಯದಾಗಿತ್ತು. ಇಲ್ಲಿ ದ್ವೇಷ, ಅಸೂಯೆ, ಅಸಮಧಾನ, ಅಪನಂಬಿಕೆ, ಅನಾದರ, ಅವಿಶ್ವಾಸಗಳ ಮಹಾಪೂರವೇ ಹರಿದುಬರುವಂತೆ ಭಾಸವಾಗುತ್ತಿತ್ತು. ಒಮ್ಮೆ ನಿಧಾನವಾಗಿ ಯೋಚಿಸಿದಾಗ, ಇದೇ ಜನರೇ ಈಗ ಹೀಗೆ ವರ್ತಿಸುತ್ತಿರುವುದು, ಎನ್ನುವಷ್ಟು ಅವರು ಬದಲಾಯಿಸಿದ್ದರು. ಎಲ್ಲರ ಮೇಲೂ ಅಪನಂಬಿಕೆ. ಶಾಂತಿ, ಸೌಹಾರ್ದತೆಗಳು ಕೇವಲ ಕಾಗದದ ತುಂಡಿನಮೇಲೆ ಇರುವಂತೆ ಭಾಸವಾಗುತ್ತಿತ್ತು.

ಈಗ ಯಾರಿಗೂ ಗಾಂಧೀಜಿಯವರು ಬೇಡ. ಅವರ ತತ್ವಗಳೂ ಆಷ್ಟೆ. ಮಹಾತ್ಮಾ ಗಾಂಧಿಯವರೂ ಇದನ್ನು, ಕಣ್ಣಾರೆಕಂಡರು. ಅವರ ಆಪ್ತ ಸ್ವಾತಂತ್ರ್ಯ ಚಳುವಳಿಯ ಹಿಂಬಾಲಕ, ಕೊಂಡವೆಂಕಪ್ಪಯ್ಯ, ಎಂಬ ೮೦ ವರ್ಷದ ಹಿರಿಯ ಕಾಂಗ್ರೆಸ್ ಕೆಲಸಗಾರ, ೧೯೦೦ ರಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದಿದ್ದ. ಆತ, ಗಾಂಧೀಜಿಯವರಿಗೆ ಪತ್ರಬರೆದು, ದೇಶದಲ್ಲಿ ಬೆಳೆಯುತ್ತಿರುವ, ಸಾಮಾಜಿಕ ವಲಯಗಳಲ್ಲಿನ ಅಸ್ಥಿರತೆಯನ್ನು ಕುರಿತು ಬರೆದ ಪತ್ರ, ಹೀಗಿದೆ :

” ಸ್ವತಂತ್ರ್ಯ ಸರ್ಕಾರ ಬಂದ ೫ ತಿಂಗಳಲ್ಲಿ ಭಾರತದೇಶದ ಜನ ಧೃತಿಗೆಟ್ಟಿದ್ದಾರೆ. ಲಂಚ, ರಿಷ್ವತ್ತುಗಳು ಹೆಚ್ಚಾಗಿವೆ. ಕಾಂಗ್ರೆಸ್ ಸರ್ಕಾರಕ್ಕಿಂತ ಫಿರಂಗಿಯವರ ಸರ್ಕಾರವೇ ಚೆನ್ನಾಗಿತ್ತೇನೋ, ಎನ್ನುವ ಸಂಶಯ ಬರಹತ್ತಿದೆ. “ಏಕೆಂದರೆ ಶಿಸ್ತು, ವ್ಯವಸ್ಥೆ, ಮತ್ತು ಕಾರ್ಯತತ್ಪರತೆ, ಎಲ್ಲೋ ಮಾಯವಾದಂತಿದೆ,” ಎನ್ನುತ್ತಿದ್ದಾರೆ ಜನರು”.

ಈ ಮಾತುಗಳು ಕೇವಲ ವೆಂಕಪ್ಪಯ್ಯನವರದಾಗಿರಲಿಲ್ಲ. ಬದಲಾಗಿ ಅದು, ಬದಲಾಗುತ್ತಿದ್ದ ಭಾರತದ ನಾಗರಿಕರೆಲ್ಲರ ಸಾಮೂಹಿಕ ಕೂಗಾಗಿತ್ತು. ಹಿಂದೂ-ಮುಸಲ್ಮಾನರು ಆಣ್ಣ-ತಮ್ಮಂದಿರಂತೆ ಬಾಳಲಿ, ಎನ್ನುವ ಬಾಪುವಾಣಿಯನ್ನು ಯಾರೂ ಪಾಲಿಸುತ್ತಿಲ್ಲ. ಇದನ್ನೆಲ್ಲಾ ಬಾಪೂ ಗಮನಿಸುತ್ತಲೇ ಇದ್ದರು. ಅವರಿಗೆ ಏನನ್ನು ಹೇಳಲೂ ಸಾಧ್ಯವಾಗಲಿಲ್ಲ. ಇನ್ನು ಮುಂದೆ ಹೋರಾಟಮಾಡುವಷ್ಟು ದೇಹಧಾರಢ್ಯ, ಅವರಲ್ಲಿರಲಿಲ್ಲ. ೭೯ ವರ್ಷ ವಯಸ್ಸಾಗಿದ್ದ ಗಾಂಧಿಯವರ ಮನಸ್ಸಿನಲ್ಲಿ ಜೀವನದ ಸಮರದಲ್ಲಿ ಸ್ವಲ್ಪ ಸೋತಂತೆ ಭಾಸಾವಾಗುತ್ತಿತ್ತು. ಮನೆಯಲ್ಲಿ ಮಕ್ಕಳಿಗೆ ಸರಿಯಾದ ವಿಧ್ಯಾಸವಿಲ್ಲದೆ ಅವರು ಪರಿತಪಿಸುತ್ತಿದ್ದರು. ಕಸ್ತುರ್ ಬಾ ಅವರನ್ನು ಅಗಲಿ, ಆಗಲೇ ೪ ವರ್ಷಗಳಾಗಿತ್ತು. ವಯಸ್ಸು, ಹಾಗೂ ನಿತ್ರಾಣ ಅವರಮೇಲೆ ಮೋಡಿಮಾಡಿತ್ತು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸನ್ನು ವಜಾಮಾಡಲು, ಅವರು ಪದೇ ಪದೇ ರಾಜಕೀಯ ಮುಖಂಡರಿಗೆಲ್ಲಾ, ಮನವಿಮಾಡಿಕೊಂಡರು. ಆದರೆ, ಮುಂದೆ ಸರ್ಕಾರದ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಡೆಸಲು, ಕಾಂಗ್ರೆಸ್ಸಿನ ಪಾತ್ರವೇ ಬಿರುಸಾಗಿತ್ತು. ಅಷ್ಟರಲ್ಲೇ, ಅವರು ೧೯೪೮ ರಲ್ಲಿ ಆಗುಂತಕನೊಬ್ಬನ ಗುಂಡಿನೇಟಿಗೆ ಶಿಕಾರಿಯಾದರು.

ದೀಪ ನಂದಿಹೋಯಿತು. ದೀಪದ ಆಕಡೆ ಕತ್ತಲಿರುವಂತೆ, ಮಹಾತ್ಮರ ೩೩ ವರ್ಷಗಳ ಒಡಾನಾಟದ ಪ್ರಭಾವದ ಕ್ಷಣಗಳು ತಮ್ಮ ಕಾಂತಿಯನ್ನು ಕಳೆದುಕೊಂಡಿದ್ದವು. ಆದರೆ ಇವೆಲ್ಲದರ ಮಧ್ಯೆಯೂ ಆಶಾಕಿರಣ, ಅಂಧಕಾರದ ನಡುವೆ, ತೂರಿಬರುತ್ತಿತ್ತು. ಹೊಸ ದೇಶ, ಸ್ವಛ್ಛಂದ ವತಾವರಣ. ಒಳ್ಳೆಯದು ಕೆಟ್ಟದ್ದು ಮಾಡುವವರು ನಾವೇ, ನಮ್ಮ ಜನರೇ, ಎನ್ನುವ ಭಾವನೆ ಯುವಜನರನ್ನೂ, ದೇಶವಾಸಿಗಳನ್ನೂ, ಹುಚ್ಚೆಬ್ಬಿಸಿತ್ತು. ಹೊಸ ನಾಳೆಗಳು ತೆರೆಯುತ್ತಾ ಹೋಗುತ್ತಿದ್ದಂತೆ, ಹೊಸ ಹೊಸ ಪ್ರತಿಭೆಗಳು ಭಾರತದ ದಿಗಂತದಲ್ಲಿ, ಪ್ರಜ್ವಲಿಸಲಾರಂಭಿಸಿದವು. ೬೦ ಪ್ರಾಯೋಗಿಕ ವರ್ಷಗಳು ಉರುಳಿವೆ. ಹಳೆಯ ತಪ್ಪುಗಳನ್ನು ಮರೆತು, ಹೊಸದಾಗಿ ಕಾರ್ಯದಲ್ಲಿ ತೊಡಗೋಣ.

ಇದರಲ್ಲಿ ತಪ್ಪಾದರೆ ಏನು ? ನಾವೇ, ನಮ್ಮವರಿಂದ ತಾನೇ ? ಸರಿಪಡಿಸಿಕೊಂಡು ಒಂದು ಭವ್ಯ ರಾಷ್ಟ್ರವನ್ನು ನಿರ್ಮಿಸೋಣ !

ಸ್ವಾತಂತ್ರ್ಯ ಭಾರತದ ಹೊಸ ಅಧ್ಯಾಯದ, ಶುಭಾರಂಭ !

೧೯೪೭, ನೆ ಇಸವಿ, ಆಗಸ್ಟ್, ೧೫ ರ, ಮಧ್ಯರಾತ್ರಿ, ನಮ್ಮ ಮೊಟ್ಟ ಮೊದಲ ಪ್ರಧಾನಿ, ಜವಹರ್ಲಾಲರು ಮಾಡಿದ ಚಾರಿತ್ರ್ಯಿಕ ಭಾಷಣದ ಕೆಲವು ಸಾಲುಗಳು :

” ಶತಮಾನಗಳಿಂದ ನಮ್ಮ ದೇಶದ ಭವಿಷ್ಯದ ಬಗ್ಗೆ, ರಾಜಿಮಾಡಿಕೊಂಡು ಕಾಯುತ್ತಲೇ ಇದ್ದೆವು ನಾವು. ಅದು ನನಸಾಗುವ ಕಾಲ ಇಂದು ಬಂದಿದೆ. ನಮ್ಮ ದೇಶದ ದಾಸ್ಯದ -ಸಂಕೋಲೆಗಳನ್ನು ಕಳಚಿ ಬಿಸಾಡಲು ಮಾಡಿದ ಹಲವಾರು ಪ್ರತಿಜ್ಞೆಗಳು, ಸಾಕಾರವಾಗುವ ಕಾಲ ಒದಗಿ ಬಂದಿದೆ. ಪೂರ್ತಿಯಾಗಿ ನಾವು ಕಳೆದುಕೊಂಡದ್ದನ್ನೆಲ್ಲಾ ವಾಪಸ್ ಪಡೆಯಲು ಸಾಧ್ಯವಾಗದಿದ್ದರೂ, ನಮ್ಮ ಬಹಳಷ್ಟು ಕನಸುಗಳು ನನಸಾಗಲಿವೆ. ಈಗ ಹೊಡೆದ ಈ ಮಧ್ಯರಾತ್ರಿಯ ೧೨ ಗಂಟೆಯ “ಧಣಾರ್” ನಾದದೊಂದಿಗೆ, ನಮ್ಮ ಭಾರತ ಎಚ್ಚೆತ್ತು ಕಾದು ಕೂತಿದೆ ; ತನ್ನ ಮುಂದಿನ ಜೀವಿತದ ಭವಿತವ್ಯದ ಆಸೆ, ಆಕಾಂಕ್ಷೆಗಳನ್ನು ಕಾರ್ಯಗತಗೊಳಿಸಲು ; ಇಂತಹ ಭರವಸೆಯ ಕ್ಷಣಗಳು ಯಾವಾಗಲೋ ಚರಿತ್ರೆಯಲ್ಲಿ, ಕೆಲವೊಮ್ಮೆ ಬರುತ್ತವೆ, ಆದರೆ ಬಹಳ ಅಪರೂಪವಾಗಿ ; ಹಾಗೆ ಬಂದಾಗ ನಾವು, ಹಳೆಯ ಜಡ್ಡುಗಟ್ಟಿದ ಸಂಪ್ರದಾಯದಿಂದ ಮೇಲೆದ್ದು, ಹೊಸದನ್ನು ಅಪ್ಪಿಕೊಳ್ಳುತ್ತೇವೆ. ಒಂದು ವ್ಯವಸ್ಥೆಯಿಂದ ಇನ್ನೊಂದು ಉತ್ತಮ ವ್ಯವಸ್ಥೆಯಕಡೆಗೆ, ಚಿಮ್ಮುತ್ತೇವೆ. ಬಹುಕಾಲ, ನಮ್ಮ ಹೃದಯಾತ್ಮಗಳನ್ನು ಹಿಡಿದಿಟ್ಟಿದ್ದ ವೇದನೆಯ ಪೊರೆ ಕಳೆದು, ಎಲ್ಲೆಡೆ ಸ್ವಾತಂತ್ರ್ಯದಕೂಗು, ಪ್ರತಿಧ್ವನಿಸುತ್ತಿದೆ. ಭೂತಕಾಲದ ಅನಿಷ್ಟಗಳನ್ನು ಮರೆತು, ಹೊಸ ಸಂಭ್ರಮದ-ನಾಳೆಗಳನ್ನು ಕಂಡುಕೊಳ್ಳಲು ಹೊರಟಿದ್ದೇವೆ, ನಾವು. ” !

“Long years ago we made a tryst with destiny, and now the time comes when we will redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends and when the soul of a nation, long suppressed, finds utterance…. We end today a period of ill fortune, and India discovers herself again.”

– Jawaharlal Nehru (Speech on Indian Independence Day, 1947)

ಇಂತಹ ಸುಂದರ ರಾತ್ರಿಯ ಶುಭಸನ್ನಿವೇಷದಲ್ಲೂ ನಮ್ಮ ಮಹಾತ್ಮ ಗಾಂಧಿಯವರು, ಭಾರತದೇಶದ ಭಾವೈಕ್ಯತೆಗಾಗಿ, ಉಪವಾಸವನ್ನು ಕಲ್ಕತ್ತಾದಲ್ಲಿ ಮಾಡುತ್ತ, ತಮ್ಮ ದೇಹವನ್ನು ದಂಡಿಸುತ್ತಿದ್ದರು. ಬೇರೆ ಇಂದಿನ ನಮ್ಮ ರಾಜಕಾರಿಣಿಗಳಾಗಿದ್ದಿದ್ದರೆ, ಮನೆ-ಮಂದಿಯನ್ನೇಲ್ಲಾ ವೇದಿಕೆಗೆ ಕರೆತಂದು, ದೊಡ್ಡ ಹಂಗಾಮವನ್ನೇ ಮಾಡುತ್ತಿದ್ದರು.

-ಜವಹರ್ ಲಾಲ್ ನೆಹ್ರು, ೧೫, ಆಗಸ್ಟ್, ೧೯೪೭. ಮಧ್ಯ ರಾತ್ರಿ, ೧೨ ಘಂಟೆ. ಲಾಲ್ ಕಿಲ, ಹೊಸ ದೆಹಲಿ.

-ಸಂಗ್ರಹದಿಂದ.

ಯುಗ ಪುರುಷ, ನಮ್ಮ ಪ್ರೀತಿಯ ಬಾಪು !

This slideshow requires JavaScript.

 Courtesy : Google library.

ಖಾದಿಯ ಪುನರಾವತಾರ :

ಪ್ರತಿ ವರ್ಷದಂತೆ ಈ ವರ್ಷದ ಆಗಸ್ಟ್ , ೧೫ ಸಮೀಪಿಸುತ್ತಿದೆ. ನಾವೆಲ್ಲ ನಮ್ಮ ಭಾರತೀಯ ಸ್ವಾತಂತ್ರ್ಯಸಂಗ್ರಾಮದಲ್ಲಿ ಗೆದ್ದು, ಶತಮಾನಗಳ ದಾಸ್ಯದಿಂದ ಇಂದು ಮುಕ್ತರಾಗಿದ್ದೇವೆ. ನಾವು, ನಮ್ಮ ಮಕ್ಕಳು, ಯುವಕರು, ಸ್ವಚ್ಛಂದ ವಾತಾವರಣದಲ್ಲಿ ಉಸಿರಾಡುವಂತಾಗಿದೆ. ನಮ್ಮದೇ ಸರ್ಕಾರ ; ನಮ್ಮವರೇ ನಮಗೆ ಬೇಕಾದಹಾಗೆ ಆಳಲು ಸಾದ್ಯವಾಗಿದೆ. ನಮ್ಮ ರಾಷ್ಟ್ರಾಧ್ಯಕ್ಷರಾಗಿ ಪ್ರಣಬ್ ಮುಖರ್ಜಿಯವರು,  ಬಂದಿದ್ದಾರೆ.

ನಾವು ಆ ಸುದಿನದಂದಾದರೂ ನಮ್ಮಗಮನ ಬೇರೆ ಕಡೆಗೆ ಹರಿಸದೆ, ನಮ್ಮ ರಾಷ್ಟ್ರಕ್ಕೆ ಪ್ರಾಣತೆತ್ತ, ಬಲಿದಾನ ಮಾಡಿದ ಮಹಾನ್ ಚೇತನಗಳನ್ನು ಸ್ಮರಿಸೋಣ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ಆ ಕಷ್ಟದ ದಿನಗಳನ್ನು ನೆನೆಯೋಣ. ಮಹಾತ್ಮರ ಜೀವನ ಚರಿತ್ರೆಯನ್ನು ಆದಿನವಾದರು ಓದಿ ತಿಳಿದುಕೊಳ್ಳೋಣ. ನಮ್ಮ ಮಕ್ಕಳಿಗೆ, ಅದರ ಬಗ್ಗೆ ಸರಿಯಾಗಿ ತಿಳುವಳಿಕೆ ಕೊಡೋಣ. ಇದು ನಾವು ಆ ದಿನ ಮಾಡಬೇಕಾದ ಪ್ರಮುಖ ಕರ್ತವ್ಯ.

೧೯೫೩ ರಲ್ಲಿ ಶುರುವಾದ ಖಾದಿ K & VIB, ೧೫೬ ಪ್ರಾಂತೀಯ ಕೆಂದ್ರಗಳನ್ನು ಹೊಂದಿದೆ. ಸ್ವಾತಂತ್ರ್ಯಗಳಿಸಲು ಹೋರಾಟದಲ್ಲಿ ಪ್ರಮುಖಪಾತ್ರ ವಹಿಸಿದ್ದ, ತನ್ನ ಆದಿನಗಳ ರೂಪದಿಂದ ಈಗ ಖಾದಿ ಸಮಯದ ನಾಗಾಲೋಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಒಂದು ಅತ್ಯುತ್ತಮ ಬ್ರಾಂಡ್ ಆಗಿ ಪರಿವರ್ತನೆಗೊಂಡಿದೆ. ಇದನ್ನು ನಾವು ” ಖಾದಿಯ ಪುನರಾವತಾರ ” ಎನ್ನಬಹುದು. ಅದು ಅನಿವಾರ್ಯ ಕೂಡ. ಅಂದಿನ ಅವಶ್ಯತೆಗಳಿಗೆ ಸ್ಪಂದಿಸುವಾಗ ಆ ರೂಪ ಧಾರಣೆ ಮಾಡಿದ್ದದ್ದು ಎಷ್ಟು ಉಪಯುಕ್ತವಾಗಿತ್ತು ಎನ್ನುವುದನ್ನು ಸ್ವಲ್ಪ ಯೋಚಿಸಿದರೆ ತಿಳಿಯುತ್ತದೆ.

೧೯೮೯ ರಲ್ಲಿ ಪ್ರಪ್ರಥಮವಾಗಿ ಬೊಂಬಾಯಿನಲ್ಲಿ ಫ್ಯಾಶನ್ ಶೋ ಆಯೋಜಿಸಿದವರು, ‘ದೇವಿಕ ಭೋಜ್ವಾನಿ,’ ಯವರು. ೧೯೮೫ ರಲ್ಲೇ ಅವರು ” ಖಾದಿ” ಎನ್ನುವ, ” ಸ್ವದೇಶಿ Label,” ನೊಡನೆಯೇ, ೫,೦೦೦ ಕೆಂದ್ರಗಳಿಂದ ಸುಮಾರು Dress Materials, ಗಳನ್ನು ಒದಗಿಸಿದ್ದರು. ಖಾದಿಗ್ರಾಮೋದ್ಯೋಗ ಭವನ ಮತ್ತು ಎಂಪೋರಿಯಮ್ ಗಳಿಂದ. ೧೯೯೦ ರಲ್ಲಿ ರಿತುಕುಮಾರ್, ಎಂಬ ದೆಹಲಿಯ Fashion Designer , “Crafts Emporium,” ನಲ್ಲಿ, ಪ್ರಥಮವಾಗಿ ಸಂಗ್ರಹಗಳು, ಅವರ “Tree of Life show,” Audio Visual Tabloid “, ವಸ್ತ್ರೌದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿತು. ಅವುಗಳಲ್ಲಿ ೮ ಐಟಮ್ ಗಳು, ಖಾದಿಗೆ ಸೇರಿದವು. ೧೯೯೭ ರಲ್ಲಿ ಅದೇ ಬಟ್ಟೆಉಡುಪು, ಸಂಗ್ರಹಗಳು London ನಲ್ಲಿ ಪುನಃ ಪ್ರದರ್ಶನಗೊಂಡವು.

’Gujarath Handicrafts Association ” ನ, Kamal Wadkar, ಎಂಬ Fashion Designer, ಮುಂಬೈನಲ್ಲಿ ಪ್ರದರ್ಶಿಸಿದ ಉಡುಪುಗಳು, ೧೨.೫ ಮಿ. ರೂಪಾಯಿಗಳಷ್ಟು. ಸುಮಾರು ೪,೫೦೦ ಗಾರ್ಮೆಂಟ್ಸ್, ೪೫೦ ರೂ-೭೫೦ ರೂಗಳು.

ಕರ್ನಾಟಕದ ಶಿವಮೊಗ್ಗೆಯ ಕೆ. ಶಂಕರಪ್ಪ, ಎನ್ನುವ ಹಿರಿಯ ದೇಶಭಕ್ತರು, [೧೯೧೫-೨೦೦೫] ಹತ್ತಿಬಟ್ಟೆಯಲ್ಲಿ ಗಾಂಧಿ ಟೋಪಿಗಳನ್ನು ಹೊಲಿದು, ತಮ್ಮ “ಸುದರ್ಶನ್ ಖಾದಿನಿಲಯ” ದಲ್ಲಿ, ಮಾರಾಟಮಾಡಿದರು. ೧೯೯೯ ರಲ್ಲಿ ತಮ್ಮ ಆತ್ಮಚರಿತ್ರೆಯನ್ನು [“ಆಂತರ್ಯ”] ದಾಖಲಿಸಿದ್ದಾರೆ. ಅಲ್ಲಿ ಕರ್ನಾಟದ ಮುಂದಾಳುಗಳು ಹೇಗೆ ಸ್ವತಂತ್ರ್ಯ ಚಳುವಳಿಯಲ್ಲಿ ಧುಮಿಕಿದ್ದರು ಎನ್ನುವ ವಿವರಗಳು ಚೆನ್ನಾಗಿ ತಿಳಿಯುತ್ತವೆ. ಖಾದೀ ಗ್ರಾಮೋದ್ಯೋಗ ಭಂಡಾರಗಳಲ್ಲಿ, ೩ ಅಕ್ಟೋಬರ್ ನಿಂದ ೨೯ ಜನವರಿವರೆಗೆ ರಿಯಾಯಿತಿ ಸೇಲ್ ಇರುತ್ತದೆ. ಪ್ರತಿವರ್ಷ ಉತ್ಪತ್ತಿಯಾಗುವ ಬಟ್ಟೆಯ ಪ್ರಮಾಣ, ೧೧೧.೪೯ ಮಿಲಿಯನ್ ಸ್ಕ್ವೇರ್ ಮೀಟರ್ಗಳು. ಒಟ್ಟಿನಲ್ಲಿ ಹೊರಗೆ ಚಿಕ್ಕದೆಂದು ತೋರುವ, ಈ ಬೃಹತ್ ಸಣ್ಣಕೈಗಾರಿಕಾ ಕ್ಷೇತ್ರ, ೧೪.೯೭ ಲಕ್ಷ ಕಾರ್ಮಿಕರಿಗೆ ಉದ್ಯೋಗಾವಕಾಶವನ್ನು ನೀಡಿದೆ.

ಸ್ವಾತಂತ್ರ್ಯ, ಖಾದಿ, ಸ್ವಸಹಾಯ, ಇವೆಲ್ಲಾ ಒಂದಕ್ಕೊಂದು ಪೂರಕ. ನಮ್ಮದೇಶಕ್ಕೆ ಸ್ವಾತಂತ್ರ್ಯ ಕೊಡಿಸಲಿಕ್ಕಾಗಿಯೇ ಜನ್ಮವೆತ್ತಿಬಂದ “ಯುಗಪುರುಷ “, ಬಾಪುರವರಿಗೆ ನಮನಗಳು..

ಸ್ವಾತಂತ್ರ್ಯ ಆಂದೋಳನದಲ್ಲಿ ತಮ್ಮ ಪ್ರಾಣಗಳನ್ನು ಬಲಿದಾನಮಾಡಿದ ಭಾರತೀಯರು ಸಾವಿರಾರು. ಇನ್ನೂ ಹಲವು ಸಾವಿರ ಜನ ತಮ್ಮ ತನು ಮನಧನಗಳನ್ನು ಒತ್ತೆ ಇತ್ತು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡಿದ್ದರು. ಆದರೆ ಆ ಎಲ್ಲಾ ವೀರನಾಗರಿಕರನ್ನೆಲ್ಲಾ ಸಂಘಟಿಸಿ ಸರಿಯಾಗಿ ಮಾರ್ಗದರ್ಶನ ಮಾಡಿ ತಮ್ಮ ಅಮೂಲ್ಯ ಜೀವನವನ ಪ್ರತಿಕ್ಷಣಗಳನ್ನೂ ರಾಷ್ಟ್ರಕ್ಕಾಗಿ ಬಲಿದಾನಮಾಡಿದ ಗಾಂಧಿಯವರು ಪ್ರತಿಯೊಬ್ಬಭಾರತೀಯನ ಹೃದಯದಲ್ಲೂ ಅಮರರಾಗಿ ಉಳಿದಿದ್ದಾರೆ.

ಆಗಿನ ವಿಶ್ವದಲ್ಲಿ ಅತ್ಯಂತ ಬಲಿಷ್ಠದೇಶವಾಗಿದ್ದ, ಬ್ರಿಟಿಷ್ ಸಾಮ್ರಾಜ್ಯದ ಧುರೀಣರು ಅವರಾಗಿಯೇ ಬಿಟ್ಟುಹೋಗುವ ಪರಿಸ್ತಿತಿಯನ್ನು ನಿರ್ಮಾಣಮಾಡಿದವರು, ನಮ್ಮ ಬಾಪೂರವರು. ಯುದ್ಧಮಾಡಿಗೆಲ್ಲುವುದು ಈ ಯುಗದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಗೆಲ್ಲುವ ೧೦೦ ವರ್ಷಗಳಲ್ಲಿ ನಮ್ಮದೇಶ ಆಫ್ರಿಕಾದೇಶದಂತೆ ಹರಿದು ಹಂಚಿಹೋಗಿ ಸುಮಾರು ೧೦೦ ರಾಷ್ಟ್ರಗಳಾಗಿ ಪರಿವರ್ತನೆಗೊಳ್ಳುತ್ತಿತ್ತು. ಅತ್ಯಂತ ಕಡಿಮೆ ರಕ್ತಪಾತದಲ್ಲಿ, ಒಂದು ಬಹುದೊಡ್ಡ ಸಾಮ್ರಾಜ್ಯವನ್ನು ತೊಲಗಿಸಿದ ಮಾರ್ಗ, ಪ್ರಪಂಚದ ಚರಿತ್ರೆಯಲ್ಲಿ “ಸುವರ್ಣಾಕ್ಷರಗಳಲ್ಲಿ,” ಬರದಿಡುವಂತಹದು.

ಅಂತಹ ಅಖಂಡ, ಸಮೃದ್ಧ ಭಾರತವನ್ನು ನಮಗೆ ಗೆದ್ದುಕೊಟ್ಟ ಆ ಮಹಾತ್ಮನಿಗೆ ನಮ್ಮ ಹೃದಯ ಪೂರ್ವಕ ನಮನಗಳು. ಸಂಯುಕ್ತ ರಾಷ್ತ್ರಸಂಸ್ಥೆ, ೨೦೦೭ ಅಹಿಂಸಾ- ವರ್ಷವನ್ನಾಗಿ ಆಚರಿಸುತ್ತಿರುವುದು, ಆ ಮಹಾತ್ಮನಿಗೆ ಸಂದ ಗೌರವ. ಇದು ಭಾರತೀಯರಿಗೆಲ್ಲಾ ಹೆಮ್ಮೆಯ ವಿಷಯ.

ಖಾದಿಯ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇಲ್ಲದ ಗಾಂಧಿಯವರು, ಸ್ವಾತಂತ್ರ್ಯಸಾಧನೆಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ರಾಷ್ಟ್ರದ ಜನಶಕ್ತಿಯನ್ನು ಕ್ರೋಢೀಕರಿಸಿ, ಅಹಿಂಸಾಮಾರ್ಗದಲ್ಲೇ ನಡೆದು, ತಾವು ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದ ಕೇವಲ ೩೨ ವರ್ಷಗಳಲ್ಲೇ, ತಮ್ಮ ಅಮೋಘ ಮುಂದಾಳತ್ವದಲ್ಲಿ ನಮಗೆಲ್ಲಾ ಸ್ವತಂತ್ರ್ಯವನ್ನು ತಂದು ಕೊಟ್ಟರು. ಶತಮಾನಗಳ ದಾಸ್ಯದಿಂದ ಮುಕ್ತರಾದ ವಿಷಯ ಸಾಮಾನ್ಯವಾದದ್ದಲ್ಲ ! ಇದೊಂದು ಆಕಸ್ಮಿಕ, ಹಾಗೂ ಚಾರಿತ್ರ್ಯಿಕ ಘಟನೆ. ಸುವರ್ಣಾಕ್ಷರಗಳಲ್ಲಿ ದಾಖಲಿಸಲು ಪಾತ್ರವಾದದ್ದು !

ಇಂದು ನಾವು ಖಾದಿ ಬಟ್ಟೆಯ ಬಗ್ಗೆ ಒಂದು ಧಾರಣೆ ಹೊಂದಿದ್ದೇವೆ ರಾಜಕೀಯ ಪಕ್ಷಕ್ಕೆ ಒಂದು ಪ್ರತಿಷ್ಠೆ ಯ ಸಂಕೇತವಾದರೆ ಹಳ್ಳಿಗಳಲ್ಲಿ ಬಹಳ ಮಂದಿ ಹಿರಿಯರು, ಕಿರಿಯರು ಭಾಗವಹಿಸುವ ಮಾಡುವೆ, ಪೂಜೆಗಳು ಮೊದಲಾದ ಸಮಾರಂಭಗಳಲ್ಲಿ ಗಾಂಧಿ ಟೋಪಿ ಧರಿಸಿ ಸಂಭ್ರಮಿಸಿವುದನ್ನು ನಾನು ನೋಡಿದ್ದೇನೆ. (ಮಹಾರಾಷ್ಟ್ರದಲ್ಲಿ)
ಖಾದಿಯ ಪರಿಕಲ್ಪನೆ ಮಹಾತ್ಮರಿಗೆ ಬಂದದ್ದು ನಮ್ಮ ನಾಡಿನ ಗ್ರಾಮೀಣ ಜನರ ಬದುಕಿನಲ್ಲಿ ಒಂದು ನೆರವಿನ ಹಸ್ತ ನೀಡಲು. ಗ್ರಾಮೋದ್ಯೋಗಗಳಿಗೆ ಭಾರತೀಯ ಮಾರುಕಟ್ಟೆಗಳಲ್ಲಿ ಒಂದು ಸ್ಥಾನ ಕಲ್ಪಿಸಿ ಕೊಡಲು ಮಾಡಿದ ಪ್ರಥಮ ಪ್ರಯತ್ನ. ಈಗ ಅದೊಂದು ಬೃಹತ್ ಉದ್ಯಮವಾಗಿ ಭಾರತದಾದ್ಯಂತ ಪಸರಿಸಿದೆ. ಆಗಿನ ಬ್ರಿಟಿಷ್ ನವರು ಇಂಗ್ಲೆಂಡ್ ನಲ್ಲಿ ತಯಾರಿಸಿ ಭಾರತಕ್ಕೆ ಆಮದು ಮಾಡಿಕೊಂಡದುಬಾರಿ ವಸ್ತ್ರಗಳನ್ನು ಪುರಸ್ಕರಿಸದೆ ನಮ್ಮ ಜನರೇ ತಯಾರಿಸಿದ ಅತಿ ಕಡಿಮೆ ಬೆಲೆಯ ವಸ್ಟ್ರಗಳಿಗೆ ಆದ್ಯತೆ ಕೊಡುವುದು ಅತಿ ಮುಖ್ಯವಾಗಿತ್ತು. ಹೇಗಾದರೂ ಮಾಡಿ ಬ್ರಿಟಿಷ್ ಸರಕಾರಕ್ಕೆ ನಮ್ಮ ಜನರ ಪ್ರಾವೀಣ್ಯತೆಯನ್ನು ಮನದಟ್ಟು ಮಾಡುವುದು, ಮತ್ತು ಅವರ ಭಾರತ ವಿರೋಧಿ ನೀತಿಯನ್ನು ಶಾಂತಿಯುತವಾಗಿ ವಿರೋಧಿಸುವುದು ಅವರ ಧ್ಯೇಯವಾಗಿತ್ತು. ಇಂತಹ ಹಲವಾರು ಕಾರ್ಯವಿಧಿಗಳು ಅವನ್ನು ಆಯೋಜಿಸುವ ವಿಧಾನ,ಗಾಂಧಿಯವರ ನೇತೃತ್ವದ ಮಜಲುಗಳನ್ನು ಅರ್ಥಮಾಡಿಕೋಳ್ಳಲು ಬಿಳಿಯರು ಹರಸಾಹಸ ಮಾಡಬೇಕಾಯಿತು.

ಇಷ್ಟಾದರೂ ಖಾದಿ ಎಂಬ ಪದದ ಕಲ್ಪನೆಯನ್ನು ಕಾರ್ಯರೂಪಪಕ್ಕೆ ತರುವುದು ಸುಲಭಕಾರ್ಯವಾಗಿರಲಿಲ್ಲ:
ಖಾದಿಯ ಪ್ರಸಾರಕ್ಕೆ ಮಹಾತ್ಮ ಗಾಂಧಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ; ಖಾದಿ ಬಳಕೆ ಸ್ವಾತಂತ್ರ್ಯಸಂಗ್ರಾಮದ ಮಹತ್ತರ ಪ್ರಯೋಗಗಳಲ್ಲೊಂದಾಗಿತ್ತು !
ಮಹಾತ್ಮ ಗಾಂಧಿಯವರು ಖಾದಿಯನ್ನು ಬಳಕೆಗೆ ತರಲು ಬಹಳ ಶ್ರಮ ಪಟ್ಟರು. ಖಾದಿಯ ಪ್ರಚಾರದ ಪ್ರಾರಂಭ ಹೇಗಾಯಿತೆನ್ನುವುದರ ಬಗ್ಗೆ ಬಹಳ ಜನರಿಗೆ ಹೆಚ್ಚು ತಿಳಿದಿಲ್ಲ. ಮಹಾತ್ಮರಿಗೆ ಅದೊಂದು ದೊಡ್ಡ ಸವಾಲಾಗಿತ್ತು. ಚರಖದಲ್ಲಿ ಹತ್ತಿ ನೂಲನ್ನು ನೇಯುವ ಕಲೆ ಮಹಾತ್ಮರಿಗೇನು ಗೊತ್ತು ? ಸಬರ್ಮತಿಯಲ್ಲಿ ಅವರ ಸಹಚರರಲ್ಲಿ ಅನೇಕರು ಚರಖದಲ್ಲಿ ಹತ್ತಿ ನೂಲುವ ವಿಷಯ ತಮ್ಮ ಮನೆಯ ಹಿರಿಯರಿಂದ ಕೇಳಿ ತಿಳಿದಿದ್ದರು. ಆದರೆ ಅವರಿಗೆ ಖುದ್ದಾಗಿ ಚರಖವನ್ನು ಚಲಾಯಿಸಲು ಬರುತ್ತಿರಲಿಲ್ಲ. ಅಲ್ಲಿನ ಆಶ್ರಮ ವಾಸಿಗಳೆಲ್ಲಾ ಸರದಿಯಂತೆ ಹಳ್ಳಿಗಳಿಗೆ ಭೇಟಿ ಕೊಟ್ಟು ನೂಲುವ ಕಲೆ ತಿಳಿದವರನ್ನು ಆಶ್ರಮಕ್ಕೆ ಕರೆತಂದು ಗಾಂಧಿಯವರಿಗೆ ಪರಿಚಯ ಮಾಡಿಸಿದರು. ಆತ್ಮ ವಿಶ್ವಾಸ, ಕಷ್ಟ ಸಹಿಷ್ಣತೆ, ಅಧ್ಯಯನ, ಮತ್ತು ಜನರಿಗೆ ಅದರ ಬಗ್ಗೆ ಮಾಹಿತಿಕೊಡುವ ತಾಳ್ಮೆ, ಗಾಂಧಿಯವರಿಗೆ ದೇವರು ಕೊಟ್ಟ ಅತಿ ಮಹತ್ತರ ಕೊಡುಗೆಗಳು.

ಕೊನೆಗೆ ಖಾದಿ ಬಟ್ಟೆಯತಯಾರಿಕೆ- ನೂಲುವುದು, ನೇಯುವುದು ಭಾರತದ ಬಹುಪಾಲು ಜನರ, ದೈನಂದಿನ ಚಟುವಟಿಕೆಯಾಯಿತು. ಮಹಾತ್ಮರು ನೂಲುತ್ತಿದ್ದ ದಾರದ ಕೌಂಟ್ ಎಷ್ಟಿರಬಹುದು ? ಯಾರಾದರೂ ಊಹಿಸಿರುವಿರಾ ? ಅದು ೨೦ಸ್ ನಿಂದ ೨೨ಸ್ ವರೆಗೆ !
ತಕಲಿಯ ಪೆಟ್ಟಿಗೆ, ಒಂದು ’ಇನ್ನೊವೇಶನ್,’ ಯೆಂದು ಹೇಳಬೇಕು. ಚರಕವನ್ನು ಬದಿಗಿಟ್ಟು, ಇದರ ಬಳಕೆಯನ್ನು ಎಲ್ಲರೂ ಮಾಡಲು ಶುರುಮಾಡಿದರು. ಈ ಪೆಟ್ಟಿಗೆಯನ್ನು ಸುಲಭವಾಗಿ ಎಲ್ಲಿಗೆಬೇಕಾದರೂ ಒಯ್ಯಬಹುದು. ಅಲ್ಲದೆ, ಒಂದು ಬಾರಿ ಹ್ಯಾಂಡಲ್ ಘುಮಾಯಿಸಿದರೆ, ನೂಲಿನ ಚಕ್ರ ಅದೆಷ್ಟೋ ಬಾರಿ ರಭಸದಿಂದ ತಿರುಗುವುದು. ಹೆಚ್ಚು ಶ್ರಮಪಡಬೇಕಾಗಿಲ್ಲ.

ಮಹಾತ್ಮ ಗಾಂಧಿಯವರ, “An Atobiography,” or “The story of My Experiments with Truth ” ನಿಂದ “ಖಾದಿ,” ಎನ್ನುವ ಪರಿಚ್ಛೇದದಿಂದ ಮಾಡಿದ ಅನುವಾದದ ಕೆಲವು ಭಾಗಗಳನ್ನು ಆಯ್ದು ಕೊಟ್ಟಿದ್ದೇನೆ.

” ನನಗೆ, ೧೯೦೮ ರ ಹೊತ್ತಿಗೂ ಸರಿಯಾಗಿ ಕೈಮಗ್ಗ, ಅಥವ ಚರಕ, ನೋಡಿದ ನೆನಪಿಲ್ಲ. ನನ್ನ ಪತ್ರಿಕೆ, “ಹಿಂದ್ ಸ್ವರಾಜ್ಯ,” ದಲ್ಲಿ, ಖಾದಿಯ ಬಗ್ಗೆಯೇನೋ ಬರೆದಿದ್ದೆ. ಸ್ವಾವಲಂಬನೆಯ ಪ್ರಾಮುಖ್ಯತೆ, ನನಗಂತೂ ಚೆನ್ನಾಗಿ ಮನವರಿಕೆಯಾಗಿತ್ತು. ನಮ್ಮ ಗ್ರಾಮಗಳ ಬಡಜನರಿಗೆ ಉದ್ಯೋಗಾವಕಾಶದ ಅಗತ್ಯವಿತ್ತು. ಬೇಸಾಯವನ್ನು ವರ್ಷವಿಡೀ ಮಾಡಲು ಬಹಳ ಅಡಚಣೆಗಳಿದ್ದವು. ಅವರ ಬಡತನವನ್ನು ತೊಲಗಿಸಲು ಬೇಸಾಯ ಒಂದರಲ್ಲೇ ಸಾಧ್ಯವಾಗುತ್ತಿರಲಿಲ್ಲ. ೧೯೧೫ ರಲ್ಲಿ ನಾನು ದ. ಆಫ್ರಿಕದಿಂದ ವಾಪಸ್ ಬಂದಾಗಲೂ, ಚರಕದ ದರ್ಶನವಾಗಿರಲಿಲ್ಲ. ಆಮೇಲೆ, ನಾವು ಸಬರ್ಮತಿಆಶ್ರಮ ಸ್ಥಾಪಿಸಿದಾಗ ಮಾಡಿದ ಮೊದಲಕೆಲಸವೆಂದರೆ, ಮಗ್ಗಗಳ ಏರ್ಪಾಡು. ಆದರೆ ನಾವೆಲ್ಲಾ ನಮ್ಮ ನಮ್ಮ ವೃತ್ತಿಗಳಲ್ಲಿ ವ್ಯಸ್ತರಾಗಿದ್ದವರು. ನಮಗೆ ಬಟ್ಟೆನೇಯುವ ವಿಷಯ ನಿಜಕ್ಕೂ ತಿಳಿದಿರಲಿಲ್ಲ.

“ಮಗನ್ ಲಾಲ್ ಗಾಂಧಿಯವರು, ಪಾಲನ್ಪುರದಲ್ಲಿ ನೇಯುವ ಕಲೆಯನ್ನು ಕಲಿಯಲು ಏರ್ಪಾಡುಮಾಡಿದರು. ಮೊದ ಮೊದಲು ನಮ್ಮ ಉಪಯೋಗಕ್ಕೆ ಬೇಕಾಗುವ ಬಟ್ಟೆಗಳನ್ನು ನಾವೇ ಏಕೆ ಮಾಡಿಕೊಳ್ಳಬಾರದು, ಎನ್ನುವ ನನ್ನ ಯೋಚನೆ ಬಹಳ ಚೆನ್ನಾಗೇನೋ ಕಂಡಿತು. ಆದರೆ ಅದರ ಹಿಂದೆ ಇದ್ದ ಹತ್ತಾರು, ನೂರಾರು ಸಮಸ್ಯೆಗಳನ್ನು ನೋಡಿದಾಗ ಹೇಳಿದಷ್ಟು ಸುಲಭವಾಗಿರಲಿಲ್ಲ ಎನ್ನುವುದು ನಿಧಾನವಾಗಿ ಮನವರಿಕೆಯಾಗುತ್ತಾ ಹೋಯಿತು. ನೂಲುವುದು ಒಂದು ; ಬಟ್ಟೆ ನೇಯುವುದು ಮತ್ತೊಂದು. ಆದರೆ ತಕ್ಷಣ ಬಟ್ಟೆಯನ್ನು ತಯಾರಿಸಿ ನಮ್ಮ ದೇಶದ ಜನರಿಗೆ ಒದಗಿಸುವುದು ಸಾಧ್ಯವೇ ? ನಾವು ಮೊದಲು ಕೈಮಗ್ಗದ ನೇಕಾರರ ಮೊರೆಹೋಗಬೇಕಾಯಿತು. ಇದಕ್ಕೆ ಬೇಕಾದ ದಾರ, ಮಿಲ್ ಗಳಿಂದ ತಾನೇ ಬರುವುದು. ಅದು ಬಹಳ ಕಷ್ಟಸಾಧ್ಯದ ಮಾತು. ಮಿಲ್ ಮಾಲೀಕರು ದಾರ ಒದಗಿಸಲು ತಯಾರಾಗಿರಲಿಲ್ಲ. ನಾವು ಭಾರತದ ಸ್ಪಿನ್ನಿಂಗ್ ಮಿಲ್ ಗಳಿಂದ ದಾರ [ಪಡೆದು ಬಟ್ಟೆಮಾಡಿಕೊಡುವ ಏಜೆಂಟ್ ಗಳಾಗಿ ಕೆಲಸಮಾಡುವುದಾಗಿ ಯೋಚಿಸಿದೆವು. ನಮಗೆ ದಾರ ನೂಲುವ ಕಲೆ ಇನ್ನೂ ಸರಿಯಾಗಿ ತಿಳಿದಿರಲಿಲ್ಲ. ಅದನ್ನು ನಮಗೆ ಕಲಿಸಲು ಯಾರೂ ಸಿಕ್ಕಲೂ ಇಲ್ಲ. ಕಡೆಗೆ ಕಾಳಿದಾಸ್ ಜವೇರಿಯವರಿಗೆ ಒಬ್ಬ ಹೆಣ್ಣುಮಗಳ ಪರಿಚಯವಾಯಿತು. ನಮ್ಮ ಆಶ್ರಮದ ಒಬ್ಬರನ್ನು, ಆಕೆಯಮನೆಬಾಗಿಲಿಗೆ ದಾರ ನೂಲುವುದನ್ನು ಕಲಿಯಲು ಕಳಿಸಿಕೊಟ್ಟೆವು. ಆದರೆ ಆತ ಹಾಗೆಯೇ ವಾಪಸ್ ಬಂದರು. ನೂಲುವ ಕಲೆಯ ಗುಟ್ಟನ್ನು ತಿಳಿಸಲು ಅವರು ಸಿದ್ಧರಾಗಿರಲಿಲ್ಲ. ನನಗಂತೂ ಬೇಜಾರಾಗಿಹೋಯಿತು.

೧೯೧೭ ರಲ್ಲಿ, ಒಮ್ಮೆ ಗುಜರಾತಿನ “ಬ್ರೋಚ್ ಎಜ್ಯುಕೇಷನಲ್ ಕಾನ್ಫರೆನ್ಸ್,” ನಲ್ಲಿ ಭಾಗವಹಿಸಲು ನಾನು ಹೋದಾಗ, ಗಂಗಾಬೆನ್ ಮುಜುಮ್ದಾರ್, ಎಂಬ ಒಬ್ಬ ವಿಶಿಷ್ಟ ಮಹಿಳೆಯ ಪರಿಚಯವಾಯಿತು. ವಿದ್ಯಾಭ್ಯಾಸ ಅಷ್ಟು ಹೆಚ್ಚಾಗಿಇರದಿದ್ದರೂ, ಆಕೆಯ ಸಾಮಾನ್ಯಜ್ಞಾನ, ಮತ್ತು ವ್ಯವಹಾರಜ್ಞಾನ ಅಪರಿಮಿತವಾಗಿತ್ತು. ವಿಧವೆಯಾದ ಆಕೆ, “ಗೋಧ್ರಾ ಕಾನ್ಫರೆನ್ಸ್” ಗೆ ಕುದುರೆಯಮೇಲೆ ಕುಳಿತು ಬಂದಿದ್ದರು. ಅಲ್ಲಿ ನಾನು ಅವರನ್ನು ನನ್ನ ಸ್ವಾವಲಂಬನೆಯ ಪ್ರತೀಕವಾಗಿದ್ದ ಖಾದಿ ಬಟ್ಟೆಯನ್ನು ತಯಾರಿಸುವ ವಿಷಯವನ್ನು ತೋಡಿಕೊಂಡೆ. ಅವರಿಗೆ ಗೊತ್ತಿರುವ ಜನರ ಹತ್ತಿರ ಮಾತನಾಡಿ ಅದನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಆಕೆ ಆಶ್ವಾಸನೆ ನೀಡಿದರು. ಕೊನೆಗೆ, ವಿಜಪುರ್, ಬರೋಡಾದಲ್ಲಿ, ಚರಕ ಸಿಕ್ಕಿತು. ಆ ರಾಜ್ಯದ ಹಲವು ಹಳ್ಳಿಗಳಲ್ಲಿ ಚರಕ ಚಲಾಯಿಸಿ ನೂಲುವವರ ಸಂಖ್ಯೆ ಸುಮಾರಾಗಿಯೇ ಇತ್ತು. ಗಂಗಾಬೆನ್, ಅವರನ್ನು ಭೆಟ್ಟಿಯಾದಾಗ ಅವರು ತಮಗೆ ಹತ್ತಿಯ ಪೂನಿಯನ್ನು ಸಮಯ ಸಮಯಕ್ಕೆ ಸರಿಯಾಗಿ ಒದಗಿಸಿ ; ಆಮೇಲೆ ತಯಾರಾದ ದಾರವನ್ನು ಕೊಳ್ಳಲು ಮುಂದೆಬರುವ ಯಾರೇ ಆಗಲಿ ನಮಗೆ ಒಪ್ಪಿಗೆ, ಎಂದರು. ಈ ವಿಷಯವನ್ನು ಗಂಗಾಬೆನ್ ನನಗೆ ತಿಳಿಸಿದಾಗ, ಹಾಲುಕುಡಿದಷ್ಟು ಆನಂದವಾಯಿತು ; ಆದರೂ ಅಷ್ಟೊಂದು ಪೂನಿಯನ್ನು ಕೊಡುವವರ್ಯಾರು ? ಈ ವಿಷಯವನ್ನು ಉಮರ್ ಸೋಬಾನಿಯವರ ಮುಂದೆ ಹೇಳಿದಾಗ, ಅವರು ತಕ್ಷಣಕ್ಕೆ ಯಾರಿಗೋಹೇಳಿ, ಅದರ ಎರ್ಪಾಡು ಮಾಡಿಯೇಬಿಟ್ಟರು.

ಹೀಗೆ, ನಮ್ಮ ಚರಕಗಳು “ಗುಂಯ್ ಗುಟ್ಟಲು,” ಆರಂಭಿಸಿದವು. ದಾರ ಎಷ್ಟುಹೆಚ್ಚು ಉತ್ಪಾದನೆಯಾಯಿತೆಂದರೆ, ಅದನ್ನು ನೇಯಲು ಸಾಧ್ಯವಾಗದಷ್ಟು ! ಈಗ ನನ್ನ ತಲೆಯಲ್ಲಿ ಮತ್ತೊಂದು ವಿಚಾರ ಹುಟ್ಟಿಕೊಂಡಿತು. ಮಿಲ್ ನಿಂದ ದಾರವನ್ನೇನೋ ಕೊಂಡಿದ್ದಾಯಿತು. ಅವರಿಂದಲೇ ಬಟ್ಟೆಯನ್ನೂ ಕೊಳ್ಳಬಾರದೇಕೆ ? ಎನ್ನಿಸಿತು. ನಾನು ಗಂಗಾಬೆನ್ ರ ಜೊತೆ ಸಮಾಲೊಚಿಸಿ, ಕಾರ್ಡಿಂಗ್ ಮಾಡುವವರನ್ನು ಹುಡುಕಲು ಶುರುಮಾಡಿದೆ. ತಕ್ಷಣ ಗಂಗಾಬೆನ್ ಹೇಗೋ ಪ್ರಯತ್ನಿಸಿ, ಒಬ್ಬ ಕಾರ್ಡರ್ ನನ್ನು ಕರೆದುಕೊಂಡು ಬಂದರು. ಅವನು ತಿಂಗಳಿಗೆ ೩೫ ರೂಪಾಯಿಕೊಡುವುದಾದರೆ ಸರಿ, ಎಂದನು. ನನಗಂತೂ ಸಾಕುಸಾಕಾಗಿಹೋಗಿತ್ತು. ಸದ್ಯ, ದಾರನೂತರೆ ಸಾಕಪ್ಪ, ಅನ್ನಿಸಿತ್ತು. ಹಣ ಎಷ್ಟಾದರು ಆಗಲಿ, ಪರವಾಗಿಲ್ಲ, ಎನ್ನುವಷ್ಟು ಮನಸ್ಸು ರೋಸಿಹೊಗಿತ್ತು. ಈಗ ಚಿಕ್ಕ ವಯಸ್ಸಿನ ಯುವಕರುಗಳನ್ನು ನೂಲುವ ಕಾರ್ಯದಲ್ಲಿ ತಯಾರುಮಾಡಲಾಯಿತು. ಮೊದಲು ನಮ್ಮಬಳಿ ಲಿಂಟ್ ಹತ್ತಿಇರಲಿಲ್ಲ. ಅದಕ್ಕಾಗಿ ಯಶವಂತ್ ಪ್ರಸಾದ್ ದೇಸಾಯಿಯವರನ್ನು ಬೇಡಿಕೊಂಡಿದ್ದಾಯಿತು. ಗಂಗಾಬೆನ್ ರವರ ಸೌಹಾರ್ದತೆಯಿಂದ ಈ ಕಾರ್ಯ ಚೆನ್ನಾಗಿಯೇ ಮುಂದುವರೆಯಿತು. ವಿಜಯಯಪುರ್ ನಲ್ಲಿ ನೂತ ದಾರವನ್ನು ಬಳಸಿಕೊಂಡು ಬಟ್ಟೆಮಾಡುವ ಕೆಲಸ ಜೋರಾಗಿ ಆಕೆ ನಡೆಸಿಕೊಟ್ಟರು. ಎಲ್ಲೆಡೆ ’ವಿಜಯ್ ಪುರ್ ಖಾದಿ ’ ಯಹೆಸರು ಹರಡಿತು.

ಇದನ್ನೆಲ್ಲಾ ಗಮನಿಸುತ್ತಿದ್ದ ಮಗನ್ ಲಾಲ್ ಗಾಂಧಿ, ಸಬರ್ಮತಿ ಆಶ್ರಮದಲ್ಲಿಯೂ ಖಾದಿಯನ್ನು ಮಾಡಲು ಚರಕದ ಏರ್ಪಾಡು ಮಾಡಿದರು. ಚರಕದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದ್ದಲ್ಲದೆ ಮಗನ್ ಲಾಲರು, ಸ್ಪೇರ್ ಪಾರ್ಟ್ಸ್ ತಯಾರಿಸುವ ಆಶಯವನ್ನೂ ಹೊಂದಿದ್ದರು. ಆಶ್ರಮದ ಆವರಣದಲ್ಲಿ ತಯಾರಾದ ಖಾದಿವಸ್ತ್ರದ ಬೆಲೆ ಒಂದು ಗಜಕ್ಕೆ, ೧೭ ಆಣೆ ಇತ್ತು. ಖಾದಿಯನ್ನು ಮಾರುವುದು ಈಗಿನ ಸದ್ಯದ ಕೆಲಸ. ನಾನು ನನ್ನಗೆಳೆಯರಿಗೆಲ್ಲ ಖಾದಿಯನ್ನು ಕೊಂಡು ಉಟ್ಟುಕೊಳ್ಳಲು, ಶಿಫರಿಸ್ ಮಾಡಿದೆ. ನನ್ನ ಕರೆಗೆ ಓಗೊಟ್ಟು, ಅವರೆಲ್ಲಾ ಆತುರದಿಂದ ಅದನ್ನು ಕೂಡಲೇ ಖರೀದಿಸಿದರು.

ನಾನು ಬೊಂಬಾಯಿನಲ್ಲಿದ್ದಾಗ, ನನ್ನ ಆರೊಗ್ಯ ಹದಗೆಟ್ಟಿತ್ತು. ಅದರಮಧ್ಯದಲ್ಲಿಯೇ ಚರಕವೇನಾದರೂ ಸಿಗುತ್ತದೆಯೇ ಎಂದು ಕಂಡಕಂಡವರನ್ನು ವಿಚಾರಿಸುತ್ತಿದ್ದೆ. ಬಹಳ ಕಷ್ಟದಿಂದ ಇಬ್ಬರು ಸಿಕ್ಕರು. ಒಂದು ಸೇರು ದಾರ ನೂತುಕೊಡುವುದಕ್ಕೆ ಅವರು ೧ ರೂಪಾಯಿ ಕೇಳಿದರು. ೨೮ ತೊಲಕ್ಕೆ ; ಮುಕ್ಕಾಲು ಪೌಂಡ್ ದರ. ನಾನು ಆಗ ಖಾದಿಯಬೆಲೆಯ ಲೆಖ್ಖಾಚಾರ ತಿಳಿಯಲು ಮನಸ್ಸೂ ಮಾಡಿರಲಿಲ್ಲ. ಒಟ್ಟಿನಲ್ಲಿ, ನಾನು ಕೊಟ್ಟ ಹಣ ವಿಯಯಪುರಕ್ಕೆ ಹೊಲಿಸಿದರೆ ಅತಿಹೆಚ್ಚಾಗಿತ್ತು. ನನಗೆ ಮೋಸವಾಗಿದೆಯೆಂದು ಈಗ ತಿಳಿಯಿತು. ಇಷ್ಟೊಂದು ಬೆಲೆತೆತ್ತು ದಾರ ಕೊಳ್ಳುವುದು ಎಷ್ಟು ದುಬಾರಿಯೆಂದು ನೂಲುಮಾರುವವರಿಗೆ ಎಷ್ಟು ವಿವರಿಸಿದರೂ ಅವರು ತಲೆಗೆ ಹಾಕಿಕೊಳ್ಳಲಿಲ್ಲ. ಇಂತಹ ಇಕ್ಕಟ್ಟಿನ ಸಮಯದಲ್ಲಿ ಈ ನನ್ನ ಕೆಲಸವನ್ನು ತಡೆಹಿಡಿಯದೆ ವಿಧಿಯಿರಲ್ಲ. ಆದರೆ ಒಂದುವಿಧದಲ್ಲಿ ನಮಗೆ ಲಾಭವೂ ಆಗಿತ್ತು. ನಮ್ಮ ಆಶ್ರಮನಿವಾಸಿಗಳಲ್ಲೇನಕರು ನೂಲುವ ಕಲೆಯನ್ನು ಈ ಅವಧಿಯಲ್ಲಿ ಕಲಿತುಕೊಂಡಿದ್ದರು. ಶ್ರೀಮತಿ ಆವಂತಿಕ ಬಾಯಿ, ರಾಮಿಬಾಯಿ ಕಾಂದಾರ್, [ಶ್ರೀಮತಿ ಶಂಕರಲಾಲ್ ಬ್ಯಾಂಕರ್ ರವರ ವಿಧವ ತಾಯಿ] ಶ್ರಿಮತಿ ವಸುಮತಿ ಬೆನ್. ಇತ್ಯಾದಿ. ನನ್ನ ರೂಂ ಹತ್ತಿರ ಚರಕದ ಶಬ್ದ ‘ಸುಂಯ್’ ಗುಟ್ಟಲು ಶುರುವಾಯಿತು. ಈ ಶಬ್ದ ನನ್ನ ಆರೋಗ್ಯವನ್ನು ಸರಿಪಡಿಸಿದ ರಾಮಬಾಣವಾಗಿತ್ತು. ಸ್ವಲ್ಪ ಚೇತರಿಸಿಕೊಂಡಮೇಲೆ ನಾನೂ ಅವರೆಲ್ಲರ ಮಧ್ಯೆ ಕುಳಿತು ನೂಲಲು ಪ್ರಾರಂಭಿಸಿದೆ.

ಬೊಂಬಾಯಿನಲ್ಲಿ ರೇವಾಶಂಕರ್ ಜಿ ರವರ ಮನೆಯಮುಂದೆ ಪ್ರತಿದಿನ ‘ಟುಯ್,’ ‘ಟುಯ್,’ ಎಂದು ಬಿಲ್ಲನ್ನು ಶಬ್ದಮಾಡುತ್ತ ಬರುತ್ತಿದ್ದ ಕಾರ್ಡರ್ ನನ್ನು ನಾನು ವಿಚಾರಿಸಿದೆ. ಅವನು ಹಾಸಿಗೆಗೆಗಳಿಗೆ ಹತ್ತಿತುಂಬುವ ಕೆಲಸಮಾಡುತ್ತಿದ್ದ. ಅವನನ್ನು ವಿಚಾರಿಸಿದಾಗ ಹತ್ತಿ ಪೂನಿ ಮಾಡಿಕೊಡಲು ಸಹಕರಿಸಿದ. ಆದನ್ನು ಅವನು ತನ್ನ ವೈಷ್ಣವ ಗೆಳೆಯರಿಗೆ ಮಾಡಿಕೊಟ್ಟ. ಅವರು ಅದನ್ನುಪಯೋಗಿಸಿಕೊಂಡು ’ಜನಿವಾರ,’ ಮಾಡಿದರು. ಶಿವಾಜಿಯವರು ಹತ್ತಿದಾರ ತಯಾರಿಸುವ ಕಲೆಯನ್ನು ಹೇಳಿಕೊಡುವ ಒಂದು ಶಾಲೆಯನ್ನು ಪ್ರಾರಂಭಿಸಿದರು . ಅದಕ್ಕೆ ಆದ ಖರ್ಚನ್ನು ಗೆಳೆಯರೆಲ್ಲಾ ಹಂಚಿಕೊಂಡಿದ್ದರು. ಅವರಿಗೆಲ್ಲ ನನ್ನ ಮಾತಿನಲ್ಲಿ ಅತುಲವಿಶ್ವಾಸ , ರಾಷ್ಟ್ರಮಾತೆಯ ಮೇಲಿನ ಮಮತೆಯಿಂದಾಗಿ ಅವರೆಲ್ಲಾ ಖಾದಿ ತತ್ವವನ್ನು ಅನುಮೊದಿಸಿದರು.

ಈಗ ನನಗೆ ತಕ್ಷಣ ನನ್ನ ಉಡುಪನ್ನು ಖಾದಿಗೆ ಪರಿವರ್ತಿಸುವ ಆತುರ ಹೆಚ್ಚಾಯಿತು. ನಾನು ಉಡುತ್ತಿದ್ದ ಧೋತಿ ಮಿಲ್ ಬಟ್ಟೆ . ವಿಜಯ್ ಪುರ್ ನಲ್ಲಿ ಮಾಡಿದ ಖಾದಿಬಟ್ಟೆಯ ಅಗಲ ಕೆವಲ ೩೦ ಇಂಚ್ ಇತ್ತು. ಅದನ್ನು ಉಟ್ಟರೆ ನನ್ನ ಮೈಗೆ ಅದು ಸರಿಯಾಗಿ ಹೊಂದುತ್ತಿರಲಿಲ್ಲ. ಅಗಲ ತೀರ ಕಡಿಮೆ ಇತ್ತು. ನನಗೆ ಕೂಡಲೇ ೪೫ ಇಂದಿನ ಖಾದಿ ವಸ್ತ್ರವನ್ನು ತಯಾರಿಸಿ ಕೊಡಿಸಬೇಕೆಂದು ಗಂಗಾಬೆನ್ ರವರಿಗೆ ಮನವಿಮಾಡಿದೆ. ಆಕೆ ಒಂದು ತಿಂಗಳೊಳಗೇ ಒಂದು, ಜೊತೆ ೪೫ ಇಂಚಿನ ಧೋತಿಯನ್ನು ತಂದು ಕೊಟ್ಟರು. ಈ ಕಾರ್ಯದಿಂದ ನನಗಾದ ಆನಂದದ ಎಲ್ಲೆಯಿರಲಿಲ್ಲ. ಶ್ರಿಮತಿ ಲಕ್ಷ್ಮೀದಾಸ್, ಶ್ರೀ ರಾಮ್ಜಿ, ಮತ್ತು ಅವನ ಹೆಂಡತಿ, ಗ್ಂಗಾಬೆನ್ ರನ್ನು ಲಾತಿಯಿಂದ ಆಶ್ರಮಕ್ಕೆ ಕರೆತಂದರು. ಸತಿ-ಪತಿಯರಿಬ್ಬರು ಸೇರಿಮಾಡಿದ ಸೇವೆಯನ್ನು ಮರೆಯುವಂತಿಲ್ಲ. ಅವರು ತಮ್ಮ ಗುಜರಾಥಿ ಗೆಳೆಯರಿಗೆಲ್ಲಾ ಖಾದಿಯ ಮಹತ್ವ ಮತ್ತು ಸ್ವಾತಂತ್ರ್ಯಗಳಿಸಲು ನಾವು ಸ್ವಸಿದ್ಧರಾಗಬೇಕಾದ ಆವಶ್ಯಕತೆಗಳಬಗ್ಗೆ ತಿಳಿಹೇಳಿದರು. ಮತ್ತು ಅದರ ಪ್ರಚಾರವನ್ನು ಎಲ್ಲೆಡೆ ಮಾಡಿದರು. ಗಂಗಾಬೆನ್ ಮಾತ್ರ, ತಮ್ಮ ಕಣ್ಣನ್ನು ಈಕಡೆ, ಆಕಡೆ, ಅಲುಗಿಸದೆ ಚರಕವನ್ನು ಚಲಾಯಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ದೃಷ್ಯನ್ನು ನೋಡಿ ನಮ್ಮ ಕಣ್ಣುಗಳು ಧನ್ಯವಾದವು ! ಖಾದಿಬಟ್ಟೆಯ ತಯಾರಿಕೆಯ ಸ್ವಾವಲಂಬನೆಯಿಂದಲೇ ಎನ್ನುವ ಮಾತು, ಅವರ ತಲೆ ಮತ್ತು ಮೈಯಿನ ರೋಮರೋಮಗಳಲ್ಲಿ ಆವೃತವಾಗಿರುವಂತೆ ಗೋಚರಿಸಿತು ! ಅಷ್ಟು ವೃತ್ತಿಪರ, ಮತ್ತು ವ್ಯಕ್ತಿಗಳಿಂದಲೇ ಇಂಥ ಮಹತ್ಕಾರ್ಯಗಳು ಸಾಧ್ಯ.

ಇದಾದಮೇಲೆ, ಮಿಲ್ ಮಲೀಕರುಗಳು ತಮ್ಮ ವ್ಯಕ್ತಪಡಿಸಲು ಪ್ರಾರಂಭಿಸಿದರು. ನನ್ನ ಗೆಳೆಯ ಉಮರ್ ಸೊಬಾನಿ ನನಗೆ ಅಲ್ಲಿನ ವಹಿವಾಟುಗಳಬಗ್ಗೆ ಆಗಾಗ ತಿಳಿಸುತ್ತಿದ್ದರಲ್ಲದೆ, ಅವರನ್ನು ಒಮ್ಮೆ ಭೇಟಿಮಾಡಲು ಆಹ್ವಾನಿಸಿದರು. ಅವರು ಮೊದಲು ನಾನು ಕೇಳಿದ ಪ್ರಶ್ನೆಗಳು ನಿಜಕ್ಕೂ ದಾಖಲಿಸಲು ಯೋಗ್ಯವಾಗಿದ್ದವು. “ಎಷ್ಟೇ ಹೇಳಿದರೂ ಮಿಲ್ ಮಲೀಕರಾದ ನಾವು, ಖಾದಿಯನ್ನು ವಿರೋಧಿಸುತ್ತೇವೆ. ನನ್ನೊಬ್ಬನ ವಿಷಯ ಬಿಡಿ. ನಮ್ಮ ಬಟ್ಟೆಯ ಬೆಲೆಗಳನ್ನು ಮಾರುಕಟ್ಟೆಯ ಅಗತ್ಯಗಳಿಗನುಗುಣವಾಗಿ ಏರಿಸಿ ಲಾಭಪಡೆಯುವ ಸ್ವಭಾವ ನಮ್ಮದು. ನಿಮ್ಮ ಭಾವನೆಗಳು ನಮಗೆ ತಿಳಿಯುತ್ತವೆ. ನಾವೇನೋ ಲಾಭಕ್ಕಾಗಿಯೇ ಎಲ್ಲ ಮಾಡುವವರು. ಏಕೆಂದರೆ ನಮ್ಮ ಶೇರ್ ಹೋಲ್ಡರ್ ಗಳನ್ನು ಸಮಾಧಾನಪಡಿಸುವುದೇ ನಮ್ಮ ಧ್ಯೇಯ. ಸ್ವದೇಶಿ, ಎನ್ನುವ ಖಾದಿ ಬಟ್ಟೆಗಳ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಇಷ್ಟು ಕಡಿಮೆ ಸಂಖ್ಯೆಯಲ್ಲಿ ತಯಾರಿಸುವಾಗ ಬಟ್ಟೆಗಳ ಕ್ರಯ ತಾನಾಗಿಯೇ ಹೆಚ್ಚುವುದಿಲ್ಲವೇ ? ಆದ್ದರಿಂದ ನೀವು ಹೀಗೆ ಮಾಡಿ. ಹೆಚ್ಚು ಹೆಚ್ಚು ದೇಸಿ ಕಾರ್ಖಾನೆಗಳನ್ನು ಮಾಡಿ ಅದರಿಂದ ತಯಾರಾದ ಬಟ್ಟೆಗಳನ್ನು ನಾವು ಸ್ವದೇಶಿ ಎಂದು ಘೋಷಿಸಬಹುದಲ್ಲಾ, ಎನ್ನುವಮಾತು ನಿಮಗೆ ಹೇಗೇ ತೋರುವುದೊ ನಮಗೆ ತಿಳಿಯದು,” ಎಂದರು.

” ಇಲ್ಲಿ ಒಂದು ಉದಾಹರಣೆಗೆ, ಕೊಡುವ. ನಿಮಗೆ ಒಂದು ವಸ್ತ್ರದ ನಮೂನೆಯನ್ನು ತೋರಿಸುತ್ತೇನೆ. ತ್ಯಾಜ್ಯ ವಸ್ತುಗಳಿಂದ ಇಂತಹ ಫ್ಯಾಶನಬಲ್ ಬಟ್ಟೆ ಮಾಡಿದ್ದೇವೆ, ನೋಡಿ. ಜನರಿಗೂ ಇದು ಹಿಡಿಸಿದೆ. ಇದನ್ನು ದೇಶದಾದ್ಯಂತ, ಅಂದರೆ, ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಕಳಿಸಿಕೊಡುತ್ತೇವೆ. ಇದು ಸೋವಿಯಾದ್ದರಿಂದ ಎಲ್ಲರಿಗೂ ಕೊಳ್ಳಲು ಸುಲಭ. ಕೊಳ್ಳುತ್ತಾರೆ ಸಹಿತ ! ಅದರಬದಲು,ಖಾದಿ ಎನ್ನುವ ಹೆಸರಿನಲ್ಲಿ ಬಟ್ಟೆಗಳ ಬೆಲೆ ದುಬಾರಿಯಾದರೆ ಯಾರೂ ಕೊಳ್ಳುವುದಿಲ್ಲ. ನೋಡಿ, ಬೇಕಾದರೆ. ” ನಿಮಗೆ ಬೇಕಾಗಿರುವುದು, ಸ್ವದೇಶಿ ಬಟ್ಟೆ ತಾನೇ. ಹಾಗಾದರೆ, ಹೊಸ ಹತ್ತಿಕಾರ್ಖಾನೆಗಳನ್ನು ತೆರೆಯಿರಿ ; ಹೆಚ್ಚಾಗಿ ಬಟ್ಟೆಉತ್ಪದಿಸಿ, ಅವನ್ನು ಖಾದಿಯೆಂದು ಮಾರಾಟಮಾಡಬಹುದಲ್ಲ “. ಈ ಮಾತಿನ ಸರಣಿ ಗಾಂಧಿಯವರಿಗೆ ಸಮ್ಮತವಾಗಲಿಲ್ಲ.

ಗಾಂಧಿಯವರ ಮನಸ್ಸಿನಲ್ಲಿದ್ದ ವಿಷಯ ವೆಂದರೆ,ನಮ್ಮ ಮಹಿಳೆಯರು, ನೂತು, ನೇಯ್ದ ಬಟ್ಟೆಗಳು ಹೆಚ್ಚು ಹೆಚ್ಚು ಮಾರಾಟವಾಗಬೇಕು. ಹಳ್ಳಿಯ ಈ ರೈತಸಮುದಾಯಕ್ಕೆ, ಬೇಸಾಯಮಾಡಲು ಸಾಧ್ಯವಾಗದ ಸಮಯದಲ್ಲಿ ಸ್ವಲ್ಪವಾದರೂ ಆರ್ಥಿಕಸಹಾಯವಾಗಬೇಕು ಎನ್ನುವ ವಿಚಾರ.